ಮುಂಬೈ: ನಟಿ ಕಂಗನಾ ರಣಾವತ್ ಮತ್ತೆ ಎಡವಟ್ಟು ಮಾಡಿಕೊಂಡು ಮುಂಬೈ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಕಂಗನಾ ಹಾಗೂ ಸಹೋದರಿ ರಂಗೋಲಿಗೆ ನವೆಂಬರ್ 10 ಹಾಗೂ 11ರಂದು ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ಬಾಲಿವುಡ್ನಲ್ಲಿ ಹಿಂದೂ - ಮುಸ್ಲಿಂ ಉದ್ವಿಗ್ನತೆ ಮತ್ತು ಮುಸ್ಲಿಂ ಮತ್ತು ಹಿಂದೂ ನಟರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ನಟಿ ಕಂಗನಾ ರಣಾವತ್ ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಪಿಸಿದ್ದರು. ಇದು ಸಾಮಾಜಿಕ ದ್ವೇಷವನ್ನು ಹೆಚ್ಚಿಸಿ, ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿ ಸಾಹಿಲ್ ಅಶ್ರಫ್ ಎಂಬುವವರು ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಪೋಸ್ಟ್ ಸಂಬಂಧ ಬಾಂದ್ರಾ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಈ ಪೋಸ್ಟ್ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಿರ್ದೇಶಿಸಲಾಗಿತ್ತು. ಆದರೆ ಅವರ ನಿವಾಸದಲ್ಲಿ ವಿವಾಹ ಸಮಾರಂಭವಿದ್ದ ಕಾರಣ ನವೆಂಬರ್ 15ರ ವರೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ರಣಾವತ್ ತಿಳಿಸಿದ್ದರು.
ಇದೀಗ ನವೆಂಬರ್ 10ರಂದು ರಣಾವತ್ಗೆ ವಿಚಾರಣೆಗೆ ಹಾಜರಾಗುವಂತೆ ಹಾಗೂ 11ರಂದು ಸಹೋದರಿ ರಂಗೋಲಿ ಚಂದೇಲ್ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.