ETV Bharat / bharat

ಕೇರಳ: ಕುಡುಕ ಅಪ್ಪನಿಂದ 54 ದಿನದ ಮಗುವಿನ ಮೇಲೆ ಹಲ್ಲೆ

ಕೇರಳದ ಕೊಚ್ಚಿಯಲ್ಲಿ 54 ದಿನದ ಮಗುವಿಗೆ ತಂದೆಯೊಬ್ಬ ತಲೆಗೆ ಹೊಡೆದು, ಹಾಸಿಗೆಯ ಮೇಲೆ ಎಸೆದು ಗಾಯಗೊಳಿಸಿದ ಘಟನೆ ನಡೆದಿದೆ. ಈಗ ಆತ ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್​​ ಕಸ್ಟಡಿಗೆ ನೀಡುವಂತೆ ಪೊಲೀಸರು ಅರ್ಜಿ ಸಲ್ಲಿಸಲಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಡುಕ ಅಪ್ಪನಿಂದ 54 ದಿನದ ಮಗುವಿನ ಮೇಲೆ ಹಲ್ಲೆ

author img

By

Published : Jun 24, 2020, 10:20 PM IST

ಕೊಚ್ಚಿ (ಕೇರಳ): ಕಳೆದ ವಾರ 54 ದಿನದ ಮಗುವನ್ನು ಹೊಡೆದು ಗಾಯಗೊಳಿಸಿದ, 40 ವರ್ಷದ ತಂದೆ ಶೈಜು ಥಾಮಸ್​​ನನ್ನು, ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪ್ರಸ್ತುತ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೆಚ್ಚಿನ ತನಿಖೆಗಾಗಿ ನಾವು ಆತನನ್ನು ಕಸ್ಟಡಿಗೆ ಪಡೆಯಲು ಅರ್ಜಿ ಸಲ್ಲಿಸುತ್ತೇವೆ ಎಂದು ಅಂಗಮಾಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಕಳೆದ ಗುರುವಾರ ತಲೆಗೆ ಗಂಭೀರ ಗಾಯವಾಗಿದ್ದ, ಹೆಣ್ಣು ಮಗುವನ್ನು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಣ್ಣೂರು ಮೂಲದ ಥಾಮಸ್ ತನ್ನ ನೇಪಾಳಿ ಹೆಂಡತಿಯೊಂದಿಗೆ ಅಂಗಮಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ.

ಥಾಮಸ್ ಕುಡುಕನಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದಕ್ಕೆ ಪತ್ನಿ ಬಳಿ ದಿನ ಜಗಳವಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಘಟನೆಯ ನಂತರ ಮಗು ಹುಷಾರದ ಬಳಿಕ ತನ್ನ ದೇಶಕ್ಕೆ ಮರಳುವುದಾಗಿ ಅವರ ಪತ್ನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.