ETV Bharat / bharat

ದೇಶಕ್ಕೇ ಭೀತಿ ಹುಟ್ಟಿಸಿದ ಮುಸ್ಲಿಂ ಧಾರ್ಮಿಕ ಸಭೆ...  ಏನಿದು ತಬ್ಲೀಘಿ ಜಮಾತ್​? - ಮುಹಮ್ಮದ್ ಇಲಿಯಾಸ್ ಅಲ್​-ಕಂಧಲಾವಿ

ತಬ್ಲೀಘಿ ಜಮಾತ್​ ಬಗ್ಗೆ ಈಗ ಎಲ್ಲರ ಕಣ್ಣು ನೆಟ್ಟಿದೆ. ದೆಹಲಿಯಲ್ಲಿ ಈ ಸಂಘಟನೆಯ ಸಮಾವೇಶ ನಡೆದ ನಂತರ ಇದರಲ್ಲಿ ಪಾಲ್ಗೊಂಡಿದ್ದ ಅನೇಕರಿಗೆ ಕೋವಿಡ್​ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ದೇಶಾದ್ಯಂತ ಆತಂಕ ಮೂಡಿಸಿದೆ. ಈ ತಬ್ಲೀಘಿ ಜಮಾತ್​ ಎಂದರೇನು ಎಂಬ ಇಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

Tablighi Jamaat
Tablighi Jamaat
author img

By

Published : Apr 1, 2020, 1:24 PM IST

ಹೈದರಾಬಾದ್: ದೆಹಲಿಯ ನಿಜಾಮುದ್ದೀನ್​ ಪ್ರದೇಶದ ಮಸೀದಿಯೊಂದರಲ್ಲಿ ನಡೆದ, 2000 ಜನ ಭಾಗವಹಿಸಿದ್ದ ಮುಸ್ಲಿಂ ಧಾರ್ಮಿಕ ಸಮಾವೇಶದ ಕಾರಣದಿಂದ ಭಾರತದಲ್ಲಿ ಕೋವಿಡ್​-19 ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಬ್ಲೀಘಿ ಜಮಾತ್​ ಎಂದು ಕರೆಯಲಾದ ಈ ಧಾರ್ಮಿಕ ಸಮಾವೇಶದ ಬಗೆಗಿನ ಕುತೂಹಲಕಾರಿ ವಿಷಯಗಳು ಇಲ್ಲಿವೆ.

ತಬ್ಲೀಘಿ ಜಮಾತ್​ (ಶಾಂತಿ ಪ್ರಚಾರಕ ಸಮಾಜ) ಇದೊಂದು ಸುನ್ನಿ ಮುಸ್ಲಿಂ, ಲಾಭ ರಹಿತ ಸಮಾಜ ಸೇವಾ ಸಂಘಟನೆಯಾಗಿದೆ. ಈ ಜಮಾತ್​ ಚಳವಳಿಯನ್ನು 1927 ರಲ್ಲಿ ಮುಹಮ್ಮದ್ ಇಲಿಯಾಸ್ ಅಲ್​-ಕಂಧಲಾವಿ ಎಂಬುವರು ಆರಂಭಿಸಿದರು. 2010 ರಷ್ಟೊತ್ತಿಗೆ ದೇಶ-ವಿದೇಶಗಳಲ್ಲಿ 80 ಮಿಲಿಯನ್​ಗೂ ಅಧಿಕ ಜನ ಇದರ ಅನುಯಾಯಿಗಳಾಗಿ ಗುರುತಿಸಿಕೊಂಡರು. ಇಸ್ಲಾಂ ಧರ್ಮದ 'ಸುವರ್ಣ ಯುಗ'ವನ್ನು ಮರಳಿ ಸ್ಥಾಪಿಸುವುದು ತಬ್ಲೀಘಿ ಜಮಾತ್​ನ ಮುಖ್ಯ ಗುರಿಯಾಗಿದೆ. ಸಾಮಾನ್ಯ ಮುಸ್ಲಿಮರಿಗೆ ಆಮಂತ್ರಣ (ತಬ್ಲೀಘ್) ನೀಡುವ ಮೂಲಕ ಇಸ್ಲಾಂನ ಆರು ಪ್ರಮುಖ ಅಡಿಪಾಯಗಳಡಿಯಲ್ಲಿ ಪ್ರವಾದಿ ಮಹಮ್ಮದ್ ಅವರು ಹೇಳಿದಂತೆ ಇಸ್ಲಾಂ (ಖಿಲಾಫತ್) 'ಸುವರ್ಣ ಯುಗ' ವನ್ನು ಸ್ಥಾಪಿಸುವುದು ತಬ್ಲೀಘಿ ಜಮಾತ್​ನ ಉದ್ದೇಶ ಎಂದು ಜಾರ್ಜ್​ಟೌನ್​ ವಿವಿಯ ಬರ್ಕಲೇ ಸೆಂಟರ್​ ಪ್ರಕಟಿಸಿದ ವರದಿಯೊಂದರಲ್ಲಿ ಹೇಳಲಾಗಿದೆ.

