ETV Bharat / bharat

ಕೊರೊನಾ ವೈರಸ್‌  ಹಾಟ್​ ಸ್ಪಾಟ್ ಆಗಿರುವ ಛತ್ತಿಸ್​ಗಢದ ಕಾಟ್ಘೋರಾ! - ಕೋವಿಡ್-19

ಕೊರ್ಬಾ ಜಿಲ್ಲೆಯ ಕಟ್ಘೋರಾ ನಗರದಲ್ಲಿ ಏಳು ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಕಾಟ್ಘೋರಾ ಛತ್ತಿಸ್​ಗಢದ ಮೊದಲ ಮತ್ತು ಏಕೈಕ ಕೊರೊನಾ ವೈರಸ್‌  ಹಾಟ್​ ಸ್ಪಾಟ್ ಆಗಿ ಮಾರ್ಪಟ್ಟಿದೆ.

corona
corona
author img

By

Published : Apr 10, 2020, 9:53 AM IST

ಕೊರ್ಬಾ (ಛತ್ತೀಸ್​ಗಢ): ಛತ್ತಿಸ್​ಗಢದ ಕಟ್ಘೋರಾದಲ್ಲಿ ಇನ್ನೂ ಏಳು ಜನರಲ್ಲಿ ಕೊರೊನಾ ವೈರಸ್‌ ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18ಕ್ಕೇರಿದೆ.

10 ಕೊರೊನಾ ವೈರಸ್ ರೋಗಿಗಳಲ್ಲಿ 9 ಮಂದಿ ಕಟ್ಘೋರಾದ ಮಸೀದಿಯೊಂದಿಗೆ ಸಂಬಂಧಹೊಂದಿದ್ದು, ಅದೇ ಮಸೀದಿಯಲ್ಲಿ 16 ತಬ್ಲಿಘಿ ಜಮಾಅತ್ ಸದಸ್ಯರು ತಂಗಿದ್ದರು.

ಇದರಿಂದಾಗಿ ಕಾಟ್ಘೋರಾ ಛತ್ತಿಸ್​ಗಢದ ಮೊದಲ ಮತ್ತು ಏಕೈಕ ಕೊರೊನಾ ವೈರಸ್‌ ಹಾಟ್​ ಸ್ಪಾಟ್ ಆಗಿ ಮಾರ್ಪಟ್ಟಿದೆ.

ನಿಜಾಮುದ್ದೀನ್, ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ಇತರ ರಾಜ್ಯಗಳಿಂದ ಹಿಂತಿರುಗಿದ 50ಕ್ಕೂ ಹೆಚ್ಚು ಜಮಾಅತ್ ಸದಸ್ಯರನ್ನು ದೀಪ್ಕಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.

ಜಿಲ್ಲೆಯಲ್ಲಿ ಸುಮಾರು 3000 ಜನ ಹೋಂ ಕ್ವಾರಂಟೈನ್​ನಲ್ಲಿದ್ದು, ಈವರೆಗೆ 176 ಜನರನ್ನು ಈವರೆಗೆ ಪರೀಕ್ಷಿಸಲಾಗಿದೆ. ಲಂಡನ್​ನಿಂದ ಹಿಂದಿರುಗಿದ ಯುವಕನಲ್ಲಿ ಕೊರೊನಾ ಪತ್ತೆಯಾಗಿದೆ. ಉಳಿದಂತೆ ಮಾರ್ಕಾಜ್​ನೊಂದಿಗೆ ಸಂಪರ್ಕ ಹೊಂದಿರುವ 9 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ತಿಳಿದುಕೊಳ್ಳಬೇಕಾದ ಸಂಗತಿಗಳು:

  • 7 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ತಲುಪಿದೆ.
  • ರೋಗಿಗಳು 22-73 ವರ್ಷ ವಯಸ್ಸಿನವರಾಗಿದ್ದಾರೆ.
  • ಒಟ್ಟು ಸೋಂಕಿತರಲ್ಲಿ 8 ಪುರುಷರು ಮತ್ತು 2 ಮಹಿಳೆಯರು ಇದ್ದಾರೆ.
  • ಜಿಲ್ಲೆಯಲ್ಲಿ 3000ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದಾರೆ.
  • ದೀಪ್ಕಾ ಪರೀಕ್ಷಾ ಕೇಂದ್ರ ಮತ್ತು ಕೊರ್ಬಾದ ರಷ್ಯನ್​ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ.
  • ಕೊರ್ಬಾದಿಂದ ಕಳುಹಿಸಲಾದ 176 ಮಾದರಿಗಳಲ್ಲಿ 10 ಜನರಿಗೆ ವೈರಸ್ ದೃಢಪಟ್ಟಿದೆ.
  • ಕಟ್ಘೋರಾದಲ್ಲಿ 9 ಕೊರೊನಾ ಪ್ರಕರಣಗಳು ಕಂಡುಬಂದಿವೆ.
  • ಕೊರೊನಾ ವೈರಸ್ ಸೋಂಕಿತನ 13 ಜನ ಕುಟುಂಬ ಸದಸ್ಯರನ್ನು ರಷ್ಯಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
  • ಸೋಂಕಿತನ ಸಂಬಂಧಿಗಳನ್ನು ಕೊರೊನಾ ವೈರಸ್ ಶಂಕಿತರೆಂದು ಗುರುತಿಸಲಾಗಿದೆ.

ರಾಮ್‌ಸಾಗರ್ ಪ್ಯಾರಾ ಪ್ರದೇಶದ ಯುವಕನೊಬ್ಬ ಕೊರೊನಾ ವೈರಸ್​ನಿಂದ ಗುಣಮುಖನಾಗಿದ್ದು, ಆತನನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.