ETV Bharat / bharat

ಕೊರೊನಾ ಮತ್ತು ಮಳೆಯಿಂದ ಪೊಲೀಸರನ್ನು ರಕ್ಷಿಸಲಿದೆ ಈ ಕಿಟ್​!! - ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶ್ರೀವಾಸ್ತವ

ಗಡಿಯಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಇದನ್ನು ವೈಯಕ್ತಿಕವಾಗಿ ಪ್ರಯತ್ನಿಸಿದೆ. ನಂತರ ಇದು ಆರಾಮದಾಯಕವಾಗಿ ಕಂಡು ಬಂದಿದೆ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶ್ರೀವಾಸ್ತವ್ ತಿಳಿಸಿದರು.

ಕೊರೊನಾ ಮತ್ತು ಮಳೆಯಿಂದ ಪೊಲೀಸರನ್ನು ರಕ್ಷಿಸಲಿದೆ ಈ ಕಿಟ್

author img

By

Published : Jun 3, 2020, 5:31 PM IST

ಝಾನ್ಸಿ(ಉತ್ತರಪ್ರದೇಶ) : ಕೊರೊನಾ ವೈರಸ್​ ಮತ್ತು ಮಳೆ ಎರಡರಿಂದ ಪೊಲೀಸರನ್ನು ರಕ್ಷಿಸಿಸುವಂತಹ ಪಿಪಿಇ ಕಿಟ್‌ನ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಪೊಲೀಸ್​ ಸಿಬ್ಬಂದಿ ಕಂಡುಹಿಡಿದ್ದಾರೆ.

ಮೊದಲಿಗೆ ಪೊಲೀಸರು ಸ್ಥಳೀಯ ಮಾರಾಟಗಾರರಿಂದ 1,000 ಕಿಟ್​​ಗಳನ್ನು ತರಿಸಿ, ಅವನ್ನು ಮೊದಲ ಹಂತದಲ್ಲಿ ವಿವಿಧ ಘಟಕಗಳಿಗೆ ವಿತರಿಸಲಿದ್ದಾರೆ. ಬಳಿಕ ಅಗತ್ಯತೆಗೆ ಅನುಗುಣವಾಗಿ ಹೆಚ್ಚಿನ ಕಿಟ್​ಗಳನ್ನು ತಯಾರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ರು.

"ನಾನು ಈ ಕಲ್ಪನೆಯ ಕಿಟ್​​ಗಳನ್ನು 15 ದಿನಗಳ ಹಿಂದೆಯೇ ಪಡೆದುಕೊಂಡಿದ್ದೇನೆ. ಗಡಿಯಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಇದನ್ನು ವೈಯಕ್ತಿಕವಾಗಿ ಪ್ರಯತ್ನಿಸಿದೆ. ನಂತರ ಇದು ಆರಾಮದಾಯಕವಾಗಿ ಕಂಡು ಬಂದಿದೆ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶ್ರೀವಾಸ್ತವ್ ತಿಳಿಸಿದರು.

"ಇದನ್ನು ಅಭಿವೃದ್ಧಿಪಡಿಸುವಾಗ ನಾವು ಹಾಟ್​​ಸ್ಪಾಟ್​ ಸ್ಥಳಗಳು, ಕ್ವಾರಂಟೈನ್​ ಪ್ರದೇಶ, ಪೊಲೀಸರ ಮೇಲೆ ದಾಳಿ ಮತ್ತು ಬಂಧನವನ್ನು ಗಮನದಲ್ಲಿಟ್ಟುಕೊಂಡು, ಅಗತ್ಯತೆಗೆ ಅನುಗುಣವಾಗಿ ಸಿದ್ದಪಡಿಸಿದ್ದೇವೆ ಎಂದು ಎಎಸ್​ಪಿ ಹೇಳಿದರು.

ಈ ಕಿಟ್‌ನ ಬೆಲೆ ಕೇವಲ 400 ರೂ. ಆಗಿದೆ. ಇದು ಕೊರೊನಾ ವೈರಸ್​ ರೋಗದ ವಿರುದ್ಧ ಹೋರಾಡುವುದಲ್ಲದೇ, ಮಳೆಯಿಂದಲೂ ಪೊಲೀಸರನ್ನು ರಕ್ಷಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.