ಸಾಹಿಬ್ಗಂಜ್(ಜಾರ್ಖಂಡ್): ಸೋಮವಾರ ರಾತ್ರಿ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ 20 ಯೋಧರು ಹುತಾತ್ಮರಾಗಿದ್ದಾರೆ. ಅದರಲ್ಲಿ ಜಾರ್ಖಂಡನ್ 26 ವರ್ಷದ ಯೋಧ ಕುಂದನ್ ಕುಮಾರ್ ಓಜಾ ಕೂಡ ಒಬ್ಬರು. ಕಳೆದ 17 ದಿನಗಳ ಹಿಂದೆ ತಂದೆಯಾಗಿದ್ದ ಇವರು ಪುಟ್ಟ ಮಗುವಿನ ಮುಖ ನೋಡದೇ ವೀರ ಮರಣವನ್ನಪ್ಪಿದ್ದಾರೆ.
ಬಿಹಾರ್ ರೆಜಿಮೆಂಟ್ನ ಕುಂದನ್ ಕುಮಾರ್ ಕೇವಲ 26 ವರ್ಷದ ಯೋಧ. ಇವರ ಪತ್ನಿ ನಮಿತಾ ದೇವಿ ಕಳೆದ 17 ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಮಾತನಾಡಿದ್ದ ಕುಂದನ್, ಆದಷ್ಟು ಬೇಗ ಮಗಳ ಮುಖ ನೋಡಲು ಊರಿಗೆ ಬರುವೆ ಎಂದು ಫೋನ್ನಲ್ಲಿ ಹೇಳಿದ್ದರು. ಆದರೆ ಅವರ ಇದೀಗ ದೇಶಕ್ಕಾಗಿ ವೀರ ಮರಣವನ್ನಪ್ಪಿದ್ದಾರೆ.
ಅತ್ತಿಗೆ ನೋಡಲು ಆದಷ್ಟು ಬೇಗ ಬರುತ್ತೇನೆ ಎಂದಿದ್ದ ಪಂಜಾಬ್ ಯೋಧ ಹುತಾತ್ಮ!
ಕುಂದನ್ ಕುಮಾರ್ ಓಜಾ ಅವರ ತಂದೆ ರವಿಶಂಕರ್ ಓಜಾ ಕೃಷಿಕರಾಗಿದ್ದು, ಕುಂದನ್ 2011ರಲ್ಲಿ ಬಿಹಾರ ರೆಜಿಮೆಂಟ್ ಕತಿಹಾರ್ಗೆ ನಿಯೋಜನೆಗೊಂಡಿದ್ದು, 2018ರಲ್ಲೇ ಇವರು ಮದುವೆ ಮಾಡಿಕೊಂಡಿದ್ದರು.
ಅವರ ಹುತಾತ್ಮರಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಹೋದರ ಕನ್ಹಯ್ಯ ಕುಮಾರ್, ನನ್ನ ಸಹೋದರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದು, ಅದರ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಕೂಡ ಭಾರತೀಯ ಸೇನೆ ಸೇರಿ ಕೊನೆ ಉಸಿರು ಇರುವವರೆಗೂ ಶತ್ರುಗಳ ವಿರುದ್ಧ ಹೋರಾಡುವೆ ಎಂದಿದ್ದಾರೆ.