ETV Bharat / bharat

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ ಕಪಿಲ್​ ಸಿಬಲ್ ಮಾಡಿದ್ದ ಟ್ವೀಟ್​​​ ​ಡಿಲೀಟ್​! - ಕಾಂಗ್ರೆಸ್​ ಕಾರ್ಯಕಾರಿ ಸಭೆ

ಭಾರತೀಯ ಜನತಾ ಪಕ್ಷದೊಂದಿಗೆ ಕೆಲ ನಾಯಕರು ಶಾಮೀಲಾಗಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿಕೆ ನೀಡುತ್ತಿದ್ದಂತೆ ಸಿಡಿಮಿಡಿಗೊಂಡಿದ್ದ ಕಪಿಲ್ ಸಿಬಲ್​ ಕೊನೆಗೂ ತಾವು ಮಾಡಿದ್ದ ಟ್ವೀಟ್​ ಡಿಲೀಟ್​ ಮಾಡಿದ್ದಾರೆ.

Kapil Sibal
Kapil Sibal
author img

By

Published : Aug 24, 2020, 3:10 PM IST

ನವದೆಹಲಿ: ಕಾಂಗ್ರೆಸ್​ ಪಕ್ಷದಲ್ಲಿ ಉಂಟಾಗಿರುವ ನಾಯಕತ್ವ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಇದರಲ್ಲಿ ಇಬ್ಬರ ಮೇಲೆ ಇನ್ನೊಬ್ಬರು ಆರೋಪ - ಪ್ರತ್ಯಾರೋಪ ಮಾಡುತ್ತಿರುವುದು ಕಂಡು ಬಂದಿದೆ.

ಕಾಂಗ್ರೆಸ್​ನ ಹಿರಿಯ ಮುಖಂಡ ಕಪಿಲ್​ ಸಿಬಲ್​ ಸೇರಿದಂತೆ 23 ಮುಖಂಡರು ಪಕ್ಷದಲ್ಲಿ ಪೂರ್ಣಾವಧಿ, ದಕ್ಷ ಹಾಗೂ ಪರಿಣಾಮಕಾರಿ ನಾಯಕತ್ವದ ಅಗತ್ಯವಿದೆ ಎಂದು ಉಲ್ಲೇಖಿಸಿ ಸೋನಿಯಾ ಗಾಂಧಿ ಅವರಿಗೆ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದರು. ಅದೇ ವಿಚಾರವಾಗಿ ರಾಹುಲ್​ ಗಾಂಧಿ ಸಿಡಬ್ಲೂಸಿ ಸಭೆಯಲ್ಲಿ ಕೆಲ ಹಿರಿಯ ಮುಖಂಡರ ಮೇಲೆ ವಾಗ್ದಾಳಿ ನಡೆಸಿದ್ದರು.

  • Rahul Gandhi says “we are colluding with BJP“...Last 30 years have never made a statement in favour of BJP on any issue. Yet “we are colluding with the BJP“: Congress leader Kapil Sibal in a tweet pic.twitter.com/DGUboBswkd

    — ANI (@ANI) August 24, 2020 " class="align-text-top noRightClick twitterSection" data=" ">

ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಕೆಲ ನಾಯಕರು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಹುಲ್​ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಚರ್ಚೆ ಮಾಡಬಹುದಾಗಿತ್ತು. ಆದರೆ ಬಹಿರಂಗವಾಗಿ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ ಎಂದಿದ್ದರು.

ಇದರಿಂದ ಕುಪಿತಗೊಂಡಿದ್ದ ಸಿಬಲ್​, ನಾವು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗಿ ರಾಹುಲ್​ ಗಾಂಧಿ ಹೇಳಿದ್ದಾರೆ. ಆದರೆ ರಾಜಸ್ಥಾನ ಹೈಕೋರ್ಟ್​ನಲ್ಲಿ ಕಾಂಗ್ರೆಸ್​ ಪಕ್ಷ ಸಮರ್ಥಿಸಿಕೊಂಡಿದ್ದು ಹಾಗೂ ಮಣಿಪುರದಲ್ಲಿ ಬಿಜೆಪಿ ಸೋಲಿಸಿ ನಮ್ಮ ಪಕ್ಷ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ 30 ವರ್ಷಗಳಿಂದ ನಾನು ಯಾವುದೇ ವಿಚಾರದಲ್ಲೂ ಬಿಜೆಪಿ ಪರವಾದ ಹೇಳಿಕೆ ನೀಡಿಲ್ಲ. ಆದರೂ ನಾವು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಟ್ವೀಟ್​ ಮಾಡಿದ್ದರು.

