ETV Bharat / bharat

ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕೊರೊನಾ: ಕೈಗೆ ಬಂದ ಬೆಳೆ ತಲುಪುತ್ತಿಲ್ಲ ಮಾರುಕಟ್ಟೆ

ಕೊರೊನಾ ವೈರಸ್​ ಭೀತಿಯಲ್ಲಿ 21 ದಿನಗಳ ಕಾಲ ಭಾರತ ಲಾಕ್​ಡೌನ್​ ಆಗಿದೆ. ಇದರಿಂದ ತಾವು ಬೆಳೆದ ಫಸಲನ್ನು ಮಾರಾಟ ಮಾಡಲಾಗದೆ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

Kerala: Strawberry & carrot growers face problems

author img

By

Published : Apr 2, 2020, 10:28 AM IST

Updated : Apr 2, 2020, 10:50 AM IST

ಕೊಚ್ಚಿ(ಕೇರಳ): ಲಾಕ್​ಡೌನ್​ ಆದೇಶ ಘೋಷಣೆಯಾದಾಗಿನಿಂದ ದೇಶದ ರೈತರು ಸಂಕಷ್ಟಕ್ಕೊಳಗಾಗಿದ್ದು, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆ ಸಾಗಿಸಿ ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಅನ್ನದಾತನ ಅನ್ನವನ್ನೇ ಕಸಿದುಕೊಂಡ ಲಾಕ್​ಡೌನ್​

ಕೋವಿಡ್‌-19 ಭೀತಿಯಲ್ಲಿ ದೇಶದ ಎಲ್ಲಾ ಮಾರುಕಟ್ಟೆಗಳು ಬಂದ್​ ಆಗಿವೆ. ರೈತರು ಬೆಳೆದಿರುವ ವಿವಿಧ ಬೆಳೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಬೆಳೆದ ಫಸಲು ಜಮೀನಿನಲ್ಲೇ ಕೊಳೆಯುತ್ತಿದೆ. ಇಡುಕ್ಕಿಯ ಮುನ್ನಾರ್​ ಪ್ರದೇಶದಲ್ಲಿ ರೈತರು ಬೆಳೆದಿರುವ ಸ್ಟ್ರಾಬೆರಿ, ಕ್ಯಾರೆಟ್​ ಸೇರಿದಂತೆ ಹತ್ತಾರು ಬೆಳೆಗಳು ಕಟಾವಿಗೆ ಬಂದಿವೆ. ಆದ್ರೆ, ಕಟಾವಿಗೆ ಜನರೂ ಸಿಗುತ್ತಿಲ್ಲ, ಮಾರುಕಟ್ಟೆಯೂ ಲಭ್ಯವಿಲ್ಲ. ಹೀಗಾಗಿ ರೈತರು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವುದಲ್ಲದೆ ಸದ್ಯಕ್ಕೆ ಬೇರೇನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ.

Last Updated : Apr 2, 2020, 10:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.