ETV Bharat / bharat

ಕಾಲ್​ ಸೆಂಟರ್​ ಹೆಸರಲ್ಲಿ ಅಮೆರಿಕನ್ನರಿಗೇ ಪಂಗನಾಮ ಹಾಕಿದ ಭೂಪರು!

20 ಜನರ ತಂಡವೊಂದು ಕಾಲ್​ ಸೆಂಟರ್​ ಹೆಸರಿನಲ್ಲಿ ಅಮೆರಿಕನ್ನರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದರು. ಸದ್ಯ ಪೊಲೀಸರು ಈ ಪ್ರಕರಣವನ್ನು ಭೇದಿಸಿ, 20 ಜನರನ್ನ ಬಂಧಿಸಿದ್ದಾರೆ.

20 arrested
ಬಂಧಿತ ಆರೋಪಿಗಳು
author img

By

Published : Dec 23, 2019, 11:33 AM IST

ಧನ್​ಬಾದ್​​(ಜಾರ್ಖಂಡ್​​): ಕಾಲ್​ಸೆಂಟರ್​ ಹೆಸರಿನಲ್ಲಿ ಅಮೆರಿಕದ ನಾಗರಿಕರಿಗೆ ವಂಚಿಸುತ್ತಿದ್ದ 20 ಆರೋಪಿಗಳನ್ನು ಬಂಧಿಸುವಲ್ಲಿ ಜಾರ್ಖಂಡ್​ ಪೊಲೀಸರು ಯಶಸ್ವಿಯಾಗಿದ್ದಾರೆ.

ಧನ್​ಬಾದ್​​ ನಗರದಲ್ಲಿ 20 ಜನರ ಗುಂಪೊಂದು ಅಮೆರಿಕದ ನಾಗರಿಕರನ್ನ ಗುರಿಯಾಗಿಸಿಕೊಂಡು ಕಾಲ್​ ಸೆಂಟರ್​ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಪಾದಿಸುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಆರೋಪಿಗಳಿಂದ 44 ಕಂಪ್ಯೂಟರ್​, 28 ಐ ಫೋನ್​​ ಹಾಗು 8 ಮೋಡೆಮ್​ಗಳನ್ನ ವಶಕ್ಕೆ ಪಡೆದಿದ್ದಾರೆ.

ಕಾಲ್​ ಸೆಂಟರ್​​ ಹೆಸರಿನಲ್ಲಿ ಅಮೆರಿಕ ನಾಗರಿಕರಿಗೆ ಕರೆ ಮಾಡಿ, ನಿಮ್ಮ ಖಾತೆಯಲ್ಲಿರುವ ಮೊತ್ತವನ್ನು ಕಡಿತಗೊಳಿಸಲಾಗುವುದು ಎಂದು ಹೇಳುತ್ತಿದ್ದರು. ನಂತರ ಈ ಕಡಿತದಿಂದ ಪಾರಾಗಲು ಮೊದಲೇ ಹಣ ಕಟ್ಟತಕ್ಕದ್ದು ಎಂದು ಬೇರೊಂದು ಖಾತೆಯ ನಂಬರ್​ ನೀಡುತ್ತಿದ್ದರು. ಅದಲ್ಲದೆ ಒಂದೊಮ್ಮೆ ನೀವು ಹಣ ಪಾವತಿಸದಿದ್ದರೆ ನಿಮ್ಮ ಖಾತೆ ಮುಚ್ಚಲಾಗುವುದು ಎಂದು ಹೇಳಿ ವಂಚಿಸುತ್ತಿದ್ದರು ಎಂದು ಪೊಲೀಸ್​ ವರಿಷ್ಠಾಧಿಕಾರಿ ಕಿಶೋರ್​ ಕೌಶಲ್​ ತಿಳಿಸಿದ್ದಾರೆ.

ವಿಕ್ರಂತ್ ಸಿಂಗ್ ಮತ್ತು ಜ್ವಾಲಾ ಸಿಂಗ್ ಎಂಬುವರು ಈ ಮೊದಲು ಕಾಲ್​ ಸೆಂಟರ್​ನಲ್ಲಿ ಕಾರ್ಯ ನಿರ್ವಹಿಸಿದ್ದು, ಈ ಅಕ್ರಮ ಕಾಲ್​ ಸೆಂಟರ್​ನ ರೂವಾರಿಗಳಾಗಿದ್ದಾರೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.