ನವದೆಹಲಿ: ಅಪಾರ ನಷ್ಟದಲ್ಲಿರುವ ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಎಂದು ಖ್ಯಾತಿ ಪಡೆದಿರುವ ಜೆಟ್ ಏರ್ವೇಸ್ ತನ್ನ ಕಂಪನಿ ಬಳಿ ಈಗ ಉದ್ಯೋಗಿಗಳಿಗೆ ಸಂಬಳ ಕೊಡಲೂ ಕಾಸಿಲ್ಲ.
ಈ ತಿಂಗಳ ಸಂಬಳ ಸಿಗದೆ ಹೈರಾಣಾಗಿರುವ ಜೆಟ್ ಏರ್ವೇಸ್ ಪೈಲಟ್ಗಳು ಏಪ್ರಿಲ್ 1ರೊಳಗೆ ಸಂಬಳ ಕೊಡದಿದ್ದರೆ ವಿಮಾನ ಚಾಲನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಮೊದಲೇ ನಷ್ಟದಲ್ಲಿರುವ ಕಂಪನಿಯು ಉದ್ಯೋಗಿಗಳ ಈ ಪ್ರತಿಭಟನೆಯಿಂದಾಗಿ ಇನ್ನಷ್ಟು ಹೈರಾಣಾಗಿದ್ದು, ನಷ್ಟದ ಸುಳಿಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.
ಜೆಟ್ ಏರ್ವೇಸ್ನ ಷೇರುಗಳು ಮಂಗಳವಾರ ಶೇ.5ರಷ್ಟು ಕುಸಿದಿದ್ದು, ಕಂಪನಿಯಲ್ಲಿ ಶೇ. 24ರಷ್ಟು ಷೇರು ಹೊಂದಿರುವ ಸ್ಟೇಕ್ ಹೋಲ್ಡರ್ಇತಿಹಾದ್ ಸಂಸ್ಥೆಯು ಬಂಡವಾಳ ಹೂಡಲು ಹಿಂದೇಟುಹಾಕುತ್ತಿದೆ. ಕಂಪನಿಯ ಸಂಸ್ಥಾಪಕ ನರೇಶ್ ಗೋಯಲ್ ಅವರು ಸದ್ಯ ಮೂರನೇ ಒಂದು ಭಾಗದಷ್ಟು ವಿಮಾನಗಳ ಮೇಲೆ ತಮ್ಮ ಅಸ್ತಿತ್ವ ಕಳೆದುಕೊಮಡಿದ್ದು 119 ವಿಮಾನಗಳ ಪೈಕಿ 41 ವಿಮಾನಗಳು ಜೆಟ್ ಏರ್ವೇಸ್ ಹಿಡಿತದಲ್ಲಿಲ್ಲ ಎಂದು ಹೇಳಲಾಗುತ್ತಿದೆ.
ಸಹೋದ್ಯೋಗಿಗಳ ಸಮಸ್ಯೆ, ವಿಮಾನದ ಕೊರತೆ ಎದುರಿಸುತ್ತಿರುವ ಜೆಟ್ ಏರ್ವೇಸ್ ವಿಮಾನ ಹಾರಾಟ ನಿಧಾನವಾಗುತ್ತಿದೆ, ಸೇವೆ ಸರಿಯಿಲ್ಲ ಎಂಬ ದೂರುಗಳು ಪ್ರಯಾಣಿಕರಿಂದ ಕೇಳಿಬರುತ್ತಿದೆ.