ETV Bharat / bharat

ಮಾಸ್ಕ್​ ಧರಿಸಿಲ್ಲ ಅಂತಾ ಮೇಕೆ ಅರೆಸ್ಟ್​: ನಗೆಪಾಟಲಿಗೀಡಾದ ಕಾನ್ಪುರ ಪೊಲೀಸರು!

author img

By

Published : Jul 27, 2020, 1:18 PM IST

ಮಾಸ್ಕ್​ ಧರಿಸದೆ ತಿರುಗಾಡುತ್ತಿದೆ ಎಂಬ ಕಾರಣಕ್ಕೆ ಮೇಕೆಯೊಂದನ್ನು ಬಂಧಿಸಿದ ಕಾನ್ಪುರ ಪೊಲೀಸರೀಗ ಸಾಮಾಜಿಕ ಜಾಲತಾಣದಲ್ಲಿ 'ಸೆಂಟರ್​ ಆಫ್​ ಜೋಕ್ಸ್​'​ ಆಗಿದ್ದಾರೆ.

Kanpur Police 'arrest' goat for not wearing mask
ಮಾಸ್ಕ್​ ಧರಿಸಿಲ್ಲ ಅಂತಾ ಮೇಕೆ ಅರೆಸ್ಟ್

ಕಾನ್ಪುರ: ವಿಚಿತ್ರ ಪ್ರಕರಣವೆಂಬಂತೆ ಮಾಸ್ಕ್​ ಧರಿಸದೆ ತಿರುಗಾಡುತ್ತಿದೆ ಎಂಬ ಕಾರಣಕ್ಕೆ ಮೇಕೆಯೊಂದನ್ನು ಉತ್ತರಪ್ರದೇಶದ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.

ಕಾನ್ಪುರದ ಬೆಕೊಂಗಂಜ್ ಪ್ರದೇಶದಲ್ಲಿ ಮಾಸ್ಕ್​ ಧರಿಸದೆ ಮೇಕೆ ಹೊರಗಡೆ ತಿರುಗಾಡುತ್ತಿದೆ ಎಂದು ಅದನ್ನು ಬಂಧಿಸಿದ ಪೊಲೀಸರು ಜೀಪ್​ನಲ್ಲಿ ಠಾಣೆಗೆ ಹೊತ್ತೊಯ್ದಿದ್ದರು. ವಿಚಾರ ತಿಳಿದ ಮಾಲೀಕ ಠಾಣೆಗೆ ತೆರಳಿ ಮೇಕೆಯನ್ನು ಹಿಂದಿರುಗಿಸುವಂತೆ ಬೇಡಿಕೊಂಡಿದ್ದಾನೆ. ಪ್ರಾಣಿಗಳನ್ನ ಹೀಗೆ ರಸ್ತೆಯಲ್ಲಿ ತಿರುಗಲು ಮತ್ತೆ ಬಿಡಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿ ಮೇಕೆಯನ್ನು ಹಿಂದಿರುಗಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಕೊಂಗಂಜ್ ಠಾಣಾ ಇನ್ಸ್​ಪೆಕ್ಟ​ರ್​​ ಸೈಫುದ್ದೀನ್ ಬೇಗ್, ಮೇಕೆ ಜೊತೆಗೆ ಇದ್ದ ಯುವಕನೋರ್ವ ಮಾಸ್ಕ್​ ಧರಿಸಿರಲಿಲ್ಲ. ಪೊಲೀಸರನ್ನು ನೋಡಿದ ಆತ ಮೇಕೆಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ. ಹೀಗಾಗಿ ಪೊಲೀಸರು ಮೇಕೆಯನ್ನ ಠಾಣೆಗೆ ತಂದಿದ್ದರು ಎಂದು ಹೇಳಿದ್ದಾರೆ.

ಆದರೆ ಮೇಕೆಯನ್ನು ಬಂಧಿಸಿದ್ದ ಪೊಲೀಸ್​ ಸಿಬ್ಬಂದಿಯೊಬ್ಬರು ಮೇಕೆಯು ಮಾಸ್ಕ್​​ ಹಾಕಿಲ್ಲ ಎಂಬ ಕಾರಣಕ್ಕೆ ನಾವು ಅರೆಸ್ಟ್​ ಮಾಡಿದ್ದು. ಜನರು ಈಗ ತಮ್ಮ ಸಾಕು ನಾಯಿಗಳಿಗೆ ಮಾಸ್ಕ್​ ಹಾಕುತ್ತಿದ್ದಾರೆ ಅಂದ್ಮೇಲೆ ಮೇಕೆಗೆ ಯಾಕೆ ಹಾಕಬಾರದು ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ 'ಸೆಂಟರ್​ ಆಫ್​ ಜೋಕ್ಸ್​'​ ಆಗಿದ್ದು, ಕಾನ್ಪುರ ಪೊಲೀಸರು ನಗೆಪಾಟಲಿಗೀಡಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.