ETV Bharat / bharat

ಪೆಟ್ರೋಲ್​ ಬಂಕ್​ ಬಂದ್​ ಎಂಬ ಗಾಳಿ ಸುದ್ದಿ... ಪೆಟ್ರೋಲ್​,ಡಿಸೇಲ್​ ತುಂಬಿಸಿಕೊಳ್ಳಲು ಮುಗಿಬಿದ್ದ ಸವಾರರು!

author img

By

Published : Mar 18, 2020, 1:37 AM IST

ಮಹಾಮಾರಿ ಕೊರೊನಾ ಭೀತಿಗೆ ಈಗಾಗಲೇ ಕಲಬುರಗಿ ತತ್ತರಿಸಿ ಹೋಗಿದ್ದು, ಇದರ ಮಧ್ಯೆ ಎದ್ದಿರುವ ಗಾಳಿ ಸುದ್ದಿಯಿಂದ ವಾಹನ ಸವಾರರು ತಡರಾತ್ರಿ ಪೆಟ್ರೋಲ್​ ಬಂಕ್​ ಮುಂದೆ ಕ್ಯೂ ನಿಂತಿರುವ ಘಟನೆ ನಡೆದಿದೆ.

corona virus
corona virus

ಕಲಬುರಗಿ: ಮಹಾಮಾರಿ ಕೊರೊನಾ ಭೀತಿಯಿಂದಾಗಿ ಈಗಾಗಲೇ ಎಲ್ಲ ಮಾಲ್​,ಸಿನಿಮಾ ಹಾಲ್​, ಕೆಲವೊಂದು ಮಾರುಕಟ್ಟೆ ಸೇರಿದಂತೆ ಪ್ರಮುಖ ಕ್ಷೇತ್ರದ ವ್ಯಾಪಾರ ಸಂಪೂರ್ಣವಾಗಿ ಬಂದ್​ ಆಗಿದೆ. ಇದರ ಬೆನ್ನಲ್ಲೇ ಹೊರಬಿದ್ದ ಗಾಳಿ ಸುದ್ದಿ ನಂಬಿ ವಾಹನ ಸವಾರರು ಪೆಟ್ರೋಲ್​ ತುಂಬಿಸಿಕೊಳ್ಳಲು ಮುಗಿಬಿದಿದ್ದಾರೆ.

ಪೆಟ್ರೋಲ್​,ಡಿಸೇಲ್​ ತುಂಬಿಸಿಕೊಳ್ಳಲು ಮುಗಿಬಿದ್ದ ಸವಾರರು!

ಇಂದಿನಿಂದ ಕಲಬುರಗಿಯಲ್ಲಿ ಎಂಟು ದಿನಗಳ ಕಾಲ ಪೆಟ್ರೋಲ್​ ಬಂಕ್​ ಬಂದ್​ ಇರಲಿವೆ ಎಂಬ ಗಾಳಿ ಸುದ್ದಿಯಿಂದ ಗಾಬರಿಯಾದ ವಾಹನ ಸವಾರರು ರಾತ್ರೋರಾತ್ರಿ ಪೆಟ್ರೋಲ್​ ಬಂಕ್​ಗಳಿಗೆ ಮುಗಿಬಿದ್ದಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಂದಿನ ಎಂಟು ದಿನಗಳ ಕಾಲ ಬಂಕ್​ ಸಂಪೂರ್ಣವಾಗಿ ಬಂದ್​ ಇರಲಿವೆ ಎಂಬ ಸುದ್ದಿ ವಾಟ್ಸಪ್​​ನಲ್ಲಿ ಹರಿದಾಡಿತ್ತು. ಇದರಿಂದ ವಾಹನ ಸವಾರರು ರಾತ್ರೋರಾತ್ರಿ ಪೆಟ್ರೋಲ್​, ಡಿಸೇಲ್​ ತುಂಬಿಸಿಕೊಳ್ಳಲು ಬೈಕ್​, ಕಾರ್​​ ತ ಎಗೆದುಕೊಂಡು ಬಂಕ್​ಗಳ ಮುಂದೆ ದೌಡಾಯಿಸಿದ್ದಾರೆ.

ಸವಾರರು ಏಕಾಏಕಿ ಮುಗಿಬಿದ್ದ ಕಾರಣ, ಸುಮಾರು ದೂರದವರೆಗೆ ವಾಹನಗಳು ಸರದಿ-ಸಾಲಿನಲ್ಲಿ ನಿಂತಿದ್ದವು. ಈ ವೇಳೆ ಪೆಟ್ರೋಲ್ ಬಂಕ್​ ಸಿಬ್ಬಂದಿ ಮಾಹಿತಿ ನೀಡಿದರೂ ಅವರ ಮಾತಿಗೆ ಕಿವಿಗೊಡದ ಸವಾರರು ತೈಲ ತುಂಬಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಪೆಟ್ರೋಲ್​ ಪಂಪ್​ ಬಂದ್​ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳು ಯಾವುದೇ ಮಾಹಿತಿ ಹೊರಹಾಕಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.