ನವದೆಹಲಿ: ರಾಹುಲ್ ಗಾಂಧಿಯವರ "ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ" ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಗಾಗೆ ಟಾಂಗ್ ಕೊಟ್ಟಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆ ನಿಜಕ್ಕೂ ನಾಚಿಕೆಗೇಡು. ಬಹುಷಃ ಅವರಿಗೆ ಸಾವರ್ಕರ್ ಬಗ್ಗೆ ತಿಳಿದಿರುವ ಹಾಗಿಲ್ಲ. ಅವರು ಅಂಡಮಾನ್ ಜೈಲಿನಲ್ಲಿ 12 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದವರು. ಆದರೆ ರಾಹುಲ್ ಗಾಂಧಿಯವರಿಂದ ಕೇವಲ 12 ಗಂಟೆಗಳವರೆಗೂ ಜೈಲಲ್ಲಿರಲು ಸಾಧ್ಯವಿಲ್ಲ. ಹೆಸರಿನಲ್ಲಿ ಮಾತ್ರ ಗಾಂಧಿ ಇದ್ದ ಮಾತ್ರಕ್ಕೆ ನೀವು ಗಾಂಧಿಯಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಗೆ ಟೀಕಿಸಿದ್ದಾರೆ.
-
Devendra Fadnavis, BJP: Rahul Gandhi's statement is shameful, maybe he does not know about Savarkar ji. He faced torture for 12 years in the cells of Andaman jail, Rahul Gandhi cannot do it for even 12 hours. Just putting Gandhi in your name doesn't make you a Gandhi. https://t.co/Q18DVDJSMr pic.twitter.com/48ft6BYDkP
— ANI (@ANI) December 14, 2019 " class="align-text-top noRightClick twitterSection" data="
">Devendra Fadnavis, BJP: Rahul Gandhi's statement is shameful, maybe he does not know about Savarkar ji. He faced torture for 12 years in the cells of Andaman jail, Rahul Gandhi cannot do it for even 12 hours. Just putting Gandhi in your name doesn't make you a Gandhi. https://t.co/Q18DVDJSMr pic.twitter.com/48ft6BYDkP
— ANI (@ANI) December 14, 2019Devendra Fadnavis, BJP: Rahul Gandhi's statement is shameful, maybe he does not know about Savarkar ji. He faced torture for 12 years in the cells of Andaman jail, Rahul Gandhi cannot do it for even 12 hours. Just putting Gandhi in your name doesn't make you a Gandhi. https://t.co/Q18DVDJSMr pic.twitter.com/48ft6BYDkP
— ANI (@ANI) December 14, 2019
ಕೆಲ ದಿನಗಳ ಹಿಂದೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡುತ್ತಾ, ರಾಹುಲ್ ಗಾಂಧಿ 'ರೇಪ್ ಇನ್ ಇಂಡಿಯಾ' ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಹೇಳಿದ್ದರು.
ಹೀಗಾಗಿ ನಿನ್ನೆ ದೆಹಲಿಯಲ್ಲಿ ನಡೆದ 'ಭಾರತ್ ಬಚಾವೊ' ರ್ಯಾಲಿಯಲ್ಲಿ, ತಮ್ಮ 'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆಯಾಚಿಬೇಕು ಎಂದು ಪಟ್ಟುಬಿದ್ದಿರುವ ಬಿಜೆಪಿಗೆ ರಾಗಾ ತಿರುಗೇಟು ನೀಡಿದ್ದರು. ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ. ಸತ್ಯ ಮಾತನಾಡಿರುವುದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ. ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ಅವರ ಸಹಾಯಕ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಹೇಳಿದ್ದರು.