ETV Bharat / bharat

ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌: ನ.30ರಿಂದ ಮತದಾನ, ಡಿ.23ಕ್ಕೆ ಫಲಿತಾಂಶ

ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಇದೀಗ ಜಾರ್ಖಂಡ್​ನ 81 ಕ್ಷೇತ್ರಗಳಿಗೆ ಮತದಾನದ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

ಕೇಂದ್ರ ಚುನಾವಣಾಧಿಕಾರಿ ಸುನಿಲ್​ ಅರೋರಾ
author img

By

Published : Nov 1, 2019, 6:09 PM IST

Updated : Nov 1, 2019, 10:06 PM IST

ರಾಂಚಿ: 81 ಕ್ಷೇತ್ರಗಳನ್ನು ಹೊಂದಿರುವ ಜಾರ್ಖಂಡ್​​ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿದೆ. ಒಟ್ಟು 5 ಹಂತಗಳಲ್ಲಿ ಮತದಾನ ನಡೆಯಲಿದ್ದು ನವೆಂಬರ್​ 30ರಿಂದ ಮತದಾನ ಆರಂಭಗೊಳ್ಳಲಿದೆ.

ಕೇಂದ್ರ ಚುನಾವಣಾಧಿಕಾರಿ ಸುನೀಲ್​ ಅರೋರಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕ್ರಿಸ್‌ಮಸ್‌ಗೂ ಮುನ್ನ ಚುನಾವಣೆ ಪ್ರಕ್ರಿಯೆ ಮುಗಿಯಲಿದ್ದು, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಐದು ಹಂತದಲ್ಲಿ ಮತದಾನ

  • ನವೆಂಬರ್​​ 30: 13 ಕ್ಷೇತ್ರಕ್ಕೆ ಮೊದಲ ಹಂತ
  • ಡಿಸೆಂಬರ್​​7: 20 ಕ್ಷೇತ್ರಕ್ಕೆ ಎರಡನೇ ಹಂತ
  • ಡಿಸೆಂಬರ್​​​ 12: 17ಕ್ಷೇತ್ರಕ್ಕೆ ಮೂರನೇ ಹಂತ
  • ಡಿಸೆಂಬರ್​​ 16: 15ಕ್ಷೇತ್ರಕ್ಕೆ ನಾಲ್ಕನೇ ಹಂತ
  • ಡಿಸೆಂಬರ್​​​ 20: 16ಕ್ಷೇತ್ರಕ್ಕೆ ಐದನೇ ಹಂತ
  • ಫಲಿತಾಂಶ: ಡಿಸೆಂಬರ್​ 23
    Jharkhand Legislative Assembly
    ಜಾರ್ಖಂಡ್ ವಿಧಾನಸಭೆ ಚುನಾವಣೆ

ರಾಜ್ಯದ 19 ಜಿಲ್ಲೆಗಳನ್ನು ಹೆಚ್ಚು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಣೆ ಮಾಡಲಾಗಿದ್ದು, ಇವು 67 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿವೆ. ಜಾರ್ಖಂಡ್​​ನಲ್ಲಿ ಸದ್ಯ ರಘುವರ್ ದಾಸ್​ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಮುಂದಿನ ವರ್ಷ ಜನವರಿ 5ರಂದು ಸರ್ಕಾರದ ಅವಧಿ ಮುಕ್ತಾಯಗೊಳ್ಳಿದೆ.

2014ರ ವಿಧಾನಸಭಾ ಚುನಾವಣೆಯಲ್ಲಿ 81 ಕ್ಷೇತ್ರಗಳ ಪೈಕಿ ಬಿಜೆಪಿ 37 ಕ್ಷೇತ್ರ, ಜೆಎಂಎಂ 19, ಜಾರ್ಖಂಡ್​ ವಿಕಾಸ್​ ಮೊರ್ಚಾ 8 ಹಾಗೂ ಕಾಂಗ್ರೆಸ್​​ 6 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು.

Intro:Body:

ಜಾರ್ಖಂಡ್​​ನ 81 ಕ್ಷೇತ್ರಗಳಿಗೆ ಐದು ಹಂತದಲ್ಲಿ ವೋಟಿಂಗ್​​, ಡಿಸೆಂಬರ್​ 23ಕ್ಕೆ ರಿಜಲ್ಟ್​​​​! 

ರಾಂಚಿ:  81 ಕ್ಷೇತ್ರಗಳ ಜಾರ್ಖಂಡ್​​ನ ವಿಧಾನಸಭೆಗೆ ಐದು ಹಂತಗಳಲ್ಲಿ ನವೆಂಬರ್​ 30ರಿಂದ ಆರಂಭಗೊಳ್ಳಲಿದ್ದು, ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿ  ಆದೇಶ ಹೊರಡಿಸಿದೆ. 

ಕೇಂದ್ರ ಚುನಾವಣಾಧಿಕಾರಿ ಸುನಿಲ್​ ಅರೋರಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು,ನಮ್ಮ ಮನಸ್ಸಿನಲ್ಲಿ ಸಾಕಷ್ಟು ಸೂಕ್ಷ್ಮತೆಗಳಿರುವ ಕಾರಣ, ಕ್ರಿಸ್‌ಮಸ್​​ವೊಳಗೆ ಚುನಾವಣೆ ಮುಗಿಸಬೇಕು. ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. 

ಐದು ಹಂತದಲ್ಲಿ ಮತದಾನ

ನವೆಂಬರ್​​ 30: 13 ಕ್ಷೇತ್ರಕ್ಕೆ ಮೊದಲ ಹಂತ

ಡಿಸೆಂಬರ್​​7: 20 ಕ್ಷೇತ್ರಕ್ಕೆ ಎರಡನೇ ಹಂತ

ಡಿಸೆಂಬರ್​​​ 12: 17ಕ್ಷೇತ್ರಕ್ಕೆ ಮೂರನೇ ಹಂತ

ಡಿಸೆಂಬರ್​​ 16: 15ಕ್ಷೇತ್ರಕ್ಕೆ ನಾಲ್ಕನೇ ಹಂತ

ಡಿಸೆಂಬರ್​​​ 20: 16ಕ್ಷೇತ್ರಕ್ಕೆ ಐದನೇ ಹಂತ

ಫಲಿತಾಂಶ: ಡಿಸೆಂಬರ್​ 23

19 ಜಿಲ್ಲೆಗಳನ್ನ ಹೆಚ್ಚು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಣೆ ಮಾಡಲಾಗಿದ್ದು, ಇವು 67 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿವೆ. ಜಾರ್ಖಂಡ್​​ನಲ್ಲಿ ಈಗಾಗಲೇ ರಘುಬರ್ ದಾಸ್​ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಮುಂದಿನ ವರ್ಷ ಜನವರಿ 5ರಂದು ಸದ್ಯದ ಸರ್ಕಾರದ ಅವಧಿ ಮುಕ್ತಾಯಗೊಳ್ಳಿದೆ.

2014ರ ವಿಧಾನಸಭಾ ಚುನಾವಣೆಯಲ್ಲಿ 81 ಕ್ಷೇತ್ರಗಳ ಪೈಕಿ ಬಿಜೆಪಿ 37 ಕ್ಷೇತ್ರ,ಜೆಎಂಎಂ 19 ಕ್ಷೇತ್ರ,ಜಾರ್ಖಂಡ್​ ವಿಕಾಸ್​ ಮೊರ್ಚಾ 8ಕ್ಷೇತ್ರ  ಹಾಗೂ ಕಾಂಗ್ರೆಸ್​​ 6 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು. 

Conclusion:
Last Updated : Nov 1, 2019, 10:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.