ETV Bharat / bharat

ಜೆಎನ್‌ಯು ಹಿಂಸಾಚಾರ.. ತನಿಖೆ ಎದುರಿಸಲು 49 ಮಂದಿಗೆ ದೆಹಲಿ ಪೊಲೀಸರಿಂದ ನೋಟಿಸ್‌.. - ವಿದ್ಯಾರ್ಥಿಗಳಿಗೆ ನೋಟಿಸ್

ಜನವರಿ 4 ಮತ್ತು 5 ರಂದು ವಿದ್ಯಾರ್ಥಿಗಳು ಸರ್ವರ್ ಕೊಠಡಿಯಿಂದ ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಇದೆ. ಆ ಇಮೇಲ್‌ಗಳ ಮೂಲವನ್ನೂ ಸಹ ಪರಿಶೀಲಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

JNU violence
ಜೆಎನ್​ಯು ಹಿಂಸಾಚಾರ
author img

By

Published : Jan 13, 2020, 1:25 PM IST

ನವದೆಹಲಿ: ಜೆಎನ್‌ಯು ಹಿಂಸಾಚಾರದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್​ ಅಪರಾಧ ವಿಭಾಗವು ತನಿಖೆಗೆ ಅಕ್ಷತ್ ಅವಸ್ಥಿ ಮತ್ತು ರೋಹಿತ್ ಶಾ ಎಂಬಿಬ್ಬರು ವಿದ್ಯಾರ್ಥಿಗಳು ಸೇರಿ 49 ಮಂದಿಗೆ ನೋಟಿಸ್ ಕಳುಹಿಸಿದೆ. ಅಕ್ಷತ್‌ ಅವಸ್ಥಿ ಮತ್ತು ರೋಹಿತ್‌ ಶಾ ಇವರಿಬ್ಬರೂ ಖಾಸಗಿ ನ್ಯೂಸ್ ಚಾನೆಲ್‌ವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಕಾಣಿಸಿದ್ದರು.

ಅವಸ್ಥಿ ಮತ್ತು ಶಾ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳು. ತನಿಖೆಗೆ ಹಾಜರಾಗುವಂತೆ ಅವರಿಗೆ ನೋಟಿಸ್​ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಅವಸ್ಥಿ ಮತ್ತು ಶಾ ಇವರಿಬ್ಬರನ್ನೂ ಸಂಪರ್ಕಿಸಿದಾಗ, ಅವರು ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ. ನಂತರ ಅವರ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಆದರೂ ಅವರಿರುವ ಸ್ಥಳಗಳನ್ನು ಪತ್ತೆ ಹಚ್ಚಲಾಗಿದೆ. ಜನವರಿ 5ರಂದು ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಪ್ರಶ್ನಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅವಸ್ಥಿ ಉತ್ತರಪ್ರದೇಶದ ಕಾನ್ಪುರಕ್ಕೆ ಸೇರಿದ್ರೆ, ಶಾ ದೆಹಲಿಯ ಮುನೀರ್ಕಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಿಂಸಾಚಾರದ ವೇಳೆ ಮುಖವಾಡ ಧರಿಸಿದ್ದ ಚೆಕ್ ಶರ್ಟ್, ತಿಳಿ ನೀಲಿ ಸ್ಕಾರ್ಫ್ ಧರಿಸಿದ್ದ ಮಹಿಳೆಯನ್ನು ಕೋಮಲ್ ಶರ್ಮಾ ಎಂದು ಗುರುತಿಸಲಾಗಿದೆ. ಈಕೆ ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿನಿ. ಈಕೆಗೂ ತನಿಖೆಗೆ ಹಾಜರಾಗಲು ನೋಟಿಸ್​ ಕಳುಹಿಸಲಾಗಿದೆ. ಆದರೆ, ಶನಿವಾರ ರಾತ್ರಿಯಿಂದಲೇ ಕೋಮಲ್ ಫೋನ್ ಸ್ವಿಚ್ ಆಫ್ ಆಗಿದೆ. ಜನವರಿ 4 ಮತ್ತು 5 ರಂದು ವಿದ್ಯಾರ್ಥಿಗಳು ಸರ್ವರ್ ಕೊಠಡಿಯಿಂದ ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಇದೆ. ಆ ಇಮೇಲ್‌ಗಳ ಮೂಲವನ್ನೂ ಸಹ ಪರಿಶೀಲಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

Intro:Body:

JNU

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.