ETV Bharat / bharat

ಸಿನ್ಹಾ 'ಕೈ' ಹಿಡಿಯಲು ಲಾಲೂ ಕಾರಣವಂತೆ: ಮೋದಿ, ಶಾ ಸರ್ವಾಧಿಕಾರಿ ಎಂದ ರೆಬಲ್​ - ಲಾಲೂ ಪ್ರಸಾದ್​ ಯಾದವ್

ಕಾಂಗ್ರೆಸ್​ಗೆ ಸೇರ್ಪಡೆಯಾಗಲು ಸ್ನೇಹಿತ ಲಾಲೂ ಪ್ರಸಾದ್​ ಯಾದವ್ ಸಹ ಕಾರಣವೆಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಕಾಂಗ್ರೆಸ್ ಸೇರಲು ಲಾಲೂ ಪ್ರಸಾದ್​ ಯಾದವ್ ಕಾರಣ ಎಂದ ಶತ್ರುಘ್ನ ಸಿನ್ಹಾ
author img

By

Published : Mar 31, 2019, 7:43 PM IST

ನವದೆಹಲಿ: 'ಕಮಲ' ಕೆಳಗಿಳಿಸಿ 'ಕೈ' ಹಿಡಿದಿರುವ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ, ತಮ್ಮ ಈ ನಿರ್ಧಾರಕ್ಕೆ ಲಾಲೂ ಪ್ರಸಾದ್​ ಯಾದವ್ ಸಹ ಕಾರಣವೆಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ರೆಬಲ್ ಆಗಿದ್ದ ಸಿನ್ಹಾರಿಗೆ ಕಮಲ ಪಾಳೆಯ ಸಹ ತಿರುಗೇಟು ನೀಡಿತ್ತು. ಸಿನ್ಹಾರ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ರನ್ನು ಕಣಕ್ಕಿಳಿಸಿ ಸಿನ್ಹಾಗೆ ಮುಜುಗರ ತರಿಸಿತ್ತು. ಬಿಜೆಪಿ ತೊರೆಯುವುದು ಸಿನ್ಹಾರಿಗೆ ಅನಿವಾರ್ಯ ಎಂಬ ಮಾತುಗಳು ಹರಿದಾಡುತ್ತಿರುವಾಗಲೇ ಕಾಂಗ್ರೆಸ್​ ಜತೆ ಅವರು ಗುರ್ತಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿನ್ಹಾ, ಟಿಎಂಸಿಯ ಮಮತಾ ಬ್ಯಾನರ್ಜಿ, ಎಸ್​ಪಿಯ ಅಖಿಲೇಶ್​ ಯಾದವ್ ಹಾಗೂ ಆಪ್​ನ ಅರವಿಂದ ಕೇಜ್ರವಾಲ್​ ಸೇರಿ ಹಲವು ಮುಖಂಡರು ನನ್ನನ್ನು ಸಂಪರ್ಕಿಸಿ, ತಮ್ಮ ಪಕ್ಷ ಸೇರುವಂತೆ ಕೇಳಿಕೊಂಡಿದ್ದರು. ಆತ್ಮೀಯ ಗೆಳೆಯ ಲಾಲೂ ಅವರ ಸಲಹೆ ಮೇರೆಗೆ ಕಾಂಗ್ರೆಸ್​ ಸೇರುವ ಮನಸ್ಸು ಮಾಡಿರುವೆ ಎಂದಿದ್ದಾರೆ.

ಈ ವೇಳೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಗಳು ಎಂದು ಸಿನ್ಹಾ ಜರಿದಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬಹುದೊಡ್ಡ ಕೊಡುಗೆ ನೀಡಿದ ಕಾಂಗ್ರೆಸ್​ ನಿಜವಾದ ಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್​ ಸೇರಿದ್ದೇನೆ. ಜತೆಗೆ ಲಾಲೂ ಅವರ ಸಲಹೆ, ಅಪ್ಪಣೆ ಸಹ ಇದಕ್ಕೆ ಕಾರಣ ಎಂದೂ ಹೇಳಿಕೊಂಡಿದ್ದಾರೆ.

