ಲಂಡನ್: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370 ಹಾಗೂ 35ಎ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಡೆ ಖಂಡಿಸಿ, ಲಂಡನ್ನ ಭಾರತೀಯ ರಾಯಭಾರ ಕಚೇರಿಯ ಎದುರು ಕಾಶ್ಮೀರಿಗಳು ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ, ವಿಧಿ ರದ್ದತಿಯನ್ನು ಖಂಡಿಸಿದ್ದರೆ. ಮೋದಿ ಅವರನ್ನು ಹಿಟ್ಲರ್ಗೆ ಹೋಲಿಸಿ ಪ್ರತಿಭಟನೆ ನಡೆಸಿರುವ ಆಕ್ರೋಶಿತರು ಭಾರತವು ನಾಜಿ ಸಿದ್ಧಾಂತ ಪ್ರತಿಪಾದಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಲಂಡನ್ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲವರನ್ನು ಬಂಧಿಸಲಾಗಿದೆ.
ಪ್ರತಿಭಟನಾನಿರತರು ಕಾಶ್ಮೀರ ಪ್ರತ್ಯೇಕ ಧ್ವಜ, ಪಾಕ್ ಧ್ವಜಗಳನ್ನು ಹಾರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಅವರನ್ನು ಟೀಕಿಸುವ ಪೋಸ್ಟರ್ಗಳು, ಕಾರ್ಟೂನ್ಗಳು ಪ್ರತಿಭಟನೆ ವೇಳೆ ರಾರಾಜಿಸಿದವು.