ETV Bharat / bharat

ನಾಲಿಗೆ ಹರಿಬಿಟ್ಟಿದ್ದಕ್ಕೆ ಭಾರಿ ವಿರೋಧ.. ಇಕ್ಕಟ್ಟಿಗೆ ಸಿಲುಕಿದ ಮಧ್ಯಪ್ರದೇಶದ ಮಾಜಿ ಸಿಎಂ

author img

By

Published : Oct 20, 2020, 3:49 PM IST

ಮಧ್ಯಪ್ರದೇಶದ 28 ಕ್ಷೇತ್ರಗಳ ಉಪ ಚುನಾವಣಾ ಸಂದರ್ಭದಲ್ಲಿ ಇಮಾರ್ತಿ ದೇವಿ ವಿರುದ್ಧ ನೀಡಿದ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿದ್ದು, ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.

Kamal Nath
ಮಧ್ಯಪ್ರದೇಶದ ಮಾಜಿ ಸಿಎಂ

ಭೋಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್ ಇತ್ತೀಚೆಗೆ ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕುತ್ತಲೇ ಇದ್ದಾರೆ. ಇದೀಗ ಬಿಜೆಪಿ ನಾಯಕಿ ಇಮಾರ್ತಿ ದೇವಿಯವರಿಗೆ ‘ಐಟಂ’ ಅನ್ನೋ ಪದ ಬಳಸುವ ಮೂಲಕ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ.

ಈ ಪದ ಬಳಕೆ ಬಗ್ಗೆ ಪ್ರತಿಕ್ರಿಯಿಸಿರುವ ಇಮಾರ್ತಿ ದೇವಿ, ಕಮಲ್​ನಾಥ್​​​​​​ನನ್ನು ನನ್ನ ಹಿರಿಯ ಸಹೋದರ ಎಂದುಕೊಂಡಿದ್ದೆ, ಆದರೆ ಅವರು ನನ್ನ ಬಗ್ಗೆ ಅಗೌರವದ ಮಾತನ್ನಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪರಿಶೀಲಿಸಿ ಕಮಲ್​ನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ಕಮಲ್​ನಾಥ್​​ ಅವರ ಈ ಹೇಳಿಕೆ ಕಾಂಗ್ರೆಸ್​ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ. ಕಮಲ್​ ಅವರ ಈ ಮಾತಿಗೆ ಸಿಎಂ ಶಿವರಾಜ್​ ಸಿಂಗ್ ಚೌಹಾಣ್ ವಿರೋಧ ವ್ಯಕ್ತಪಡಿಸಿದ್ದು, ನಿನ್ನೆ ಮೌನವ್ರತ ಮಾಡಿದ್ದರು.

ಉಪಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್​ನ ಈ ಹೇಳಿಕೆಯ ರಾಜಕೀಯ ಲಾಭವನ್ನ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಗ್ವಾಲಿಯರ್ ಹಾಗೂ ಚಂಬಲ್ ಪ್ರದೇಶದಲ್ಲಿ ಹೆಚ್ಚಾಗಿ ದಲಿತ ಸಮುದಾಯವರಿದ್ದಾರೆ. ಕಮಲ್​ ಅವರ ಈ ಮಾತು ದಲಿತ ಮಹಿಳೆಗೆ ಅವಮಾನ ಎಂದು ಹೇಳಿರುವ ಬಿಜೆಪಿ, ದಲಿತ ಮತಗಳನ್ನ ಪಡೆಯಲು ದಾರಿ ಮಾಡಿಕೊಂಡಿದೆ. ಅಲ್ಲದೆ ಬಿಎಸ್​ಪಿ ನಾಯಕಿ ಮಾಯಾವತಿ ಕೂಡ ಕಮಲ್​ನಾಥ್ ಹೇಳಿಕೆ ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಹೇಳಿಕೆ. ಕಾಂಗ್ರೆಸ್ ಹೈಕಮಾಂಡ್ ಸಾರ್ವಜನಿಕವಾಗಿ ಇಮಾರ್ತಿ ಅವರ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಮತ್ತೆ ಅಧಿಕಾರಕ್ಕೇರುವ ಕನಸು ಕಂಡಿದ್ದ ಕಮಲ್​ನಾಥ್​ಗೆ ಈ ಪದಬಳಕೆ ಮತ್ತಷ್ಟು ಹಿನ್ನಡೆಯನ್ನುಂಟು ಮಾಡಿದೆ. ಇಡೀ ದಲಿತ ಸಮುದಾಯ ಮಾಜಿ ಸಿಎಂ ವಿರುದ್ಧ ತಿರುಗಿ ಬಿದ್ದಿದ್ದು, ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮ್ಮ ಪಕ್ಷದ ನಾಯಕರೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ತಪ್ಪು ಎಂದಿದ್ದಾರೆ.

ತಾವಾಡಿರುವ ಮಾತಿಗೆ ಸ್ಪಷ್ಟನೆ ನೀಡಿರುವ ಕಮಲ್​ನಾಥ್, ನಾನು ಹೇಳಿಕೆ ನೀಡಿದ ಸಂದರ್ಭದ ಬಗ್ಗೆ ವಿವರಿಸಿದ್ದೇನೆ. ಯಾರನ್ನೂ ಅವಮಾನಿಸುವ ಉದ್ದೇಶ ನನ್ನದಾಗಿಲ್ಲದಿದ್ದಾಗ ನಾನ್ಯಾಕೆ ಕ್ಷಮೆಯಾಚಿಸಬೇಕು, ನನ್ನ ಮಾತಿಂದ ಯಾರಿಗಾದರೂ ಅವಮಾನವಾಗಿದ್ದರೆ, ನಾನಿಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.