ETV Bharat / bharat

ಭಾರತದ ಪ್ರಜಾಪ್ರಭುತ್ವದ ಮುಕುಟ ನಮ್ಮ 'ಸಂವಿಧಾನ': ಕಟ್ಟಕಡೆಯ ಪ್ರಜೆಯ ಆಕಾಂಕ್ಷೆ ಈಡೇರಿದೆಯೇ?

ಸಾಮಾನ್ಯ ನಾಗರಿಕನ ಜೀವನ ಈಗಲೂ ನೆಮ್ಮದಿಯಿಂದ ಇಲ್ಲ ಎಂಬುದನ್ನೂ ನೋವಿನಿಂದ ಒಪ್ಪಿಕೊಳ್ಳಬೇಕಾಗಿದೆ. ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಮೌಲ್ಯಗಳು, ಹೆಚ್ಚುತ್ತಿರುವ ಸಂಕುಚಿತತೆ, ಪ್ರಾದೇಶಿಕ, ಭಾಷಿಕ ಮತ್ತು ಕೋಮು ಭಿನ್ನತೆಗಳು, ರಾಜಕೀಯ ಅಪರಾಧಿಕರಣ ಇವೆಲ್ಲವುಗಳ ಜೊತೆಗೆ ರಾಜಕೀಯ ಪಕ್ಷಗಳ ಅವಕಾಶವಾದಿತನದಂತಹ ಲಕ್ಷಣಗಳನ್ನು ನೋಡಿದರೆ, ಗಾಂಧೀಜಿ ಕಂಡ ಕನಸಿನ ದೇಶ ಇದೇನಾ? ಎಂಬ ಅನುಮಾನ ಮೂಡುತ್ತದೆ.

author img

By

Published : Nov 26, 2019, 4:48 PM IST

Jewel of Democracy
ಸಾಂಧರ್ಭಿಕ ಚಿತ್ರ

ಭೂಮಿಯ ಮೇಲಿರುವ ಇತರ ಜೀವಿಗಳಿಗೆ ಹೋಲಿಸಿದರೆ, ಮನುಷ್ಯ ಜೀವಿಯೊಂದೇ ಹೆಚ್ಚು ವಿವೇಚನೆಯಿಂದ ನಡೆದುಕೊಳ್ಳುವುದು ಹಾಗೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಯಾರಿಗೂ ಕೇಡು ಬಯಸದೇ ಸೌಹಾರ್ದಯುತವಾಗಿ ಬದುಕುವುದು ಎಂಬ ನಂಬಿಕೆಯಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆ, ಆಧುನಿಕ ಜೀವನ ಪದ್ಧತಿ ಲಭ್ಯ ಸಂಪನ್ಮೂಲಗಳ ಕೊರತೆ ಹಾಗೂ ಇದರಿಂದ ಹೆಚ್ಚಿರುವ ಅವಶ್ಯಕತೆಗಳು ಮನುಷ್ಯನನ್ನು ಹೆಚ್ಚು ಸ್ವಾರ್ಥಿಯಾಗಿಸಿದ್ದು, ಸಂಘರ್ಷಗಳು, ವಿನಾಶಕ್ಕೆ ಕಾರಣವಾಗಿವೆ. ಈ ಅನಾಗರಿಕತೆಯನ್ನು ನಿಯಂತ್ರಿಸಲು ಹಾಗೂ ನಿರಂತರವಾಗಿ ಹೆಚ್ಚುತ್ತಿರುವ ಸಾಮಾಜಿಕ ಸಂಕೀರ್ಣತೆಗಳ ನಡುವೆ ಸಮನ್ವಯ ಕಾಪಾಡಿಕೊಳ್ಳಲು, ಸೂಕ್ತವಾದ ನೀತಿ ಹಾಗೂ ನಿಯಮಗಳ ಕೋಶದ ಅವಶ್ಯಕತೆಯಿದ್ದು ಅದನ್ನು 'ಸಂವಿಧಾನ' ಎಂದು ಕರೆಯಲಾಗಿದೆ.

ಆಧುನಿಕ ಮಾನವ ಕೇವಲ ಸಾಮಾಜಿಕ ಜೀವಿಯಷ್ಟೇ ಅಲ್ಲ, ರಾಜಕೀಯ ವ್ಯಕ್ತಿಯೂ ಹೌದು. ಒಂದು ಸಮಾಜವಾಗಿ ನಿರ್ದಿಷ್ಟ ಪ್ರದೇಶದಲ್ಲಿ ಬದುಕುವಾಗ, ಜೀವನವನ್ನು ಸುಗಮಗೊಳಿಸಲು ಆತ ವ್ಯವಸ್ಥೆಯೊಂದನ್ನು ರೂಪಿಸಿದ ಮತ್ತು ಅದನ್ನು 'ದೇಶ' ಎಂದು ಕರೆಯಲಾಗುತ್ತದೆ.

