ETV Bharat / bharat

MSMEಗಳ GST ಪಾವತಿ ಅವಧಿ ಮುಂದೂಡುವಂತೆ ಕೇಂದ್ರಕ್ಕೆ ಕರ್ನಾಟಕ ಕಾಂಗ್ರೆಸ್​ ಒತ್ತಾಯ - Karnataka Pradesh Congress Committee

ಎಂಎಸ್‌ಎಂಇಗಳು ಭಾರತದ ಆರ್ಥಿಕತೆಯ ಪ್ರಮುಖ ಭಾಗ. ಲಾಕ್​ಡೌನ್​ನಿಂದಾಗಿ ಈ ಉದ್ಯಮಗಳು ತಮ್ಮ ಉಳಿವಿಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಪ್ರಕಾರ, ಕೇಂದ್ರ ಸರ್ಕಾರವು ಅವರ ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ ಸುಮಾರು 50% ಎಂಎಸ್‌ಎಂಇಗಳು ರಾಜ್ಯದಲ್ಲಿ ತಮ್ಮ ಕಾರ್ಯವನ್ನು ಪುನರಾರಂಭಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

DK Shivakumar
ಡಿ.ಕೆ.ಶಿವಕುಮಾರ್
author img

By

Published : Jun 12, 2020, 5:57 PM IST

ನವದೆಹಲಿ: ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಜಿಎಸ್‌ಟಿ ಪಾವತಿ ಅವಧಿ ಮುಂದೂಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದೆ.

ಈ ಬಗ್ಗೆ ವಿತ್ತ ಸಚಿವೆಗೆ ಪತ್ರ ಕಳುಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂಎಸ್‌ಎಂಇಗಳ ಆರ್ಥಿಕ ಪುನಶ್ಚೇತನಕ್ಕಾಗಿ ಅವರ ಅಗತ್ಯಗಳನ್ನು ಪೂರೈಸಲು ಪ್ರಸ್ತುತ ಜಿಎಸ್‌ಟಿ ನಿಯಮಗಳನ್ನು ಸುಧಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಂಎಸ್‌ಎಂಇಗಳು ಭಾರತದ ಆರ್ಥಿಕತೆಯ ಪ್ರಮುಖ ಭಾಗ. ಲಾಕ್​ಡೌನ್​ನಿಂದಾಗಿ ಈ ಉದ್ಯಮಗಳು ತಮ್ಮ ಉಳಿವಿಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಪ್ರಕಾರ, ಕೇಂದ್ರ ಸರ್ಕಾರವು ಅವರ ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ, ಸುಮಾರು 50% ಎಂಎಸ್‌ಎಂಇಗಳು ರಾಜ್ಯದಲ್ಲಿ ತಮ್ಮ ಕಾರ್ಯವನ್ನು ಪುನರಾರಂಭಿಸುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಆದಾಯದ ನಷ್ಟದಿಂದಾಗಿ ಈ ಉದ್ಯಮಗಳು ಬಂಡವಾಳದ ಬಿಕ್ಕಟ್ಟಿನಲ್ಲಿವೆ. ಜಿಎಸ್​ಟಿ ಪಾವತಿಯನ್ನು ಸರ್ಕಾರ ಸ್ಥಗಿತಗೊಳಿಸಲು ಸಾಧ್ಯವಾಗದಿದ್ದರೆ ಜಿಎಸ್​ಟಿ ಪಾವತಿಸುವ ಅವಧಿಯನ್ನು ಮುಂದೂಡುವ ಮೂಲಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮುಂದಿನ 6 ತಿಂಗಳುಗಳವರೆಗೆ ಬಂಡವಾಳ ಪರಿಹಾರವನ್ನು ಒದಗಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.