ಮುಂಬೈ: ಶಿವಸೇನೆ ನಾಯಕರೊಂದಿಗಿನ ಗಲಾಟೆ ಉಲ್ಬಣಗೊಳ್ಳುತ್ತಿದ್ದಂತೆಯೇ ಮಗಳಿಗೆ ವೈ-ಪ್ಲಸ್ ಭದ್ರತೆ ಒದಗಿಸಿದ್ದಕ್ಕಾಗಿ ನಟಿ ಕಂಗನಾ ರನೌತ್ ತಾಯಿ ಆಶಾ ರನೌತ್ ಬಿಜೆಪಿಗೆ ಧನ್ಯವಾದ ತಿಳಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ವಿಡಿಯೋ ಸಂದರ್ಶನದಲ್ಲಿ, "ಇಡೀ ದೇಶದ ಆಶೀರ್ವಾದವು ಕಂಗನಾ ಮೇಲಿದೆ. ನನ್ನ ಮಗಳು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತಾಳೆ ಎಂಬ ಹೆಮ್ಮೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾವು ಕಾಂಗ್ರೆಸ್ ಮೂಲದವರು. ನನ್ನ ಅಜ್ಜ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಆದರೆ ಇನ್ನು ಮುಂದೆ ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತೇವೆ" ಎಂದಿದ್ದಾರೆ.
-
When they broke my office, mom’s warning face flashed before my eyes “ KAHA THA MAINE” haven’t taken her calls ever since, this just flashed on my timeline, pleasantly surprised by her refreshing take on this whole matter #KanganaVsUddhav https://t.co/jHnr46FKfd
— Kangana Ranaut (@KanganaTeam) September 10, 2020 " class="align-text-top noRightClick twitterSection" data="
">When they broke my office, mom’s warning face flashed before my eyes “ KAHA THA MAINE” haven’t taken her calls ever since, this just flashed on my timeline, pleasantly surprised by her refreshing take on this whole matter #KanganaVsUddhav https://t.co/jHnr46FKfd
— Kangana Ranaut (@KanganaTeam) September 10, 2020When they broke my office, mom’s warning face flashed before my eyes “ KAHA THA MAINE” haven’t taken her calls ever since, this just flashed on my timeline, pleasantly surprised by her refreshing take on this whole matter #KanganaVsUddhav https://t.co/jHnr46FKfd
— Kangana Ranaut (@KanganaTeam) September 10, 2020
ಇನ್ನು ಕಂಗನಾ ತಮ್ಮ ತಾಯಿಯ ಸಂದರ್ಶನದ ತುಣುಕನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು,"ನನ್ನ ಕಚೇರಿಯನ್ನು ಕೆಡವಿದಾಗ ಅಮ್ಮನ ಎಚ್ಚರಿಕೆ ಮಾತು ಕಣ್ಣ ಮುಂದೆ ಬಂದಿತ್ತು. ಇಲ್ಲಿಯವರೆಗೆ ಆಕೆಯ ಕರೆಗಳನ್ನು ನಾನು ಸ್ವೀಕರಿಸಲಿಲ್ಲ, ಆದರೆ ನನ್ನ ಟೈಮ್ಲೈನ್ನಲ್ಲಿ ಅಮ್ಮನ ವಿಡಿಯೋ ನೋಡಿದ ಬಳಿಕ, ನನ್ನ ಪರವಾಗಿ ಆಕೆ ಮಾತನಾಡಿದ ಬಳಿಕ ಆಶ್ಚರ್ಯವೆನಿಸಿತು" ಎಂದಿದ್ದಾರೆ.
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಕಾರಣಕ್ಕೆ ಮತ್ತು ಮುಂಬೈ ಪೊಲೀಸರನ್ನು ಸರಣಿ ಟ್ವೀಟ್‌ಗಳಲ್ಲಿ ಟೀಕಿಸಿದ ಹಿನ್ನೆಲೆಯಲ್ಲಿ ಶಿವಸೇನೆ ನಾಯಕರೊಂದಿಗೆ ಕಂಗನಾ ಕಲಹ ಪ್ರಾರಂಭವಾಗಿತ್ತು.