ದೇಶದಿಂದ ರೂಪಿತವಾಗಿದ್ದು 'ಸರಕಾರ' ಎಂಬ ವ್ಯವಸ್ಥೆ. ಪ್ರಜಾಪ್ರಭುತ್ವ ಸರಕಾರಗಳ ಸಾಂವಿಧಾನಿಕ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ, ಅಧಿಕಾರಗಳು, ಕಾರ್ಯಗಳು, ನಾಗರಿಕರ ಹಕ್ಕುಗಳು ಮತ್ತು ಜವಾಬ್ದಾರಿಗಳೆಲ್ಲವೂ ಸಂವಿಧಾನದೊಳಗೆ ಅಡಕವಾಗಿವೆ. ಅದು ದೇಶದ ಸರ್ವೋಚ್ಚ ಸುಗ್ರೀವಾಜ್ಞೆ ಅಥವಾ ಅಧ್ಯಾದೇಶ. ಆಳುವವರು ಮತ್ತು ಆಳಲ್ಪಡುವವರ ನಡುವಿನ ಸಂಬಂಧವನ್ನು ಸಂವಿಧಾನ ನಿಯಂತ್ರಿಸುತ್ತದೆ.

ಸಂವಿಧಾನ ಎಂಬುದು ದೇಶದ ರಚನಾತ್ಮಕ ಅಸ್ತಿಪಂಜರವಿದ್ದಂತೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ, ಸರಕಾರದಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಜನಪ್ರತಿನಿಧಿಗಳು, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಾರ್ವಜನಿಕರಿಗೆ ಹೊಂದಿರುವ ಹೊಣೆಗಾರಿಕೆ ಬಹಳ ಮಹತ್ವದ್ದು. ಈ ಮಹತ್ವದ ಕಾರ್ಯಗಳಿಗೆ ಸಂವಿಧಾನವು ಸ್ಥಿರತೆಯನ್ನು ಒದಗಿಸುತ್ತದೆ. ಸಾಂವಿಧಾನಿಕ ಸಮಗ್ರತೆಯೇ ಪ್ರಜಾಪ್ರಭುತ್ವದ ಮೈಲುಗಲ್ಲು.

ಪ್ರಮುಖ ಧ್ಯೇಯೋದ್ದೇಶಗಳು:

ಪ್ರಜಾಪ್ರಭುತ್ವದಲ್ಲಿ, ಪ್ರಜೆಗಳೇ ಆಳುವವರು ಹಾಗೂ ಆಳಿಸಿಕೊಳ್ಳುವವರು. ಹೀಗಿರುವಾಗ, ಸರಕಾರವನ್ನು ನಿಯಂತ್ರಿಸಲು ಸಂವಿಧಾನದ ಅವಶ್ಯಕತೆ ಇದೆಯೇ? ʼಹೌದುʼ ಎಂಬುದೇ ಅದಕ್ಕೆ ಉತ್ತರ. ಈ ಕೆಳಗಿನ ಐದು ಪ್ರಮುಖ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಸಂವಿಧಾನ ಸೂಕ್ತ ಸಾಧನವಾಗಿದೆ:

  • ಸರಕಾರದ ಅಧಿಕಾರಗಳನ್ನು ಮಿತಿಯಲ್ಲಿಡಲು
  • ಅಧಿಕಾರ ದುರ್ಬಳಕೆಯಿಂದ ಸಾಮಾನ್ಯ ಮನುಷ್ಯನನ್ನು ರಕ್ಷಿಸಲು
  • ಪ್ರಸಕ್ತ ಹಾಗೂ ಭವಿಷ್ಯದ ತಲೆಮಾರುಗಳಲ್ಲಿ ಉಂಟಾಗಬಹುದಾದ ಅನಿರೀಕ್ಷಿತ ಬದಲಾವಣೆಗಳನ್ನು ಸಹಿಸಲು ಮತ್ತು ನಿಯಂತ್ರಿಸಲು
  • ಸಮಾಜದ ದಮನಕ್ಕೊಳಗಾದ ವರ್ಗಗಳನ್ನು ಸಬಲಗೊಳಿಸಲು
  • ಮೋಸದ ಅಸಮಾನತೆಗಳನ್ನು ನಿವಾರಿಸಲು ಹಾಗು ಸಮಾನ ಸಮಾಜವನ್ನು ಸ್ಥಾಪಿಸಲು

