ಜಮ್ಮು ಮತ್ತು ಕಾಶ್ಮೀರ : ಪೆನ್ಸಿಲ್ ಸ್ಲ್ಯಾಟ್‌ಗಳನ್ನು ಹೆಚ್ಚು ಉತ್ಪಾದನೆ ಮಾಡುತ್ತಿರುವ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯನ್ನು ಸರ್ಕಾರ ಪೆನ್ಸಿಲ್ ಜಿಲ್ಲೆಯೆಂದು ಘೋಷಿಸಲು ಸಿದ್ಧತೆ ನಡೆಸಿದೆ. ಪುಲ್ವಾಮಾವು ಜಮ್ಮು ಮತ್ತು ಕಾಶ್ಮೀರದ ಏಕೈಕ ಜಿಲ್ಲೆ.
90ರ ದಶಕದ ಮೊದಲು ಭಾರತವು ತನ್ನ ಪೆನ್ಸಿಲ್ ಉದ್ಯಮಕ್ಕಾಗಿ ಜರ್ಮನಿ ಮತ್ತು ಚೀನಾದಂತಹ ದೇಶಗಳಿಂದ ಮರ ಆಮದು ಮಾಡಿಕೊಳ್ಳುತ್ತಿತ್ತು. ಆದ್ರೀಗ ಅಗತ್ಯವಿರುವ ಶೇ.70ರಷ್ಟು ಮರಗಳು ಪುಲ್ವಾಮಾ ಜಿಲ್ಲೆಯಲ್ಲೇ ಸಿಗಲಿವೆ. ನಿರಂತರ ಪೋಪ್ಲರ್ ಮರವನ್ನು ಪೆನ್ಸಿಲ್ ತಯಾರಿಸಲು ಬಳಸಲಾಗುತ್ತದೆ ಮತ್ತು ದಕ್ಷಿಣ ಕಾಶ್ಮೀರದ ಈ ಜಿಲ್ಲೆಯಲ್ಲಿ ಪೋಪ್ಲರ್ ಮರಗಳನ್ನು ಹೇರಳವಾಗಿ ಬೆಳೆಯಲಾಗುತ್ತದೆ.
ಕೋವಿಡ್-19 ಕಾರಣದಿಂದಾಗಿ ಸ್ಲ್ಯಾಟ್ ತಯಾರಿಕೆ ಉದ್ಯಮವು ಭಾರಿ ಹಿನ್ನೆಡೆ ಅನುಭವಿಸಿದೆ. ಪುಲ್ವಾಮಾವನ್ನು ದೇಶದ ಪೆನ್ಸಿಲ್ ಜಿಲ್ಲೆಯಾಗಿ ಘೋಷಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ವರ್ಷದ ಆರಂಭದಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ಶಾಲೆಗಳು ಮುಚ್ಚಲ್ಪಟ್ಟ ಕಾರಣ, ನಾವು ಭಾರಿ ನಷ್ಟ ಅನುಭವಿಸಿದ್ದೇವೆ ಎಂದು ಸಂಬಂಧಪಟ್ಟ ಕೈಗಾರಿಕೋದ್ಯಮಿಗಳು ಹೇಳುತ್ತಾರೆ. ಉದ್ಯಮದ ಹಿನ್ನೆಡೆಯು ಕಾರ್ಮಿಕರ ನಿರುದ್ಯೋಗಕ್ಕೂ ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.
“ನಾವು ಪೆನ್ಸಿಲ್‌ಗಳಿಗಾಗಿ ಮರದ ಸ್ಲೇಟ್‌ಗಳನ್ನು ತಯಾರಿಸುತ್ತೇವೆ ಮತ್ತು ನಂತರ ಈ ಸ್ಲೇಟ್‌ಗಳನ್ನು ಜಮ್ಮು ಮೂಲದ ಪೆನ್ಸಿಲ್ ಕೈಗಾರಿಕೆಗಳಿಗೆ ಕಳುಹಿಸುತ್ತೇವೆ. ನಾವು ಇಲ್ಲಿ ಪೆನ್ಸಿಲ್‌ಗಳನ್ನು ತಯಾರಿಸುವುದಿಲ್ಲ. ಯಾಕೆಂದರೆ, ಕಚ್ಚಾ ವಸ್ತುಗಳ ಸಾರಿಗೆ ಶುಲ್ಕದಿಂದಾಗಿ ಕಣಿವೆಯಲ್ಲಿ ಪೆನ್ಸಿಲ್ ತಯಾರಿಕೆ ದುಬಾರಿಯಾಗಿದೆ” ಎಂದು ಪೆನ್ಸಿಲ್ ಯುನಿಟ್ ಹೋಲ್ಡರ್, ವಾಲಿ ಮೊಹ್ಮದ್ ದಾರ್ ಈಟಿವಿ ಭಾರತ್‌ಗೆ ಹೇಳಿದ್ದಾರೆ.