ಲೇಹ್ (ಲಡಾಖ್) : ಕೇಂದ್ರಾಡಳಿತ ಪ್ರದೇಶದಲ್ಲಿ ಕ್ರೀಡಾ ಮೂಲಸೌಕರ್ಯಗಳ ನಿರ್ಮಾಣ ಪ್ರಾರಂಭಿಸಲು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಲಡಾಖ್ಗೆ ತೆರಳಿದ್ದಾರೆ.
ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಸ್ಥಳೀಯ ಸಂಸದ ಜಮಿಯಾಂಗ್ ತ್ಸೆರಿಂಗ್ ನಮ್‌ಗ್ಯಾಲ್ ಮತ್ತು ಇತರರೊಂದಿಗೆ ಚರ್ಚೆ ನಡೆಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ರಿಜಿಜು, "ಕೆಲವು ಪ್ರಮುಖ ಕ್ರೀಡಾ ಮೂಲಸೌಕರ್ಯಗಳ ನಿರ್ಮಾಣ ಪ್ರಾರಂಭಿಸಲು ಲಡಾಖ್ ತಲುಪಿದ್ದೇನೆ.
ಸ್ಥಳೀಯ ಸಂಸದ ಜಮಿಯಾಂಗ್ ತ್ಸೆರಿಂಗ್ ನಮಗ್ಯಾಲ್, ಮುಖ್ಯ ಕಾರ್ಯನಿರ್ವಾಹಕ ಕೌನ್ಸಿಲರ್ ಮತ್ತು ಲಡಾಖ್ ಅಟಾನಮಸ್ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ ತಂಡದೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಶನಿವಾರ ಕೇಂದ್ರ ಯುವ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಜಂಟಿಯಾಗಿ ಕತುವಾ ಜಿಲ್ಲೆಯ ಹಿರಾನಗರದ ಅರುಣ್ ಜೇಟ್ಲಿ ಸ್ಮಾರಕ ಕ್ರೀಡಾ ಸಂಕೀರ್ಣಕ್ಕೆ ಅಡಿಪಾಯ ಹಾಕಿದರು.