ಈ ಗುರಿಗಳನ್ನು ಈಡೇರಿಸುವ ಉದ್ದೇಶದಿಂದ ಸಂವಿಧಾನದಲ್ಲಿ ಕೆಲವು ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ. ಅವು ಯಾವವೆಂದರೆ:

ಸೂಕ್ತ ಹಕ್ಕುಗಳಿಂದ ರಕ್ಷಣೆ:

ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಹಾಗೂ ಸರಕಾರದ ಅಧಿಕಾರವನ್ನು ನಿರ್ಬಂಧಿಸುತ್ತದೆ. ದೇಶವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಸಾಧಿಸಬೇಕು ಎಂದು ನಿರ್ದೇಶಕ ತತ್ವಗಳು ಆದೇಶಿಸುತ್ತವೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂವಿಧಾನದಲ್ಲಿ ಅಡಕವಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಭದ್ರತಾ ಭಾವನೆಯನ್ನು ಉಂಟು ಮಾಡುತ್ತದೆ. ಧರ್ಮ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡದಂತೆ ಜಾತ್ಯತೀತ ಅಂಶವು ನಿರ್ಬಂಧಿಸುತ್ತದೆ. ಪುರಾತನ ಕಾಲದಿಂದ ಆಚರಣೆಯಲ್ಲಿದ್ದ ಅಸ್ಪೃಶ್ಯತೆಯ ಆಚರಣೆಯನ್ನು ಸಂವಿಧಾನದ 17ನೇ ಅನುಚ್ಛೇದವು ನಿರ್ಬಂಧಿಸಿದೆ. ಈ ರೀತಿಯ ಭರವಸೆಗಳ ಜೊತೆಗೆ, ದೇಶದಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಿರುವುದು ಮತ್ತೊಂದು ಪ್ರಮುಖ ಅಂಶ.

ಅರೆ ಒಕ್ಕೂಟ ವ್ಯವಸ್ಥೆ:

ಭಾರತೀಯ ಸಂವಿಧಾನದ ಮೇಲೆ ಅಮೆರಿಕದ ಸಂವಿಧಾನದ ಪ್ರಭಾವ ಇದ್ದಾಗ್ಯೂ, ನಮ್ಮ ಸಂವಿಧಾನ ನಿರ್ಮಾತೃಗಳು ಅರೆ ಒಕ್ಕೂಟ ವ್ಯವಸ್ಥೆಗೆ ಒಲವು ತೋರಿದ್ದಾರೆ. ಧರ್ಮದ ತಳಹದಿಯ ಮೇಲೆ ಭಾರತ ಉಪಖಂಡ ವಿಭಜನೆಯಾಗಿದ್ದು ಮತ್ತು ಈಶಾನ್ಯ ಭಾರತದ ಜನ ಪ್ರತ್ಯೇಕತಾ ಮನೋಭಾವನೆ ತೋರುತ್ತಿದ್ದುದು ವಿಶಿಷ್ಟ ಸಾಂವಿಧಾನಿಕ ವ್ಯವಸ್ಥೆಯೊಂದನ್ನು ರೂಪಿಸಲು ಪ್ರೇರೇಪಿಸಿತು. ಬಲವಾದ ಕೇಂದ್ರ ಸರಕಾರ ಮತ್ತು ಕೇಂದ್ರದ ಸಹಕಾರದಿಂದ ಕೆಲಸ ಮಾಡುವ ರಾಜ್ಯಗಳನ್ನೊಳಗೊಂಡ ಒಕ್ಕೂಟ ಮಾದರಿಯನ್ನು ಈ ಅರೆ ಒಕ್ಕೂಟ ವ್ಯವಸ್ಥೆಯು ಒಳಗೊಂಡಿದೆ.

ಸಂಸದೀಯ ಸರಕಾರ:

