ETV Bharat / bharat

ಡ್ರಗ್ಸ್​ ಪ್ರಕರಣ: ಇಡಿ ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಬಂದ ಕೇರಳ ಸಿಪಿಐ ನಾಯಕನ ಪುತ್ರ - ಬಿನೀಶ್ ಕೊಡಿಯೇರಿ ಬೆಂಗಳೂರಿಗೆ ಪ್ರಯಾಣ

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕೇರಳ ಸಿಪಿಐ-ಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಮಗ ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

kodiyeris-son-leaves-for-bluru-to-appear-before-ed
ಇಡಿ ವಿಚಾರಣೆ:
author img

By

Published : Oct 5, 2020, 4:25 PM IST

ತಿರುವನಂತಪುರಂ: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಗುರಿಯಾಗಿರುವ ಕೇರಳ ಸಿಪಿಐ-ಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ, ನಾಳೆ 2ನೇ ಸುತ್ತಿನ ವಿಚಾರಣೆ ಇರುವುದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಲು ಇಂದು ತಿರುವನಂತಪುರಂ ನಿಂದ ಬೆಂಗಳೂರಿಗೆ ಬಂದಿದ್ದಾರೆ.

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಿನೀಶ್ ಅವರ ಸಹೋದರ ಬಿನೊಯ್ ಮತ್ತು ಸ್ನೇಹಿತನ ಜೊತೆ ಕಾಣಿಸಿಕೊಂಡಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಇಡಿ ಕಚೇರಿಯಲ್ಲಿ ಬಿನೇಶ್ ವಿಚಾರಣೆ ತುಂಬಾ ನಿರ್ಣಾಯಕವಾಗಿರುವುದರಿಂದ ಕೇರಳದ ಆಡಳಿತಾರೂಢ ಸಿಪಿಐ-ಎಂಗೆ ಟೆನ್ಷನ್​ ಹೆಚ್ಚಾಗಿದೆ.

ಕಳೆದ ತಿಂಗಳು, ಪಿಎಂಎಲ್​​ಎ -(Prevention of Money Laundering Act)ಇಡಿ ಅಧಿಕಾರಿಗಳು ಅವರಿಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನೋಟಿಸ್ ನೀಡಿ ಅವರ ಆಸ್ತಿಗಳ ವಿವರ ನೀಡುವಂತೆ ಕೇಳಿತ್ತು.

ಕೇರಳದ ಯುವಕ ಅನೂಪ್ ಮೊಹಮ್ಮದ್ ನನ್ನುಬೆಂಗಳೂರಿನ ಮಾದಕ ವಸ್ತುಗಳ ನಿಗ್ರಹ ಪಡೆ (ಎನ್‌ಸಿಬಿ) ವಶಕ್ಕೆ ಪಡೆದ ವೇಳೆ ಬಿನೀಶ್ ಹೆಸರು ಕೇಳಿಬಂದಿತ್ತು. ಬಿನೀಶ್ ಮತ್ತು ಅನೂಪ್ ಸ್ನೇಹಿತರಾಗಿದ್ದು, ಬೆಂಗಳೂರಿನಿಂದ ಮನೆಗೆ ಮರಳಲು ಅನೂಪ್‌ಗೆ ಬಿನೀಶ್ ಒಂದು ಬಾರಿ ಆರು ಲಕ್ಷ ರೂ. ಮತ್ತು ಇನ್ನೊಂದು ಬಾರಿ 15 ಸಾವಿರ ರೂ.ಗಳ ಸಾಲ ನೀಡಿದ್ದರು. ಇದಾದ ನಂತರ, ಬಿನೀಶ್ ತನ್ನ ಸ್ನೇಹಿತರು ಮತ್ತು ಆಪ್ತರೊಂದಿಗೆ ನಡೆಸಿರುವ ವ್ಯವಹಾರದ ಬಗ್ಗೆ ಹೆಚ್ಚಿನ ವರದಿಗಳು ಹೊರಬಿದ್ದವು.

ಕೊಚ್ಚಿಯ ಇಡಿ ಅಧಿಕಾರಿಗಳ ವಿಚಾರಣೆಯ ಸುಮಾರು ಒಂದು ತಿಂಗಳ ನಂತರ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ಟೋಬರ್​ ನಲ್ಲಿ ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದರು. ಜೊತೆಗೆ 2ನೇ ಸುತ್ತಿನ ವಿಚಾರಣೆಗೂ ಮುನ್ನ ಕೋವಿಡ್​-ಟೆಸ್ಟ್​ಗೆ ಒಳಗಾಗುವಂತೆ ಇಡಿ ಸೂಚಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.