ನವದೆಹಲಿ: ದೇಶದ ಆರ್ಥಿಕತೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾದರೆ, ಬರಲಿರುವ ಸರ್ಕಾರ ನೂತನ ಭೂ ನೀತಿ ಹಾಗೂ ಕಾರ್ಮಿಕ ವಲಯದಲ್ಲಿ ಸುಧಾರಣೆ ತರಬೇಕಿದೆ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್ ಅವರು ಸಲಹೆ ನೀಡಿದ್ದಾರೆ.
ಅಸ್ಸೋಚಮ್ ಆಯೋಸಿದ್ದ ಕಾರ್ಯಕ್ರಮದಲ್ಲಿ ಮ್ಯೂಚುಯಲ್ ಖಾಸಗಿ ಹೂಡಿಕೆಯ ಕುರಿತು ಕಳವಳ ವ್ಯಕ್ತಪಡಿಸಿ ಮಾತನಾಡಿದ ಅವರು, ದೀರ್ಘಕಾಲಿನ ಆರ್ಥಿಕ ಬೆಳವಣಿಗೆ ಮುಂದುವರಿಸಿಕೊಂಡು ಹೋಗಬೇಕಾದರೆ ಹಣಕಾಸಿನ ವಿಚಾರವನ್ನು ಭವಿಷ್ಯದ ಸರ್ಕಾರ ಪ್ರಮುಖ ಧರ್ಮವಾಗಿ ತೆಗೆದುಕೊಳ್ಳಬೇಕು. ಬೃಹತ್ ಆರ್ಥಿಕತೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಇದರತ್ತ ಗಮನಹರಿಸಬೇಕು. ನೂತನ ಭೂ ನೀತಿ ಹಾಗೂ ಕಾರ್ಮಿಕ ವಲಯದಲ್ಲಿ ಸುಧಾರಣೆಗಳನ್ನು ಸವಾಲಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಭಾರತದ ಉನ್ನತ ಮಟ್ಟದ ಆರ್ಥಿಕ ಬೆಳವಣಿಗೆಗೆ ಬೃಹತ್ ಗಾತ್ರದ ಆರ್ಥಿಕತೆಯೇ ಜೀವಾಳ. ಇದರಲ್ಲಿ ಸ್ಥಿರತೆ ಇರಬೇಕು. ಉತ್ಪಾದನೆ, ಕಾರ್ಮಿಕರು, ಭೂಮಿ ಮತ್ತು ಬಂಡವಾಳ ಕೇಂದ್ರೀತ ಉತ್ಪಾದನೆಯಲ್ಲಿ ಯಶಸ್ಸು ಸಾಧಿಸಿಲು ನಮಗೆ ಸಾಧ್ಯವಾಗಿಲ್ಲ ಎಂದರು.
ಕಾರ್ಮಿಕರ ಸಂಬಂಧಿಸಿದ ಕಾನೂನುಗಳು ಜಟಿಲವಾಗಿವೆ ಮತ್ತು ದೀರ್ಘಕಾಲಿನ ಒಪ್ಪಂದದಿಂದ ಕೂಡಿವೆ. ವಿವಾದಿತ ಕಾನೂನುಗಳಲ್ಲಿನ ಸಮಸ್ಯೆಗಳನ್ನು ಮರುಪರಿಶೀಲಿಸಿ ಪರಿಹಾರ ಕಂಡುಕೊಂಡು ಸುಧಾರಣೆ ತರುವುದು ಅಗತ್ಯವಾಗಿದೆ ಎಂದು ಸಿಂಗ್ ನುಡಿದರು.