ಅಧ್ಯಕ್ಷೀಯ ಮತ್ತು ಸಂಸದೀಯ ವ್ಯವಸ್ಥೆಗಳೆರಡರ ಔಚಿತ್ಯವನ್ನು ಕೂಲಂಕುಷವಾಗಿ ಪರಿಶೀಲಿಸಿರುವ ನಮ್ಮ ಸಂವಿಧಾನ ನಿರ್ಮಾತೃಗಳು, ಸಂಸದೀಯ ಮಾದರಿಯ ಸರಕಾರವನ್ನು ಭಾರತೀಯ ಜನತೆಗೆ ಆಯ್ಕೆ ಮಾಡಿದ್ದಾರೆ. ದೇಶದ ವಿವಿಧ ಭಾಗಗಳು ಮತ್ತು ವಿಭಾಗಗಳಿಗೆ ಆಡಳಿತ ಮತ್ತು ಹೊಣೆಗಾರಿಕೆಯಲ್ಲಿ ಸೂಕ್ತ ಸ್ಥಾನ ಕಲ್ಪಿಸಿದ್ದಾರೆ. ಅಧ್ಯಕ್ಷೀಯ ಮಾದರಿಯಲ್ಲಿ ಕಂಡು ಬರುವ ಕೇಂದ್ರಿತ ಅಧಿಕಾರ ವ್ಯವಸ್ಥೆಯನ್ನು ಇದು ತಪ್ಪಿಸುತ್ತದೆ. ಸಂಸದೀಯ ಶೈಲಿಯ ಸರಕಾರವು ತಾತ್ಕಾಲಿಕ ಅವಧಿಯ ನಿರಂಕುಶ ಸರಕಾರ ವ್ಯವಸ್ಥೆಗೆ ಪರಿಹಾರವಾಗಿದೆ. ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗಳನ್ನು ಒಳಗೊಳ್ಳುವ ಹಾಗೂ ಅಗತ್ಯ ಬಿದ್ದರೆ ಅವುಗಳನ್ನು ತೆಗೆದುಹಾಕುವಂತಹ ಸರಕಾರಗಳ ರಚನೆಗೆ ದಾರಿ ಮಾಡಿಕೊಟ್ಟಿದೆ.

ಆಕಾಂಕ್ಷೆಗಳು ಈಡೇರಿವೆಯೆ?:

ಕಳೆದ 70 ವರ್ಷಗಳಲ್ಲಿ, ಸಾಮಾನ್ಯ ನಾಗರಿಕನ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸಂವಿಧಾನ ಕೆಲಸ ಮಾಡಿದೆಯೆ? ಇದಕ್ಕೆ ಉತ್ತರ: ಹೌದು ಮತ್ತು ಇಲ್ಲ. ಎರಡನೇ ಜಾಗತಿಕ ಮಹಾಯುದ್ಧದ ನಂತರ ಸ್ವಾತಂತ್ರ್ಯ ಪಡೆದ ಹಲವಾರು ದೇಶಗಳು ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಹೊರಳಿವೆ. ಯುಗೋಸ್ಲೋವಿಯಾ, ಸೋವಿಯಟ್‌ ಒಕ್ಕೂಟ ಮತ್ತು ಸುಡಾನ್‌ನಂತಹ ದೇಶಗಳು ವಿಭಜನೆಯಾಗಿವೆ. ಆದರೆ, ಪ್ರಜಾಪ್ರಭುತ್ವ ದೇಶವಾಗಿ ಮತ್ತು ಭೌಗೋಳಿಕವಾಗಿ ಅಖಂಡ ದೇಶವಾಗಿ ಭಾರತ ಯಶಸ್ವಿಯಾಗಿ ಮುಂದುವರಿಯಲು ಸಂವಿಧಾನದಲ್ಲಿ ಅಳವಡಿಸಲಾಗಿರುವ ನಿಯಂತ್ರಣ ಮತ್ತು ಸಮನ್ವಯದ ಅಂಶಗಳೇ ಪ್ರಮುಖ ಕಾರಣ. ಇತರ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಆದರೆ, ಸಾಮಾನ್ಯ ನಾಗರಿಕನ ಜೀವನ ಈಗಲೂ ನೆಮ್ಮದಿಯಿಂದ ಇಲ್ಲ ಎಂಬುದನ್ನೂ ನೋವಿನಿಂದ ಒಪ್ಪಿಕೊಳ್ಳಬೇಕಾಗಿದೆ. ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಮೌಲ್ಯಗಳು, ಹೆಚ್ಚುತ್ತಿರುವ ಸಂಕುಚಿತತೆ, ಪ್ರಾದೇಶಿಕ, ಭಾಷಿಕ ಮತ್ತು ಕೋಮು ಭಿನ್ನತೆಗಳು, ರಾಜಕೀಯ ಅಪರಾಧಿಕರಣ ಇವೆಲ್ಲವುಗಳ ಜೊತೆಗೆ ರಾಜಕೀಯ ಪಕ್ಷಗಳ ಅವಕಾಶವಾದಿತನದಂತಹ ಲಕ್ಷಣಗಳನ್ನು ನೋಡಿದರೆ, ಗಾಂಧೀಜಿ ಕಂಡ ಕನಸಿನ ದೇಶ ಇದೇನಾ ಎಂಬ ಅನುಮಾನ ಮೂಡುತ್ತದೆ. ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ, ನಾವೆಲ್ಲ ಇದಕ್ಕೆ ಹೊಣೆಗಾರರು. ಪ್ರತಿಯೊಂದು ವರ್ಗವೂ ತನ್ನ ಹೊಣೆಗಾರಿಕೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅವರು ಸಂವಿಧಾನದ ಕಡೆ ಬೆರಳು ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಸಮಗ್ರತೆ, ಸಮಾನತೆ ಮತ್ತು ಪ್ರಗತಿ ಸಾಧಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

