ETV Bharat / bharat

ಎಚ್ಚರ! ಎಚ್ಚರ! 'ಜ್ಯೂಸ್ ಜಾಕಿಂಗ್' ಮೂಲಕ ನಿಮ್ಮನ್ನು ಬಲಿಪಶು ಮಾಡ್ತಾರೆ ಸೈಬರ್ ವಂಚಕರು! - ಸೈಬರ್ ಅಪರಾಧ ಸುದ್ದಿ

ಸಾರ್ವಜನಿಕ ಸ್ಥಳಗಳಲ್ಲಿ ಫ್ರೀ ಆಗಿ ಮೊಬೈಲ್​ ಫೋನ್​ ಚಾರ್ಜ್ ಮಾಡಿಸಿಕೊಳ್ಳುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ, ಈ ಸ್ಟೋರಿಯನ್ನು ನೀವು ಅತ್ಯಂತ ತುರ್ತಾಗಿ ಓದಲೇ ಬೇಕು. ಫ್ರೀಯಾಗಿ ವೈಫೈ ಸಿಗುತ್ತೆ ಅಂತಾ ಎಲ್ಲೆಂದರಲ್ಲಿ ಬಳಸಿಕೊಳ್ಳುವವರು ಕೂಡಾ ಇನ್ಮುಂದೆ ಅತ್ಯಂತ ಎಚ್ಚರವಾಗಿರ್ಲೇಬೇಕು. ಯಾಕಂದ್ರೆ, ಕಾಣದ ಕೈಗಳು ನಿಮ್ಮ ಖಾಸಗಿ ಮಾಹಿತಿಯನ್ನು ಕಬಳಿಸಿ ನಿಮ್ಮನ್ನೇ ಬದುಕನ್ನೇ ಬರ್ಬಾದ್‌ ಮಾಡಿಬಿಡಬಹುದು. ಅಷ್ಟೇ ಅಲ್ಲಾ, ನಿಮ್ಮನ್ನು ಬ್ಲ್ಯಾಕ್​ ಮೇಲ್​ ಮಾಡಿ ಎಲ್ಲವನ್ನೂ ಕಿತ್ತುಕೊಂಡು ಬೆತ್ತಲಾಗಿಸುವ ಸಾಧ್ಯತೆ ಇದೆ. ಇದುವೇ 'ಜ್ಯೂಸ್ ಜಾಕಿಂಗ್. ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಮುಂಜಾಗ್ರತಾ ಕ್ರಮಕ್ಕಾಗಿ ಈ ಸ್ಟೋರಿ ಓದಿ...

juice jacking
ಜ್ಯೂಸ್ ಜಾಕಿಂಗ್
author img

By

Published : Jun 19, 2020, 5:27 PM IST

Updated : Jun 19, 2020, 9:03 PM IST

ಬೆಂಗಳೂರು/ನವದೆಹಲಿ: ಸೈಬರ್ ಅಪರಾಧ ಲೋಕದಲ್ಲಿ ಮತ್ತೊಂದು ಹೊಸ ಪದ ಸೃಷ್ಟಿಯಾಗಿದೆ. ಅದುವೇ 'ಜ್ಯೂಸ್ ಜಾಕಿಂಗ್.' ದುಷ್ಕರ್ಮಿಗಳು ಮಾಡುವ ಈ ಘೋರ ವಂಚನೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಹೊಸ ತಂತ್ರದ ಮೂಲಕ ಹ್ಯಾಕರ್​ಗಳು ನಿಮ್ಮನ್ನು ಬೆನ್ನತ್ತುವ ಸಾಧ್ಯತೆ ದಟ್ಟವಾಗಿದ್ದು, ನೀವು ಎಚ್ಚರವಾಗಿದ್ದಷ್ಟು ನಿಮಗೇ ಒಳ್ಳೆಯದು. ಎಚ್ಚರಿಕೆಯ ಹೆಜ್ಜೆಯ ಮೂಲಕ ಜಾಗೃತರಾಗುವುದನ್ನು ಬಿಟ್ಟರೆ ಇದರ ವಿರುದ್ಧ ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲ.

'ಜ್ಯೂಸ್ ಜಾಕಿಂಗ್' ಈಟಿವಿ ಭಾರತ ಸಂದರ್ಶನ

ಮೊಬೈಲ್ ಫೋನ್‌ನ ಚಾರ್ಜಿಂಗ್ ಕೇಬಲ್ ​ಅನ್ನು ಬಳಕೆದಾರರ ಅನುಕೂಲಕ್ಕಾಗಿ ಡೇಟಾ ಕೇಬಲ್ ಆಗಿ ಪರಿವರ್ತಿಸಿದಾಗಿನಿಂದ, ಮೊಬೈಲ್ ಫೋನ್‌ಗಳಲ್ಲಿ ಸಂಗ್ರಹವಾಗಿರುವ ಖಾಸಗಿ ಡೇಟಾವನ್ನು ಹ್ಯಾಕ್ ಮಾಡಲು 'ಜ್ಯೂಸ್ ಜಾಕಿಂಗ್' ಅನ್ನೋದೇ ಹ್ಯಾಕರ್​ಗಳು ಕಂಡುಕೊಂಡ ದುಷ್ಟಮಾರ್ಗ. ಈ ವಿಧಾನದ ಮೂಲಕ ನಿಮ್ಮೆಲ್ಲಾ ಸೂಕ್ಷ್ಮ ಮಾಹಿತಿಗಳು ಕ್ಷಣಮಾತ್ರದಲ್ಲಿ ಹ್ಯಾಕರ್​ಗಳ ಕೈಸೇರಿಬಿಡುತ್ತದೆ.

ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು, ಉದ್ಯಾನವನಗಳು ಮತ್ತು ಮಾಲ್‌ಗಳಲ್ಲಿ ಉಚಿತ ಚಾರ್ಜಿಂಗ್ ಪಾಯಿಂಟ್‌ಗಳನ್ನು ನೀಡುವ ಸಾರ್ವಜನಿಕ ಸ್ಥಳಗಳನ್ನು ಹ್ಯಾಕರ್‌ಗಳು ಗುರಿಯಾಗಿಸಿ ಜನರನ್ನು ಬಲಿಪಶುಗಳನ್ನಾಗಿಸುತ್ತಾರೆ. ಚಾರ್ಜಿಂಗ್‌ಗಾಗಿ ಬಳಸುವ ಯುಎಸ್‌ಬಿ ಪೋರ್ಟ್‌ಗಳು ಡೇಟಾ ಕೇಬಲ್​ ಕೂಡಾ ಆಗಿರುವುದರಿಂದ ವ್ಯಕ್ತಿಯ ಸೂಕ್ಷ್ಮ ಖಾಸಗಿ ಮಾಹಿತಿಗಳನ್ನು ವರ್ಗಾಯಿಸುವ ಸಾಧನವೂ ಆಗಿದೆ. ಹೀಗಾಗಿ ಬ್ಯಾಂಕಿಂಗ್ ಹಾಗೂ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳು, ವೈಯಕ್ತಿಕ ಡೇಟಾಕ್ಕಾಗಿ ಬಳಸುವ ಪಾಸ್‌ವರ್ಡ್‌ಗಳ ಬಗ್ಗೆ ಹ್ಯಾಕರ್‌ಗಳು ತಿಳಿದುಕೊಂಡು, ಅದನ್ನು ಹ್ಯಾಕ್​ ಮಾಡಿಬಿಡುತ್ತಾರೆ. ಅಷ್ಟೇ ಅಲ್ಲ ಅವರಿಗೆ ಬೇಕಾದ ಮಾಹಿತಿಯನ್ನು ಸರಾಗವಾಗಿ ಕದಿಯುತ್ತಾರೆ. ಅವರಿಗೆ ಬೇಕಾದಂತೆ ಪಾಸ್​ವರ್ಡ್​ಗಳನ್ನು ಮರುಹೊಂದಿಸಿ, ನಿಮ್ಮ ಮೊಬೈಲ್​ ಫೋನ್​ಅನ್ನು ನೀವೇ ಅನ್​ಲಾಕ್​ ಮಾಡಲಾಗದಂತೆ ನಿಮ್ಮನ್ನು ಲಾಕ್ ಮಾಡಿಬಿಡುತ್ತಾರೆ. ಅವರಿಗೆ ಬೇಕಾದ ಎಲ್ಲಾ ಗೌಪ್ಯ, ಖಾಸಗಿ ಮಾಹಿತಿಗಳನ್ನು ಕದ್ದುಕೊಂಡು, ನಿಮ್ಮನ್ನೇ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಆಮೇಲೆ ಅದನ್ನೇ ಇಟ್ಟುಕೊಂಡು ಅವರಿಗೆ ಬೇಕಾದುದೆಲ್ಲವನ್ನೂ ಕಿತ್ತುಕೊಳ್ಳುತ್ತಾರೆ.

ವಿಶ್ವದ ಐಟಿಬಿಟಿ ರಾಜಧಾನಿಯಾಗಿರುವ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ಸಾರ್ವಜನಿಕ ಮೊಬೈಲ್​ ಚಾರ್ಜಿಂಗ್​ ಪಾಯಿಂಟ್​ಗಳು ಎಲ್ಲೆಲ್ಲಿ ಇವೆ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸ್ಥಳೀಯ ಪೊಲೀಸ್​ ಠಾಣೆ, ಸೈಬರ್​ ಠಾಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಜನತೆ ಜಾಗೃತರಾದಷ್ಟು ಒಳ್ಳೆಯದು. ಈ ಅಪರಾಧದ ಬಗ್ಗೆ ಒಮ್ಮೆ ಜನತೆಗೆ ತಿಳಿದರೆ ಮತ್ತೆ ಈ ವಿಚಾರವಾಗಿ ತೆಗೆದುಕೊಳ್ಳಬಹುದಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಗ್ರಾಫಿಕ್​ ಅನ್ನು ನೋಡಿ...

Juice Jacking
ಗ್ರಾಫಿಕ್​-1

ಜ್ಯೂಸ್ ಜಾಕಿಂಗ್, ಹ್ಯಾಕರ್​ಗಳು ಬಳಸುವ ಹ್ಯಾಕಿಂಗ್​ ವಿಧಾನ. ಈ ಹ್ಯಾಕಿಂಗ್​ ವಿಧಾನದ ಬಗ್ಗೆ ವಿಸ್ತೃತ ಮಾಹಿತಿ ಹಾಗೂ ಇದರಿಂದ ಜಾಗೃತರಾಗಬೇಕಾದ ವಿಧಾನದ ಬಗ್ಗೆ ವಿಧಿವಿಜ್ಞಾನ ಮತ್ತು ಕೈಬರಹ ತಜ್ಞರಾದ ಬಿ.ಎನ್.ಫಣೀಂದ್ರ, ಈಟಿವಿ ಭಾರತದ ಪ್ರಾದೇಶಿಕ ಮುಖ್ಯಸ್ಥರಾದ ಪ್ರವೀಣ್​ ಅಕ್ಕಿ ನಡೆಸಿರುವ ಸಂದರ್ಶನದಲ್ಲಿ ವಿವರವಾಗಿ ತಿಳಿಸಿದ್ದಾರೆ.

Last Updated : Jun 19, 2020, 9:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.