ಅಲೆಪ್ಪಿ (ಕೇರಳ): ಕೊರೊನಾ ಸೋಂಕು ಹಾಗೂ ಲಾಕ್ಡೌನ್ ನಿರ್ಬಂಧಗಳ ಕಾರಣ ಈಗಾಗಲೇ ಕೆಲವು ಜೋಡಿಗಳು ಆನ್ಲೈನ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. ಸದ್ಯ ಇದೇ ರೀತಿಯ ಮದುವೆ ಕೇರಳದಲ್ಲಿಯೂ ನಡೆದಿದೆ.
ಸೌದಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗ ಆಸೀಫ್ ನಜೀರ್ ಅಲ್-ಖೋಬರ್ನಿಂದ ಆನ್ಲೈನ್ ಮೂಲಕ ಅಮಿನಾ ಅವರನ್ನು ವರಿಸಿದ್ದಾರೆ. ಮದುವೆಯ ಧಾರ್ಮಿಕ ವಿಧಿ-ವಿಧಾನಗಳನ್ನು ಆನ್ಲೈನ್ ಮೂಲಕವೇ ನಡೆಸಲಾಗಿದೆ.
ಮುಸ್ಲಿಂ ಧಾರ್ಮಿಕ ಮುಖಂಡ ಸಲೀಂ ಅವರ ನೇತೃತ್ವದಲ್ಲಿ ಕೇರಳದ ಅಂಬಲಪ್ಪುಳ ಎಂಬಲ್ಲಿ ಈ ಮದುವೆ ಸಮಾರಂಭ ನಡೆಯಿತು. ವಧುವಿನ ತಂದೆ ರಿಯಾದ್ನ ಹೋಟೆಲ್ನಿಂದಲೇ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಆಸೀಫ್ ಸೌದಿ ಅರೇಬಿಯಾದಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಅಮಿನಾ ಕೂಡ ಎಂಜಿನಿಯರಿಂಗ್ ಪದವೀಧರೆ. ಸದ್ಯದಲ್ಲೇ ಸೌದಿಗೆ ತೆರಳುವುದಾಗಿ ಅವರು ಹೇಳಿದ್ದಾರೆ.