-ಡಾ. ಬಿಜೆಪಿ ಕೃಪಾದಾನಮ್‌, ರಾಜ್ಯಶಾಸ್ತ್ರ ಉಪನ್ಯಾಸಕ

Please Publish it

ಪ್ರಜಾಪ್ರಭುತ್ವದ ರತ್ನ

ಭೂಮಿಯ ಮೇಲಿರುವ ಇತರ ಜೀವಿಗಳಿಗೆ ಹೋಲಿಸಿದರೆ, ಮನುಷ್ಯ ಜೀವಿಯೊಂದೇ ಹೆಚ್ಚು ವಿವೇಚನೆಯಿಂದ ನಡೆದುಕೊಳ್ಳುವುದು ಹಾಗೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಯಾರಿಗೂ ಕೇಡು ಬಯಸದೇ ಸೌಹಾರ್ದಯುತವಾಗಿ ಬದುಕುವುದು ಎಂಬ ನಂಬಿಕೆಯಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆ, ಆಧುನಿಕ ಜೀವನ ಪದ್ಧತಿ ತಂದ ಸಂಪನ್ಮೂಲಗಳ ಕೊರತೆ ಹಾಗೂ ಇದರಿಂದ ಹೆಚ್ಚಿರುವ ಅವಶ್ಯಕತೆಗಳು ಮನುಷ್ಯನನ್ನು ಹೆಚ್ಚು ಸ್ವಾರ್ಥಿಯಾಗಿಸಿದ್ದು, ಸಂಘರ್ಷಗಳು, ವಿನಾಶಕತಗೆ ಕಾರಣವಾಗಿವೆ. ಈ ಅನಾಗರಿಕತೆಯನ್ನು ನಿಯಂತ್ರಿಸಲು ಹಾಗೂ ನಿರಂತರವಾಗಿ ಹೆಚ್ಚುತ್ತಿರುವ ಸಾಮಾಜಿಕ ಸಂಕೀರ್ಣತೆಗಳ ನಡುವೆ ಸಮನ್ವಯ ಕಾಪಾಡಿಕೊಳ್ಳಲು, ಸೂಕ್ತವಾದ ನೀತಿ ಹಾಗೂ ನಿಯಮಗಳ ಕೋಶದ ಅವಶ್ಯಕತೆಯಿದ್ದು ಅದನ್ನು ಸಂವಿಧಾನ ಎಂದು ಕರೆಯಲಾಗಿದೆ.  

ಆಧುನಿಕ ಮಾನವ ಕೇವಲ ಸಾಮಾಜಿಕ ಜೀವಿಯಷ್ಟೇ ಅಲ್ಲ, ರಾಜಕೀಯ ವ್ಯಕ್ತಿಯೂ ಹೌದು. ಒಂದು ಸಮಾಜವಾಗಿ ನಿರ್ದಿಷ್ಟ ಪ್ರದೇಶದಲ್ಲಿ ಬದುಕುವಾಗ, ಜೀವನವನ್ನು ಸುಗಮಗೊಳಿಸಲು ಆತ ವ್ಯವಸ್ಥೆಯೊಂದನ್ನು ರೂಪಿಸಿದ ಮತ್ತು ಅದನ್ನು ದೇಶ ಎಂದು ಕರೆಯಲಾಗುತ್ತದೆ.

ದೇಶದಿಂದ ರೂಪಿತವಾಗಿದ್ದು ಸರಕಾರ ಎಂಬ ವ್ಯವಸ್ಥೆ. ಪ್ರಜಾಪ್ರಭುತ್ವ ಸರಕಾರಗಳ ಸಾಂವಿಧಾನಿಕ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ, ಅಧಿಕಾರಗಳು, ಕಾರ್ಯಗಳು, ನಾಗರಿಕರ ಹಕ್ಕುಗಳು ಮತ್ತು ಜವಾಬ್ದಾರಿಗಳೆಲ್ಲವೂ ಸಂವಿಧಾನದೊಳಗೆ ಅಡಕವಾಗಿವೆ. ಅದು ದೇಶದ ಸರ್ವೋಚ್ಚ ಸುಗ್ರೀವಾಜ್ಞೆ ಅಥವಾ ಅಧ್ಯಾದೇಶ. ಆಳುವವರು ಮತ್ತು ಆಳಲ್ಪಡುವವರ ನಡುವಿನ ಸಂಬಂಧವನ್ನು ಸಂವಿಧಾನ ನಿಯಂತ್ರಿಸುತ್ತದೆ.

