ಹೈದರಾಬಾದ್: ಮನೆಯಲ್ಲಿದ್ದ ಹಣ ಕದ್ದ 17 ವರ್ಷದ ಬಾಲಕನೋರ್ವ ಕೆಟಿಎಂ ಬೈಕ್ ಖರೀದಿಸಿ ಬಳಿಕ ಅಪಘಾತ ಮಾಡಿ ಮತ್ತೊಬ್ಬರ ಸಾವಿಗೆ ಕಾರಣನಾಗಿದ್ದಾನೆ.
ಕಳೆದ ನಾಲ್ಕು ತಿಂಗಳ ಹಿಂದೆ ನಿಶಿತ್ ಎಂಬ ಬಾಲಕ ಬೇಗಂಪೇಟ್ನಲ್ಲಿರುವ ಕೆಟಿಎಂ ಬೈಕ್ ಶೋ ರೂಂನಲ್ಲಿ 2.20 ಲಕ್ಷ ಮೌಲ್ಯದ ಬೈಕ್ ಖರೀದಿಸಿದ್ದ. ಈ ಹಣವನ್ನ ಮನೆಯಲ್ಲಿ ಕದ್ದು ತಂದಿದ್ದ ಎಂದು ತಿಳಿದುಬಂದಿದೆ. ಬೈಕ್ ತೆಗೆದುಕೊಳ್ಳುವಾಗ ತನ್ನ ಸಹೋದರನ ದಾಖಲೆಗಳನನ್ನ ನೀಡಿದ್ದ ಎಂದು ಹೇಳಲಾಗುತ್ತಿದೆ.
ಒಂದು ವಾರದ ಹಿಂದೆ ಈ ಬಾಲಕ ಅಪಘಾತ ಮಾಡಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ. ಇದೀಗ ಬಾಲಕನ ಪೋಷಕರು ಬೈಕ್ ಶೋರೂಂ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಅಪ್ರಾಪ್ತನಿಗೆ ಬೈಕ್ ನೀಡಿದ್ದಕ್ಕೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಶೋರೂಂ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.