Intro:Body:

ಸಿನ್ಹಾ ಕೈ ಹಿಡಿಯಲು ಲಾಲೂ ಕಾರಣವಂತೆ: ಮೋದಿ, ಶಾ ಸರ್ವಾಧಿಕಾರಿ ಎಂದ ರೆಬಲ್​ 

Joining Congress as it is national party in true sense; Lalu advised to do so: Shatrughan

ನವದೆಹಲಿ: 'ಕಮಲ' ಕೆಳಗಿಳಿಸಿ 'ಕೈ' ಹಿಡಿದಿರುವ ನಟ ರಾಜಕಾರಣಿ ಶತ್ರುಘ್ನ ಸಿನ್ಹಾ  , ತಮ್ಮ ಈ ನಿರ್ಧಾರಕ್ಕೆ ಲಾಲೂ ಪ್ರಸಾದ್​ ಯಾದವ್ ಸಹ ಕಾರಣ ಎಂದು ಹೇಳಿದ್ದಾರೆ. 

ಬಿಜೆಪಿ ವಿರುದ್ಧ ರೆಬಲ್ ಆಗಿದ್ದ ಸಿನ್ಹಾರಿಗೆ ಕಮಲ ಪಾಳೆಯ ಸಹ  ತಿರುಗೇಟು ನೀಡಿತ್ತು. ಸಿನ್ಹಾರ  ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ರನ್ನು ಕಣಕ್ಕಿಳಿಸಿದ್ದು ಅವರಿಗೆ ತೀವ್ರ ಬೇಸರ ಉಂಟುಮಾಡಿತ್ತು. ಬಿಜೆಪಿ ತೊರೆಯುವುದು ಸಿನ್ಹಾರಿಗೆ ಅನಿವಾರ್ಯ ಎಂಬ ಮಾತುಗಳು ಹರಿದಾಡುತ್ತಿರುವಾಗಲೇ ಕಾಂಗ್ರೆಸ್​ ಜತೆ ಅವರು ಗುರ್ತಿಸಿಕೊಂಡಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಸಿನ್ಹಾ, ಟಿಎಂಸಿಯ ಮಮತಾ ಬ್ಯಾನರ್ಜಿ, ಎಸ್​ಪಿಯ ಅಖಿಲೇಶ್​ ಯಾದವ್ ಹಾಗೂ ಆಪ್​ನ ಅರವಿಂದ ಕೇಜ್ರವಾಲ್​ ಸೇರಿ ಹಲವು  ಮುಖಂಡರು ನನ್ನನ್ನು ಸಂಪರ್ಕಿಸಿ, ತಮ್ಮ ಪಕ್ಷ ಸೇರುವಂತೆ ಕೇಳಿಕೊಂಡಿದ್ದರು. ಆತ್ಮೀಯ ಗೆಳೆಯ ಲಾಲೂ ಅವರ  ಸಲಹೆ ಮೇರೆಗೆ ಕಾಂಗ್ರೆಸ್​ ಸೇರುವ ಮನಸ್ಸು ಮಾಡಿರುವೆ ಎಂದಿದ್ದಾರೆ. 

ಈ ವೇಳೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಗಳು ಎಂದು ಅವರು ಕರೆದಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬಹುದೊಡ್ಡ ಕೊಡುಗೆ ನೀಡಿದ   ಕಾಂಗ್ರೆಸ್​  ನಿಜವಾದ ಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಕಾರಣಕ್ಕಾಗಿ ಈ ಪಕ್ಷ ಸೇರಿದ್ದಾಗಿ ಹೇಳಿಕೊಂಡಿದ್ದಾರೆ. ಜತೆಗೆ ಲಾಲೂ ಅವರ ಸಲಹೆ, ಅಪ್ಪಣೆ ಪಡೆದು ಕಾಂಗ್ರೆಸ್​ ಸೇರಿದೆ ಎಂದೂ ಹೇಳಿಕೊಂಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.