ಸಂವಿಧಾನ ಎಂಬುದು ದೇಶದ ರಚನಾತ್ಮಕ ಅಸ್ತಿಪಂಜರವಿದ್ದಂತೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ, ಸರಕಾರದಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಜನಪ್ರತಿನಿಧಿಗಳು, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಾರ್ವಜನಿಕರಿಗೆ ಹೊಂದಿರುವ ಹೊಣೆಗಾರಿಕೆ ಬಹಳ ಮಹತ್ವದ್ದು. ಈ ಮಹತ್ವದ ಕಾರ್ಯಗಳಿಗೆ ಸಂವಿಧಾನವು ಸ್ಥಿರತೆಯನ್ನು ಒದಗಿಸುತ್ತದೆ. ಸಾಂವಿಧಾನಿಕ ಸಮಗ್ರತೆಯೇ ಪ್ರಜಾಪ್ರಭುತ್ವದ ಮೂಲೆಗಲ್ಲು.

ಪ್ರಮುಖ ಧ್ಯೇಯೋದ್ದೇಶಗಳು

ಪ್ರಜಾಪ್ರಭುತ್ವದಲ್ಲಿ, ಪ್ರಜೆಗಳೇ ಆಳುವವರು ಹಾಗೂ ಆಳಿಸಿಕೊಳ್ಳುವವರು. ಹೀಗಿರುವಾಗ, ಸರಕಾರವನ್ನು ನಿಯಂತ್ರಿಸಲು ಸಂವಿಧಾನದ ಅವಶ್ಯಕತೆ ಇದೆಯೆ? ʼಹೌದುʼ ಎಂಬುದೇ ಅದಕ್ಕೆ ಉತ್ತರ. ಈ ಕೆಳಗಿನ ಐದು ಪ್ರಮುಖ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಸಂವಿಧಾನ ಸೂಕ್ತ ಸಾಧನವಾಗಿದೆ:

·         ಸರಕಾರದ ಅಧಿಕಾರಗಳನ್ನು ಮಿತಿಯಲ್ಲಿಡಲು.

·         ಅಧಿಕಾರ ದುರ್ಬಳಕೆಯಿಂದ ಸಾಮಾನ್ಯ ಮನುಷ್ಯನನ್ನು ರಕ್ಷಿಸಲು.

·         ಪ್ರಸಕ್ತ ಹಾಗೂ ಭವಿಷ್ಯದ ತಲೆಮಾರುಗಳಲ್ಲಿ ಉಂಟಾಗಬಹುದಾದ ಅನಿರೀಕ್ಷಿತ ಬದಲಾವಣೆಗಳನ್ನು ಸಹಿಸಲು ಮತ್ತು ನಿಯಂತ್ರಿಸಲು.

·         ಸಮಾಜದ ದಮನಕ್ಕೊಳಗಾದ ವರ್ಗಗಳನ್ನು ಸಬಲಗೊಳಿಸಲು.

·         ಮೋಸದ ಅಸಮಾನತೆಗಳನ್ನು ನಿವಾರಿಸಲು ಹಾಗೂ ಸಮಾನ ಸಮಾಜವನ್ನು ಸ್ಥಾಪಿಸಲು.

ಈ ಗುರಿಗಳನ್ನು ಈಡೇರಿಸುವ ಉದ್ದೇಶದಿಂದ ಸಂವಿಧಾನದಲ್ಲಿ ಕೆಲವು ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ. ಅವು ಯಾವವೆಂದರೆ:

ಸೂಕ್ತ ಹಕ್ಕುಗಳಿಂದ ರಕ್ಷಣೆ

ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ, ಹಾಗೂ ಸರಕಾರದ ಅಧಿಕಾರವನ್ನು ನಿರ್ಬಂಧಿಸುತ್ತದೆ. ದೇಶವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಸಾಧಿಸಬೇಕು ಎಂದು ನಿರ್ದೇಶಕ ತತ್ವಗಳು ಆದೇಶಿಸುತ್ತವೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂವಿಧಾನದಲ್ಲಿ ಅಡಕವಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಭದ್ರತಾ ಭಾವನೆಯನ್ನು ಉಂಟು ಮಾಡುತ್ತದೆ. ಧರ್ಮ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡದಂತೆ ಜಾತ್ಯತೀತ ಅಂಶವು ನಿರ್ಬಂಧಿಸುತ್ತದೆ. ಪುರಾತನ ಕಾಲದಿಂದ ಆಚರಣೆಯಲ್ಲಿದ್ದ ಅಸ್ಪೃಶ್ಯತೆಯ ಆಚರಣೆಯನ್ನು ಸಂವಿಧಾನದ ೧೭ನೇ ಅನುಚ್ಛೇದವು ನಿರ್ಬಂಧಿಸಿದೆ. ಈ ರೀತಿಯ ಭರವಸೆಗಳ ಜೊತೆಗೆ, ದೇಶದಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಿರುವುದು, ಮತ್ತೊಂದು ಪ್ರಮುಖ ಅಂಶ.

ಅರೆ ಒಕ್ಕೂಟ ವ್ಯವಸ್ಥೆ

ಭಾರತೀಯ ಸಂವಿಧಾನದ ಮೇಲೆ ಅಮೆರಿಕದ ಸಂವಿಧಾನದ ಪ್ರಭಾವ ಇದ್ದಾಗ್ಯೂ, ನಮ್ಮ ಸಂವಿಧಾನ ನಿರ್ಮಾತೃಗಳು ಅರೆ ಒಕ್ಕೂಟ ವ್ಯವಸ್ಥೆಗೆ ಒಲವು ತೋರಿದ್ದಾರೆ. ಧರ್ಮದ ತಳಹದಿಯ ಮೇಲೆ ಭಾರತ ಉಪಖಂಡ ವಿಭಜನೆಯಾಗಿದ್ದು ಮತ್ತು ಈಶಾನ್ಯ ಭಾರತದ ಜನ ಪ್ರತ್ಯೇಕತಾ ಮನೋಭಾವನೆ ತೋರುತ್ತಿದ್ದುದು ವಿಶಿಷ್ಟ ಸಾಂವಿಧಾನಿಕ ವ್ಯವಸ್ಥೆಯೊಂದನ್ನು ರೂಪಿಸಲು ಪ್ರೇರೇಪಿಸಿತು. ಬಲವಾದ ಕೇಂದ್ರ ಸರಕಾರ ಮತ್ತು ಕೇಂದ್ರದ ಸಹಕಾರದಿಂದ ಕೆಲಸ ಮಾಡುವ ರಾಜ್ಯಗಳನ್ನೊಳಗೊಂಡ ಒಕ್ಕೂಟ ಮಾದರಿಯನ್ನು ಈ ಅರೆ ಒಕ್ಕೂಟ ವ್ಯವಸ್ಥೆಯು ಒಳಗೊಂಡಿದೆ.

ಸಂಸದೀಯ ಸರಕಾರ

ಅಧ್ಯಕ್ಷೀಯ ಮತ್ತು ಸಂಸದೀಯ ವ್ಯವಸ್ಥೆಗಳೆರಡರ ಔಚಿತ್ಯವನ್ನು ಕೂಲಂಕಷವಾಗಿ ಪರಿಶೀಲಿಸಿರುವ ನಮ್ಮ ಸಂವಿಧಾನ ನಿರ್ಮಾತೃಗಳು, ಸಂಸದೀಯ ಮಾದರಿಯ ಸರಕಾರವನ್ನು ಭಾರತೀಯ ಜನತೆಗೆ ಆಯ್ಕೆ ಮಾಡಿದ್ದಾರೆ. ದೇಶದ ವಿವಿಧ ಭಾಗಗಳು ಮತ್ತು ವಿಭಾಗಗಳಿಗೆ ಆಡಳಿತ ಮತ್ತು ಹೊಣೆಗಾರಿಕೆಯಲ್ಲಿ ಸೂಕ್ತ ಸ್ಥಾನ ಕಲ್ಪಿಸಿದ್ದಾರೆ. ಅಧ್ಯಕ್ಷೀಯ ಮಾದರಿಯಲ್ಲಿ ಕಂಡು ಬರುವ ಕೇಂದ್ರಿತ ಅಧಿಕಾರ ವ್ಯವಸ್ಥೆಯನ್ನು ಇದು ತಪ್ಪಿಸುತ್ತದೆ. ಸಂಸದೀಯ ಶೈಲಿಯ ಸರಕಾರವು ತಾತ್ಕಾಲಿಕ ಅವಧಿಯ ನಿರಂಕುಶ ಸರಕಾರ ವ್ಯವಸ್ಥೆಗೆ ಪರಿಹಾರವಾಗಿದೆ. ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗಳನ್ನು ಒಳಗೊಳ್ಳುವ ಹಾಗೂ ಅಗತ್ಯ ಬಿದ್ದರೆ ಅವುಗಳನ್ನು ತೆಗೆದುಹಾಕುವಂತಹ ಸರಕಾರಗಳ ರಚನೆಗೆ ದಾರಿ ಮಾಡಿಕೊಟ್ಟಿದೆ.