  • Was informed by Rahul Gandhi personally that he never said what was attributed to him .

    I therefore withdraw my tweet .

    — Kapil Sibal (@KapilSibal) August 24, 2020 " class="align-text-top noRightClick twitterSection" data=" ">

ಟ್ವೀಟ್​ ಡಿಲೀಟ್​ ಮಾಡಿದ ಕಪಿಲ್​ ಸಿಬಲ್​!

ರಾಹುಲ್​ ಗಾಂಧಿ ಫೋನ್​ ಮಾಡಿ ಕಪಿಲ್​ ಸಿಬಲ್​ ಜತೆ ಮಾತನಾಡುತ್ತಿದ್ದಂತೆ ಅವರು ತಮ್ಮ ಟ್ವಿಟರ್​​ ಅಕೌಂಟ್​​ನಲ್ಲಿ ಟ್ವೀಟ್​ ಡಿಲೀಟ್​ ಮಾಡಿದ್ದಾರೆ. ರಾಹುಲ್​ ಗಾಂಧಿ ನನ್ನ ವಿರುದ್ಧ ಆರೋಪ ಮಾಡಿಲ್ಲ ಎಂದು ವೈಯಕ್ತಿಕವಾಗಿ ತಿಳಿಸಿರುವ ಕಾರಣ ನಾನು ಮಾಡಿರುವ ಟ್ವೀಟ್​​ ಹಿಂತೆಗೆದುಕೊಂಡಿದ್ದೇನೆ ಎಂದಿದ್ದಾರೆ.

  • Sh. Rahul Gandhi hasn’t said a word of this nature nor alluded to it.

    Pl don’t be mislead by false media discourse or misinformation being spread.

    But yes, we all need to work together in fighting the draconian Modi rule rather then fighting & hurting each other & the Congress. https://t.co/x6FvPpe7I1

    — Randeep Singh Surjewala (@rssurjewala) August 24, 2020 " class="align-text-top noRightClick twitterSection" data=" ">

ರಾಹುಲ್​ ಗಾಂಧಿ ಹೇಳಿಕೆಗೆ ಧ್ವನಿ ಗೂಡಿಸಿರುವ ರಣದೀಪ್​ ಸಿಂಗ್​​ ಸುರ್ಜೇವಾಲ್​, ಅವರು ನೀಡಿರುವ ಹೇಳಿಕೆಯಲ್ಲಿ ಸತ್ಯವಿದೆ. ಆದರೆ ಇದರಿಂದ ಹಿರಿಯ ಮುಖಂಡರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.ಮಾಧ್ಯಮಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದ ಯಾರು ದಾರಿ ತಪ್ಪಬಾರದು. ಮೋದಿ ಆಡಳಿತದ ವಿರುದ್ಧ ಹೋರಾಡುವಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ತದನಂತರ ಪರಸ್ಪರ ಹಾಗೂ ಕಾಂಗ್ರೆಸ್​ ವಿರುದ್ಧ ಹೋರಾಟ ಮಾಡೋಣ ಎಂದಿದ್ದಾರೆ.

ಇನ್ನೊಂದೆಡೆ, ಈ ಬಗ್ಗೆ ಟ್ವೀಟ್​ ಮಾಡಿರುವ ಕಾಂಗ್ರೆಸ್​ ಎಂಪಿ ಮಾಣಿಕ್ಯಂ ಠಾಗೋರ್​, ಕಪೀಲ್​​​ ಸಿಬಲ್​ಜಿ ನಿಮ್ಮ ಬಗ್ಗೆ ನಮಗೆ ಅಪಾರ ಗೌರವ ಇದೆ. ನಿಮಗೆ ಕಾಂಗ್ರೆಸ್​ ಪಕ್ಷ ಬಹಳಷ್ಟು ಮನ್ನಣೆ ನೀಡಿದೆ. ಕೇಂದ್ರ ಸಚಿವರನ್ನಾಗಿಯೂ ಮಾಡಿದೆ. ನೀವು ಸಿಡಬ್ಲ್ಯುಸಿ ಸಭೆಯಲ್ಲಿ ಇಲ್ಲ. ಈ ಬಗ್ಗೆ ಬಂದಿರುವ ಸುಳ್ಳು ಸುದ್ದಿಯನ್ನ ನಂಬಿ ಟ್ವೀಟ್​ ಮಾಡಿದ್ದೀರಿ. ಇದು ನಿಮ್ಮಂತಹ ಹಿರಿಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಹರಿಹಾಯ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.