ಪೂರ್ವ ಗೋದಾವರಿ (ಆಂಧ್ರಪ್ರದೇಶ): ಪೊಲೀಸ್ ವ್ಯವಸ್ಥೆ ಬಗ್ಗೆ ಆಡಳಿತ ಪಕ್ಷ ವೈಎಸ್ಆರ್ಸಿಪಿ ಕಾಂಗ್ರೆಸ್ ಮುಖಂಡನೋರ್ವ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಮಹಿಳಾ ಸರ್ಕಲ್ ಇನ್ಸ್ಪೆಕ್ಟರ್ ತಕ್ಕ ಪ್ರತ್ಯುತ್ತರ ಕೊಟ್ಟರು. ಈ ಘಟನೆ ಪೂರ್ವ ಗೋದಾವರಿಯ ಕಪಿಲೇಶ್ವರ ಮಂಡಲದ ತಥಪುಡಿಯಲ್ಲಿ ನಡೆದಿದೆ.
ಓದಿ: 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ 25,800 ಸ್ವಯಂ ಸೇವಕರ ನೇಮಕ: ಭಾರತ್ ಬಯೋಟೆಕ್
ಕಾಪು ಚಳವಳಿ ಸಮಯದಲ್ಲಿ ಕೇವಲ ಒಂದು ಸಮಾಜದ ಗುಂಪಿನ ಮೇಲೆ ಪ್ರಕರಣ ದಾಖಲಾಗಿವೆ ಎಂದು ಉಲ್ಲೇಖಿಸಿ ಪೊಲೀಸ್ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ತಕ್ಷಣವೇ ಮಂದಪೇಟ ಗ್ರಾಮೀಣ ಪೊಲೀಸ್ ಇಲಾಖೆ ಸರ್ಕಲ್ ಇನ್ಸ್ಪೆಕ್ಟರ್ ಮಂಗದೇವಿ ರಾಜಕೀಯ ಮುಖಂಡರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಅದರಲ್ಲಿ ಕೆಟ್ಟದಾಗಿ ನಡೆದುಕೊಂಡಿರುವ ಅಧಿಕಾರಿಗಳನ್ನು ಮಾತ್ರ ಟೀಕಿಸಿ ಎಂದು ತಿಳಿಸಿದ್ದಾರೆ.