ಆಕಾಂಕ್ಷೆಗಳು ಈಡೇರಿವೆಯೆ?

ಕಳೆದ ೭೦ ವರ್ಷಗಳಲ್ಲಿ, ಸಾಮಾನ್ಯ ನಾಗರಿಕನ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸಂವಿಧಾನ ಕೆಲಸ ಮಾಡಿದೆಯೆ? ಇದಕ್ಕೆ ಉತ್ತರ: ಹೌದು ಮತ್ತು ಇಲ್ಲ. ಎರಡನೇ ಜಾಗತಿಕ ಮಹಾಯುದ್ಧದ ನಂತರ ಸ್ವಾತಂತ್ರ್ಯ ಪಡೆದ ಹಲವಾರು ದೇಶಗಳು ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಹೊರಳಿವೆ. ಯುಗೋಸ್ಲೋವಿಯಾ, ಸೋವಿಯಟ್‌ ಒಕ್ಕೂಟ ಮತ್ತು ಸುಡಾನ್‌ನಂತಹ ದೇಶಗಳು ವಿಭಜನೆಯಾಗಿವೆ. ಆದರೆ, ಪ್ರಜಾಪ್ರಭುತ್ವ ದೇಶವಾಗಿ ಮತ್ತು ಭೌಗೋಳಿಕವಾಗಿ ಅಖಂಡ ದೇಶವಾಗಿ ಭಾರತ ಯಶಸ್ವಿಯಾಗಿ ಮುಂದುವರಿಯಲು ಸಂವಿಧಾನದಲ್ಲಿ ಅಳವಡಿಸಲಾಗಿರುವ ನಿಯಂತ್ರಣ ಮತ್ತು ಸಮನ್ವಯದ ಅಂಶಗಳೇ ಪ್ರಮುಖ ಕಾರಣ. ಇತರ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಆದರೆ, ಸಾಮಾನ್ಯ ನಾಗರಿಕನ ಜೀವನ ಈಗಲೂ ನೆಮ್ಮದಿಯಿಂದ ಇಲ್ಲ ಎಂಬುದನ್ನೂ ನೋವಿನಿಂದ ಒಪ್ಪಿಕೊಳ್ಳಬೇಕಾಗಿದೆ. ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಮೌಲ್ಯಗಳು, ಹೆಚ್ಚುತ್ತಿರುವ ಸಂಕುಚಿತತೆ, ಪ್ರಾದೇಶಿಕ, ಭಾಷಿಕ ಮತ್ತು ಕೋಮು ಭಿನ್ನತೆಗಳು, ರಾಜಕೀಯ ಅಪರಾಧಿಕರಣ; ಇವೆಲ್ಲವುಗಳ ಜೊತೆಗೆ ರಾಜಕೀಯ ಪಕ್ಷಗಳ ಅವಕಾಶವಾದಿತನದಂತಹ ಲಕ್ಷಣಗಳನ್ನು ನೋಡಿದರೆ, ಗಾಂಧೀಜಿ ಕಂಡ ಕನಸಿನ ದೇಶ ಇದೇನಾ ಎಂಬ ಅನುಮಾನ ಮೂಡುತ್ತದೆ. ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ, ನಾವೆಲ್ಲ ಇದಕ್ಕೆ ಹೊಣೆಗಾರರು. ಪ್ರತಿಯೊಂದು ವರ್ಗವೂ ತನ್ನ ಹೊಣೆಗಾರಿಕೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅವರು ಸಂವಿಧಾನದ ಕಡೆ ಬೆರಳು ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಸಮಗ್ರತೆ, ಸಮಾನತೆ ಮತ್ತು ಪ್ರಗತಿ ಸಾಧಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

- ಲೇಖನವನ್ನು ತೆಲುಗಿನಿಂದ ಅನುವಾದಿಸಿದ್ದು ಡಾ. ಬಿಜೆಪಿ ಕೃಪಾದಾನಮ್‌, ರಾಜ್ಯಶಾಸ್ತ್ರ ಉಪನ್ಯಾಸಕ

-------------

ETV Bharat Logo

Copyright © 2024 Ushodaya Enterprises Pvt. Ltd., All Rights Reserved.