ETV Bharat / bharat

ನಿತೀಶ್​ ಕುಮಾರ್​ ರಾಜೀನಾಮೆಗೆ ಆಗ್ರಹಿಸಿದ ಮಾಜಿ ಆಪ್ತ ಪ್ರಶಾಂತ್ ಕಿಶೋರ್​

author img

By

Published : Mar 30, 2020, 5:08 PM IST

Updated : Mar 30, 2020, 5:37 PM IST

ಲಾಕ್​ಡೌನ್​​ ಘೋಷಣೆಯಾದ ಬಳಿಕ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ಬಿಹಾರಕ್ಕೆ ಆಗಮಿಸುತ್ತಿದ್ದರು. ಹೀಗೆ ಬಂದ ಅವರನ್ನು ಸರ್ಕಾರ ಹೋಂ​ ಕ್ವಾರಂಟೈನ್​​ ಎಂದು ಹೇಳಿ ಒಂದು ಕಡೆ ಕೂಡಿ ಹಾಕಿದೆ. ಅಲ್ಲದೇ ಕೆಲವರನ್ನು ಬಲವಂತವಾಗಿ ಅಲ್ಲಿಗೆ ಕರೆ ತರಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ನವದೆಹಲಿ : ಒಂದು ಕಾಲದಲ್ಲಿ ನಿತೀಶ್ ಕುಮಾರ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಪೋಲ್‌ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್ ಈಗ ಸ್ವತಃ ಬಿಹಾರ್ ಸಿಎಂ ವಿರುದ್ಧವೇ ಚಾಟಿ ಬೀಸಿದ್ದಾರೆ. ನಿತೀಶ್‌ಕುಮಾರ್‌ ರಾಜೀನಾಮೆ ನೀಡಬೇಕು ಎಂದು ಟ್ವೀಟ್​ ಮುಖಾಂತರ ಒತ್ತಾಯಿಸಿದ್ದಾರೆ. ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ನೋಡಿದ್ರೆ ಭಯಾನಕವಾಗಿದೆ. ಸರ್ಕಾರದ ನಿರ್ಧಾರಗಳಿಂದ ಜನರು ಭಾರೀ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಬೇರೆ ರಾಜ್ಯಗಳಿಂದ ಬಿಹಾರಕ್ಕೆ ಬಂದ ಜನರನ್ನು ಒಂದು ರೂಮಿನಲ್ಲಿ ಕ್ವಾರಂಟೈನ್​ ಎಂದು ಹೇಳಿ ಇಟ್ಟಿದ್ದಾರೆ. ಅಲ್ಲಿ ಅವರ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ಅಲ್ಲಿರುವ ಜನ ನಮ್ಮನ್ನು ಹೊರಗೆ ಬಿಡಿ ಎಂದು ಅಂಗಲಾಚುತ್ತಿದ್ದಾರೆ. ಇದು ನಿತೀಶ್‌ಕುಮಾರ್​​ ಅವರ ಕಣ್ಣಿಗೆ ಕಾಣುತ್ತಿಲ್ಲವೇ.. ಆ ಬಡವರ ಕೂಗು ನಿಮಗೆ ಕೇಳಿಸುತ್ತಿಲ್ಲವೇ.. ಎಂದು ತಮ್ಮ ಟ್ವೀಟ್​ನಲ್ಲಿ ವಿಡಿಯೋವೊಂದನ್ನ ಹಾಕಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.

  • .#Corona संक्रमण से लोगों को बचाने के सरकारी प्रयासों की एक और भयावह तस्वीर -

    भारी तकलीफ़ और मुसीबतों को झेलकर देश के कई हिस्सों से बिहार पहुँचने वाले गरीब लोगों के लिए #NitishKumar की #SocialDistancing और #Quarantine की ये व्यवस्था दिल दहलाने वाली है।#NitishMustQuit pic.twitter.com/ot3hygGRk7

    — Prashant Kishor (@PrashantKishor) March 29, 2020 " class="align-text-top noRightClick twitterSection" data=" ">

ಲಾಕ್​ಡೌನ್​​ ಘೋಷಣೆಯಾದ ಬಳಿಕ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ಬಿಹಾರಕ್ಕೆ ಆಗಮಿಸುತ್ತಿದ್ದರು. ಹೀಗೆ ಬಂದ ಅವರನ್ನು ಸರ್ಕಾರ ಹೋಂ​ ಕ್ವಾರಂಟೈನ್​​ ಎಂದು ಹೇಳಿ ಒಂದು ಕಡೆ ಕೂಡಿ ಹಾಕಿದೆ. ಅಲ್ಲದೇ ಕೆಲವರನ್ನು ಬಲವಂತವಾಗಿ ಅಲ್ಲಿಗೆ ಕರೆ ತರಲಾಗಿದೆ ಎಂದು ಹೇಳಲಾಗುತ್ತಿದೆ.

ಕೊರೊನಾ ವೈರಸ್​​ ಎದುರಿಸಲು ಸರ್ಕಾರ ತೆಗೆದುಕೊಂಡ ಇಂತಹ ಕ್ರಮಗಳನ್ನು ಅವರು ವಿರೋಧಿಸಿದ್ದಾರೆ. ಒಂದು ಕಾಲದಲ್ಲಿ ಕಿಶೋರ್​ ಅವರು ನಿತೀಶ್​ ಕುಮಾರ್​​ ಆಪ್ತರಾಗಿದ್ದರು. ಜೆಡಿಯೂ ಪಾರ್ಟಿಯ ಎರಡೇ ಪ್ರಮುಖ ವ್ಯಕ್ತಿ ಎಂದೇ ಕರೆಯಲಾಗುತಿತ್ತು. ಆದರೆ, ಜೆಡಿಯೂ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದ್ದನ್ನು, ಇವರು ವಿರೋಧಿಸಿದ್ದರು. ಬಳಿಕ ಕಿಶೋರ್​​ ಅವರನ್ನು ಪಕ್ಷದಿಂದ ಕೈಬಿಡಲಾಗಿದೆ.

Last Updated : Mar 30, 2020, 5:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.