ETV Bharat / bharat

ವಲಸೆ ಕಾರ್ಮಿಕರಿಗೆ ಅತಿಥಿ ಕಾರ್ಮಿಕರೆಂದು ಮರು ನಾಮಕರಣ, 2 ಲಕ್ಷ ರೂ. ವಿಮೆ ಘೋಷಿಸಿದ ಕೇರಳ ಸರ್ಕಾರ - ' ಗೆಸ್ಟ್​​​ ಲೇಬರ್ಸ್​​ '

ಕೇರಳದಲ್ಲಿರುವ ವಲಸೆ ಕಾರ್ಮಿಕರಿಗಾಗಿ ಸಿಎಂ ಪಿಣರಾಯಿ ವಿಜಯನ್​​ ನೇತೃತ್ವದ ಸರ್ಕಾರ ಹೊಸ ವಿಮಾ ಯೋಜನೆಯೊಂದನ್ನು ಘೋಷಿಸಿದೆ.

keralas-guest-workers-to-get-rs-2-lakh-insurance-cover
ವಲಸೆ ಕಾರ್ಮಿಕರಿಗಾಗಿ ವಿಮೆ
author img

By

Published : Apr 2, 2020, 12:52 PM IST

ತಿರುವುನಂತಪುರ: ದಿನಗೂಲಿ, ವಲಸೆ ಕಾರ್ಮಿಕರಿಗೆ ಕೇರಳ ಸರ್ಕಾರ ವಿಮಾ ಯೋಜನೆಯನ್ನು ಪರಿಚಯಿಸಿದೆ. ಕಾರ್ಮಿಕ ಇಲಾಖೆ ಘೋಷಿಸಿದಂತೆ 2 ಲಕ್ಷ ರೂಪಾಯಿ ಮೌಲ್ಯದ ವಿಮೆ ಮತ್ತು ಇತರ ಸೌಲಭ್ಯಗಳನ್ನು ಇವರಿಗೆ ನೀಡಲಾಗುವುದು.

ಕೇರಳದಲ್ಲಿ ಇನ್ನು ಮುಂದೆ ವಲಸೆ ಕಾರ್ಮಿಕರನ್ನು' ಗೆಸ್ಟ್​​​ ಲೇಬರ್ಸ್​​ ' ಅಥವಾ 'ಅತಿಥಿ ಕಾರ್ಮಿಕರು 'ಎಂದು ಕರೆಯಲಾಗುತ್ತೆ. ಮೊದಲಿಗೆ ರಾಜ್ಯದಲ್ಲಿರುವ ಎಲ್ಲಾ ವಲಸೆ ಕಾರ್ಮಿಕರ ಸಂಪೂರ್ಣ ವಿವರ ಪಡೆದು ಈ ವಿಮಾ ಸೌಲಭ್ಯ ಒದಗಿಸಲಾಗುತ್ತೆ. ನಂತರ ಅವರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವುದು. ಈ ಕಾರ್ಮಿಕರು 2 ಲಕ್ಷ ರೂ. ವಿಮೆ ಹಾಗೂ ಕೇರಳ ಸರ್ಕಾರ ಘೋಷಿಸಿದ ಇತರ ಸೌಲಭ್ಯಗಳನ್ನು ಪಡೆಯಬಹುದು. ಎಡಿಜಿಪಿ ನೇತೃತ್ವದಲ್ಲಿ ಈ ಪ್ರಕ್ರಿಯೆಯನ್ನು 48 ಗಂಟೆಗಳಲ್ಲಿ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ. ತೀರ್ಮಾನಿಸಲಾಗಿದೆ.

ಈ ಯೋಜನೆಯಡಿ ಗೆಸ್ಟ್​​​ ಲೇಬರ್ಸ್ ಅನ್ನು ಕಾಂಟ್ರಾಕ್ಟ್​ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರು ಮತ್ತು ಸ್ವತಂತ್ರವಾಗಿ ಕೆಲಸ ಮಾಡುವ ಅತಿಥಿ ಕಾರ್ಮಿಕರು ಎಂದು 2 ವಿಭಾಗಗಳಾಗಿ ವಿಂಗಡಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಕಾರ್ಮಿಕರಿಗೆ ಅಗತ್ಯ ಆಹಾರವನ್ನು ಒದಗಿಸುವಂತೆ ನೋಡಿಕೊಳ್ಳಬೇಕು. ಜೊತೆಗೆ ಇದರ ಮೇಲ್ವಿಚಾರಣೆಗೆ ಒಬ್ಬ ಹಿರಿಯ ಐಎಎಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಈವರೆಗೆ ರಾಜ್ಯದಲ್ಲಿ 4,603 ವಲಸೆ ಶಿಬಿರಗಳನ್ನು ತೆರೆದಿದ್ದು, ಅಲ್ಲಿ ಸುಮಾರು 1,44,145 ಅತಿಥಿ ಕಾರ್ಮಿಕರನ್ನು ಇರಿಸಿ ಅವರಿಗೆ ಆಹಾರ ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗುತ್ತೆ.

COVID-19 ಹರಡುವುದನ್ನು ತಡೆಯಲು ದೇಶವೇ ಲಾಕ್​ಡೌನ್​ ಎಂದು ಘೋಷಿಸಿದಾಗ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ಬೀದಿಗೆ ಬಂದು, ಲಾಕ್‌ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿ, ತಮ್ಮ ಊರುಗಳಿಗೆ ಹಿಂತಿರುಗಲು ಪ್ರಯಾಣದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಕೇರಳ ಸರ್ಕಾರ ಅವರನ್ನು ಗೆಸ್ಟ್​​ ಲೇಬರ್ಸ್​ ಎಂದು ಕರೆದು ಅಗತ್ಯ ಸೌಲಭ್ಯವನ್ನು ಒದಗಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.