ತೆಲಂಗಾಣ: ಅಪಹರಣವಾಗಿದ್ದ ತೆಲಂಗಾಣದ ಮೆಹಬೂಬಾಬಾದ್‌ನ ಪತ್ರಕರ್ತನ ಮಗನ ದುರಂತ ಅಂತ್ಯವಾಗಿದೆ. ಕಾಣೆಯಾಗಿದ್ದ 9 ವರ್ಷದ ಬಾಲಕ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಕೇಶಮುದ್ರಂ ಉಪನಗರದ ಬೆಟ್ಟದ ಮೇಲೆ ಬಾಲಕ ದೀಕ್ಷಿತ್‌ನ ಶವ ಪತ್ತೆಯಾಗಿದೆ. ಬಾಲಕನ ಸಾವಿನ ಸುದ್ದಿ ಕೇಳಿ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಕರಣದ ಹಿನ್ನೆಲೆ:
ಭಾನುವಾರ ಮೆಹಬೂಬಾಬಾದ್ ಜಿಲ್ಲೆಯಲ್ಲಿ ಪತ್ರಕರ್ತರೊಬ್ಬರ 9 ವರ್ಷದ ಪುತ್ರನನ್ನು ಅಪಹರಿಸಲಾಗಿತ್ತು. ಮಗುವನ್ನು ಹಿಂತಿರುಗಿಸಬೇಕಾದರೆ 45 ಲಕ್ಷ ರೂಪಾಯಿ ಹಣ ನೀಡಬೇಕೆಂದು ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ತಮ್ಮ ಪುತ್ರನಿಗಾಗಿ ದೀಕ್ಷಿತ್ ಕುಟುಂಬ 45 ಲಕ್ಷ ರೂಪಾಯಿ ಹಣವನ್ನು ಹೊಂದಿಸಿ ಅಪಹರಣಕಾರರಿಗಾಗಿ ಅವರು ಹೇಳಿದ ಪ್ರದೇಶದಲ್ಲಿ ಕಾದಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಅಪಹರಣಕಾರರು ಬಾರದಿದ್ದುನ್ನು ಕಂಡು ಮನೆಗೆ ಹಿಂತಿರುಗಿದ್ದರು.
ಈ ಸಂಬಂಧ ಬಾಲಕನನ್ನು ಪತ್ತೆ ಹಚ್ಚಲು 100 ಪೊಲೀಸರ 10 ತಂಡ ಶೋಧ ಕಾರ್ಯಾಚರಣೆಗಿಳಿದಿತ್ತು. ಆದರೆ, ಕೊನೆಯಲ್ಲಿ ದೀಕ್ಷಿತ್ ಶವವಾಗಿ ದೊರಕಿದ್ದಾನೆ.