ETV Bharat / bharat

ವಾಜಪೇಯಿ ಅಗಲಿಕೆಗೆ ಎರಡು ವರ್ಷ... ಗಣ್ಯರಿಂದ ನಮನ - ಸದೈವ ಅಟಲ್

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯತಿಥಿ ಅಂಗವಾಗಿ ಬಿಜೆಪಿ ನಾಯಕರು ಗೌರವ ಸಲ್ಲಿಸಿದರು.

Atal Bihari Vajpaye
ವಾಜಪೇಯಿ ಅಗಲಿಕೆಗೆ ಎರಡು ವರ್ಷ
author img

By

Published : Aug 16, 2020, 12:39 PM IST

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳು ಸಂದಿವೆ. 2ನೇ ವರ್ಷದ ಪುಣ್ಯತಿಥಿ ಅಂಗವಾಗಿ ಬಿಜೆಪಿ ನಾಯಕರು ವಾಜಪೇಯಿ ಅವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ.

ವಾಜಪೇಯಿ ಅಗಲಿಕೆಗೆ ಎರಡು ವರ್ಷ...

ದೆಹಲಿಯ ಸದೈವ ಅಟಲ್​​ನ​​ಲ್ಲಿರುವ ವಾಜಪೇಯಿ ಅವರ ಸಮಾಧಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್​ ಅಟಲ್ ಜೀ ಗೆ ಗೌರವ ಸಲ್ಲಿಸಿದರು.

ವಾಜಪೇಯಿ ಸಮಾಧಿಗೆ ಬಿಜೆಪಿ ನಾಯಕರಿಂದ ಗೌರವ ಸಲ್ಲಿಕೆ

ವಾಜಪೇಯಿ ಅವರ ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಮತ್ತು ಮೊಮ್ಮಗಳು ನಿಹಾರಿಕಾ ಕೂಡ ಸಮಾಧಿಗೆ ನಮಿಸಿದರು.

Atal Bihari Vajpayee
ವಾಜಪೇಯಿ ಅವರ ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಮತ್ತು ಮೊಮ್ಮಗಳು ನಿಹಾರಿಕಾರಿಂದ ನಮನ

ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಲೋಕ ಭವನದಲ್ಲಿರುವ ವಾಜಪೇಯಿ ಸ್ಮಾರಕಕ್ಕೆ ವಂದಿಸಿದರು.

1924ರ ಡಿ.25 ರಂದು ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಜನಿಸಿದ ವಾಜಪೇಯಿ ಅವರು, ಬಿಜೆಪಿಯಿಂದ ಭಾರತದ ಪ್ರಧಾನಿಯಾದ ಮೊದಲ ವ್ಯಕ್ತಿ. 1996, 1998 ರಿಂದ 1999 ಹಾಗೂ 1999 ರಿಂದ 2004ರ ವರೆಗೆ ಮೂರು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

Atal Bihari Vajpayee
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ರಿಂದ ನಮನ

ರಾಜಕೀಯದ ಹೊರತಾಗಿ ವಾಜಪೇಯಿ ಒಬ್ಬ ಪ್ರಮುಖ ಬರಹಗಾರರಾಗಿದ್ದು, ಹಲವಾರು ಕವನಗಳನ್ನು ಬರೆದಿದ್ದಾರೆ. ಅನಾರೋಗ್ಯದ ಕಾರಣದಿಂದ 2004ರ ಬಳಿಕ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆಗೆ ದಾಖಲಾಗಿದ್ದರು.

Atal Bihari Vajpayee
ಅಟಲ್​ ಜೀ ಅವರ ರಾಜಕೀಯ ಹಾದಿ

2018 ರ ಆಗಸ್ಟ್ 16 ರಂದು ನಿಧನರಾದರು. ವಾಜಪೇಯಿ ಅವರ ಗೌರವಾರ್ಥವಾಗಿ ಅವರ ಜನ್ಮ ದಿನವಾದ ಡಿಸೆಂಬರ್ 25 ಅನ್ನು 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.