ನವದೆಹಲಿ: ಇಡೀ ದೇಶವೇ ರಾಮ ಮಂದಿರ ನಿರ್ಮಾಣದ ಕುರಿತು ಸಂತೋಷ ವ್ಯಕ್ತಪಡಿಸಿದೆ. ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ಆದರೆ, ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ತನ್ನನ್ನು ರಾಮನ ವಂಶಸ್ಥರೆಂದು ಬಣ್ಣಿಸುವ ರಾಜ ರಾಜೇಂದ್ರ ಸಿಂಗ್, ರಾಮ ಜನ್ಮಭೂಮಿಯ ಪೂಜೆಯ ಕುರಿತು ಕ್ಷತ್ರಿಯ ಸಮಾಜದ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ ರಾಜೇಂದ್ರ ಸಿಂಗ್ ಮೋದಿಯನ್ನು ಔರಂಗಜೇಬ್ಗೆ ಹೋಲಿಸಿದರು. ಔರಂಗಜೇಬ್ ಕ್ಷತ್ರಿಯರನ್ನು ನಿರ್ಲಕ್ಷಿಸಿದಂತೆ ಮೋದಿ ಸರ್ಕಾರವೂ ಕ್ಷತ್ರಿಯರನ್ನು ನಿರ್ಲಕ್ಷಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.