ETV Bharat / bharat

ದೇವರ ನಾಡಿಗೆ ಈತನೇ ಪರಮಾತ್ಮ: ಮಾರಾಟಕ್ಕಿದ್ದ ಹೊಸ ಬಟ್ಟೆ ಪ್ರವಾಹ ಸಂತ್ರಸ್ತರಿಗೆ ದಾನ - ಪ್ರವಾಹ ಸಂತ್ರಸ್ತರಿಗೆ ನೆರವು

ದೇವರ ನಾಡಿನ ಪ್ರವಾಹ ಸಂತ್ರಸ್ತರಿಗೆ ಹಲವೆಡೆಗಳಿಂದ ನೆರವು ಹರಿದು ಬರುತ್ತಿದೆ. ಅದೇ ರಾಜ್ಯದ ವ್ಯಕ್ತಿವೋರ್ವ ನೀಡಿರುವ ನೆರವು ಇದೀಗ ಸಾಮಾಜಿಕ ಜಾಲತಾಣಿಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರವಾಹ ಸಂತ್ರಸ್ತ
author img

By

Published : Aug 12, 2019, 10:56 AM IST

ಕೊಚ್ಚಿ: ಕಳೆದ ವರ್ಷ ಶತಮಾನದ ಭೀಕರ ನೆರೆಗೆ ತುತ್ತಾಗಿದ್ದ ದೇವರ ನಾಡು ಕೇರಳದಲ್ಲಿ ಈ ವರ್ಷವೂ ಅಂತಹುದೇ ಪರಿಸ್ಥಿತಿ ನಿರ್ಮಾಣವಾಗಿದೆ. ವರುಣನ ಅಬ್ಬರಕ್ಕೆ ಕೇರಳದಲ್ಲಿ ಈವರೆಗೆ 76 ಮಂದಿ ಸಾವನ್ನಪ್ಪಿದ್ದಾರೆ.

ದೇವರ ನಾಡಿನ ಪ್ರವಾಹ ಸಂತ್ರಸ್ತರಿಗೆ ಹಲವೆಡೆಗಳಿಂದ ನೆರವು ಹರಿದು ಬರುತ್ತಿದೆ. ಅದೇ ರಾಜ್ಯದ ವ್ಯಕ್ತಿವೋರ್ವ ನೆರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಎರ್ನಾಕುಲಂ ಜಿಲ್ಲೆಯ ಮಟ್ಟಂಚೇರಿಯಲ್ಲಿ ಗಾರ್ಮೆಂಟ್ ವ್ಯವಹಾರ ನಡೆಸುತ್ತಿರುವ ನೌಶಾದ್ ತನ್ನ ಶಾಪ್​​ನಲ್ಲಿದ್ದ ಎಲ್ಲ ಹೊಸ ಬಟ್ಟೆಗಳನ್ನು ಪ್ರವಾಹ ಸಂತ್ರಸ್ತರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈದ್ ಹಬ್ಬದ ವೇಳೆ ವ್ಯಾಪಾರ ಮಾಡಲು ತಂದಿದ್ದ ಎಲ್ಲ ಹೊಸ ಬಟ್ಟೆಗಳನ್ನು ನೌಶಾದ್ ನೆರೆಯಿಂದ ಸೂರು ಕಳೆದುಕೊಂಡವರಿಗೆ ವಿತರಿಸಿದ್ದಾರೆ. ನೌಶಾದ್ ನಡೆಗೆ ಇದೀಗ ಸೋಷಿಯಲ್ ಮೀಡಿಯಾ ಮಂದಿ ಸೆಲ್ಯೂಟ್​ ಹೊಡೆದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.