ನವದೆಹಲಿ: ಕೆಕೆ ವೇಣುಗೋಪಾಲ್ ಭಾರತದ ಅಟಾರ್ನಿ ಜನರಲ್ ಆಗಿ ಒಂದು ವರ್ಷದ ಅವಧಿಗೆ ಮರು ನೇಮಕಗೊಂಡಿದ್ದಾರೆ. ಅವರ 3 ವರ್ಷಗಳ ಅವಧಿ ಜೂನ್ 30 ಕೊನೆಗೊಂಡಿತ್ತು.
ಹಿರಿಯ ವಕೀಲರಾದ ಶ್ರೀ ಕೆ.ಕೆ.ವೇಣುಗೋಪಾಲ್ ಅವರನ್ನು ಭಾರತದ ಅಟಾರ್ನಿ ಜನರಲ್ ಆಗಿ ಒಂದು ವರ್ಷದ ಅವಧಿಗೆ ಮರು ನೇಮಕ ಮಾಡಲು ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದಾರೆ. ಜುಲೈ 1, 2020 ರಿಂದ ಅವರ ಅಧಿಕಾರಾವಧಿ ಆರಂಭವಾಗಲಿದೆ.
ತುಷಾರ್ ಮೆಹ್ತಾ ಅವರನ್ನು 3 ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಮತ್ತೆ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿದುಬಂದಿದೆ. ಹಿರಿಯ ವಕೀಲ ಚೇತನ್ ಶರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಆಗಿ ನೇಮಕ ಮಾಡಲಾಗಿದೆ.
ಕೇಂದ್ರ ಸಚಿವ ಸಂಪುಟ ನೇಮಕ ಸಮಿತಿ ಸುಪ್ರೀಂಕೋರ್ಟ್‌ನಲ್ಲಿರುವ ಐದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ)ರನ್ನು ಇನ್ನೂ 3 ವರ್ಷಗಳ ಕಾಲ ಮರು ನೇಮಕ ಮಾಡಿದೆ.
ಇದರ ಜೊತೆಗೆ ಸಮಿತಿ ಹೈಕೋರ್ಟ್‌ಗೆ ಐದು ಹೆಚ್ಚುವರಿ ಎಎಸ್ಜಿಗಳನ್ನು ಮೂರು ವರ್ಷದ ಅವಧಿಗೆ ನೇಮಕ ಮಾಡಿದೆ. ಕೋಲ್ಕತ್ತಾ ಹೈಕೋರ್ಟ್‌ಗೆ ಯೆಜ್ಡೆಜಾರ್ಡ್ ಜೆಹಂಗೀರ್ ದಸ್ತೂರ್, ದೆಹಲಿ ಹೈಕೋರ್ಟ್‌ಗೆ ಚೇತನ್ ಶರ್ಮಾ, ಮದ್ರಾಸ್ ಹೈಕೋರ್ಟ್‌ಗೆ ಆರ್.ಶಂಕರನಾರಾಯಣನ್, ಪಾಟ್ನಾ ಹೈಕೋರ್ಟ್‌ಗೆ ಡಾ.ಕೃಷ್ಣ ನಂದನ್ ಸಿಂಗ್ ಮತ್ತು ಗುಜರಾತ್ ಹೈಕೋರ್ಟ್‌ಗೆ ದೇವಾಂಗ್ ಗಿರೀಶ್ ವ್ಯಾಸ್ ಎಸ್ಜಿಗಳಾಗಿ ನೇಮಕಗೊಂಡಿದ್ದಾರೆ.