ಮೂಲ ಸುನ್ನಿ ಇಸ್ಲಾಂನ ಆಚಾರ, ವಿಚಾರ, ವೇಷಭೂಷಣ, ನಡವಳಿಕೆಗಳ ಬಗ್ಗೆ ತಬ್ಲೀಘಿ ತನ್ನ ಗಮನ ಕೇಂದ್ರೀಕರಿಸಿದೆ. ತಬ್ಲೀಘಿ ಜಮಾತ್ ಇದು 20 ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಧಾರ್ಮಿಕ ಚಳವಳಿಗಳಲ್ಲೊಂದಾಗಿ ಗುರುತಿಸಲ್ಪಟ್ಟಿದೆ.

ಈ ಸಮಾಜದ ಧರ್ಮ ಪ್ರಚಾರಕರು 40 ದಿನಗಳ ಕಾಲ ತಮ್ಮ ನೆರೆಹೊರೆಯವರೊಂದಿಗೆ ಸಂವಾದ ನಡೆಸುತ್ತಾರೆ, ಅವರನ್ನು ಮಸೀದಿಯಲ್ಲಿ ನಡೆಯುವ ನಮಾಜ್​ ಹಾಗೂ ಪ್ರವಚನಗಳಿಗೆ ಆಹ್ವಾನಿಸುತ್ತಾರೆ. ಅಲ್ಪಾವಧಿಯ ಪ್ರವಚನ ಮಾಲೆಗಳಿಗೆ ಹಾಜರಾಗುವಂತೆ ಅನುಯಾಯಿಗಳನ್ನು ಆಹ್ವಾನಿಸಲಾಗುತ್ತದೆ. ಇದನ್ನು ಖುರುಜ್ ಎಂದು ಕರೆಯಲಾಗಿದ್ದು, ಈ ಅವಧಿ ಕೆಲ ದಿನಗಳಿಂದ ಹಿಡಿದು ಕೆಲವು ತಿಂಗಳುಗಳವರೆಗೂ ಮುಂದುವರೆಯಬಹುದು.

ಈಗ ಕೆಲ ದಿನಗಳ ಹಿಂದೆ ದೆಹಲಿಯ ನಿಜಾಮುದ್ದೀನ್​ ಪ್ರದೇಶದಲ್ಲಿ ನಡೆದ ತಬ್ಲೀಘಿ ಜಮಾತ್ ಸಮಾವೇಶದ ನಂತರ ಲಾಕ್​ಡೌನ್​ ಕಾರಣದಿಂದ ಅಲ್ಲಿ ನೆರೆದಿದ್ದವರೆಲ್ಲ ಅಲ್ಲಿಯೇ ಉಳಿದುಕೊಂಡರು. ಇನ್ನು ಕೆಲವರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿ ಕೋವಿಡ್​ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾದರು. ಈ ಸಮಾವೇಶದಲ್ಲಿ ಪಾಲ್ಗೊಂಡು ತೆಲಂಗಾಣದ ಕರೀಮನಗರಕ್ಕೆ ಹಾಗೂ ತಮಿಳುನಾಡಿನ ಈರೋಡ್​ ಜಿಲ್ಲೆಗೆ ಹೋದ ಇಂಡೋನೇಶಿಯಾದವರೇ ಅಲ್ಲೆಲ್ಲ ಕೋವಿಡ್​ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾದರು ಎಂಬುದು ಬೆಳಕಿಗೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.