ಕೊಚ್ಚಿ(ಕೇರಳ): ಕತ್ತೆ ಎಂದರೆ ಸಾಮಾನ್ಯವಾಗಿ ಕೆಲಸಕ್ಕೆ ಬಾರದ ಪ್ರಾಣಿ ಎನ್ನುವ ಭಾವನೆ ಇದೆ. ಆದರೆ ಅದೇ ಕತ್ತೆಯನ್ನು ಸಾಕಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಕಥೆಯನ್ನು ಹೇಳುತ್ತೇವೆ ಕೇಳಿ...
ಕೇರಳದ ಎರ್ನಾಕುಲಂ ನಿವಾಸಿ ಅಬಿ ಬೇಬಿ ಮೂಲತಃ ಟೆಕ್ಕಿ. ವಿದ್ಯಾಭ್ಯಾಸ ಮುಗಿಸಿದ ಅಭಿ ಬೆಂಗಳೂರು ಐಟಿ ಕಂಪನಿಯೊಂದರಲ್ಲಿ ಸೇರಿಕೊಳ್ಳುತ್ತಾನೆ. ಆದರೆ ಹೊಸದೇನನ್ನೋ ಸಾಧಿಸುವ ಹಂಬಲದಿಂದ ಉತ್ತಮ ಸಂಪಾದನೆಯಿದ್ದ ಕೆಲಸಕ್ಕೆ ಗುಡ್ಬೈ ಹೇಳಿ ಊರಿಗೆ ಮರಳುತ್ತಾರೆ.
![Cosmetic products from donkey milk,ಕತ್ತೆಯ ಹಾಲಿನಿಂದ ಸೌಂದರ್ಯವರ್ಧಕ ಉತ್ಪನ್ನ](https://etvbharatimages.akamaized.net/etvbharat/prod-images/4963498_thu.png)
ಎರ್ನಾಕುಲಂ ಜಿಲ್ಲೆಯ ರಾಮಮಂಗಲಂ ಊರಿನಲ್ಲಿ ಡಾಲ್ಫಿನ್ ಐಬಿಎ(Dolphin IBA) ಹೆಸರಿನಲ್ಲಿ ಕತ್ತೆಗಳ ಸಾಕಣೆ ಆರಂಭಿಸುತ್ತಾನೆ. ಕತ್ತೆಯ ಹಾಲಿನಿಂದ ಸೌಂದರ್ಯವರ್ಧಕ ಉತ್ಪನ್ನವನ್ನು ತಯಾರಿಸುವ ಸಾಹಸಕ್ಕೆ ಕೈಹಾಕುತ್ತಾರೆ.
ಆರಂಭದಲ್ಲಿ ಅಬಿಯ ಈ ಸಾಹಸವನ್ನು ಕಂಡು ಅದೆಷ್ಟೋ ಮಂದಿ ತಮಾಷೆ ಮಾಡಿದವರೂ ಇದ್ದಾರೆ. ಆದರೆ ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಅಬಿ ತಮ್ಮ ನಿರ್ಧಾರದ ಮೇಲೆ ಗಟ್ಟಿಯಾಗಿ ನೆಲೆಯೂರಿದ್ದರು.
![Cosmetic products from donkey milk,ಕತ್ತೆಯ ಹಾಲಿನಿಂದ ಸೌಂದರ್ಯವರ್ಧಕ ಉತ್ಪನ್ನ](https://etvbharatimages.akamaized.net/etvbharat/prod-images/4963498_thum.jpg)
ಅಬಿ, ಕತ್ತೆಯ ಹಾಲಿನಿಂದ ಫೇರ್ನೆಸ್ ಕ್ರೀಮ್, ಫೇಶಿಯಲ್ ಕಿಟ್, ಸಸ್ಕಿನ್ ಕ್ರೀಮ್, ಹೇರ್ ಜೆಲ್ ತಯಾರಿಸುತ್ತಾರೆ. ಮೂರು ವರ್ಷದ ಹಿಂದೆ ತಮ್ಮ ಎರಡು ಎಕರೆ ಜಾಗದಲ್ಲಿ ಕತ್ತೆ ಸಾಕಣೆ ಆರಂಭಿಸಿದ್ದ ಅಭಿಯ ಈ ಉದ್ಯಮಕ್ಕೆ ಈಗ ಜಾಗತಿಕಮಟ್ಟದಲ್ಲಿ ಭಾರಿ ಬೇಡಿಕೆ ಇದೆ. ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಿಂದ ಅಬಿಗೆ ಆರ್ಡರ್ಗಳು ಬರುತ್ತಿವೆ.
ಪ್ರಸ್ತುತ 21 ಕತ್ತೆಯನ್ನು ಹೊಂದಿರುವ ಅಬಿ ಮುಂದಿನ ದಿನಗಳಲ್ಲಿ ಕತ್ತೆಯ ಹಾಲಿನಿಂದ ಸೋಪ್ ಹಾಗೂ ಲಿಪ್ ಬಾಮ್ ತಯಾರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅಬಿ ಉದ್ಯಮ ಆರಂಭಿಸುವ ವೇಳೆ ರಾಜಸ್ಥಾನದ ಬಿಕನೇರ್ನಲ್ಲಿರುವ ಎನ್ಆರ್ಸಿಸಿ ಸಂಸ್ಥೆಯಿಂದ ಸಲಹೆಯನ್ನು ಪಡೆದುಕೊಂಡಿದ್ದರು.
![Cosmetic products from donkey milk,ಕತ್ತೆಯ ಹಾಲಿನಿಂದ ಸೌಂದರ್ಯವರ್ಧಕ ಉತ್ಪನ್ನ](https://etvbharatimages.akamaized.net/etvbharat/prod-images/4963498_tg.jpg)
ಅಭಿಯ ಈ ಸಾಹಸಕ್ಕೆ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಇಂಡಿಯನ್ ಅಗ್ರಕಲ್ಚರ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಬಿಗೆ ಇನೊವೇಟಿವ್ ಫಾರ್ಮರ್ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದೆ.