ETV Bharat / bharat

ಭಾರತದಲ್ಲಿ ದುಷ್ಕೃತ್ಯ ಎಸಗಲು ಅಂದೇ ಶಪಥ ಮಾಡಿತ್ತು ಜೈಷೆ... ಕಣ್ಮುಚ್ಚಿ ಕುಳಿತಿತ್ತೇ ಪಾಕ್?

ಭಾರತದ ವಿರುದ್ಧ ಯುದ್ಧ ನಡೆಸುವುದಾಗಿ ಜೈಷೆ ಮೊಹಮ್ಮದ್​ ಸಂಘಟನೆ 2017ರ ಪಾಕ್​ ಸಮಾವೇಶದಲ್ಲಿ ನಿರ್ಧಾರ ಮಾಡಿತ್ತು

ಜೈಷೆ ಮುಖ್ಯಸ್ಥ ಮಸೂದ್​ ಅಜರ್
author img

By

Published : Mar 1, 2019, 3:46 PM IST

ನವದೆಹಲಿ: ಪುಲ್ವಾಮದಲ್ಲಿ ಪೈಶಾಚಿಕ ದಾಳಿ ನಡೆಸಿ, ವೀರ ಯೋಧರ ರಕ್ತ ಹರಿಸಿದ ಉಗ್ರ ಸಂಘಟನೆ ಜೈಷೆ ಮೊಹಮ್ಮದ್​ ಎರಡು ವರ್ಷಗಳ ಹಿಂದೆಯೇ ಭಾರತದ ವಿರುದ್ಧ ಯುದ್ಧ ನಡೆಸುವುದಾಗಿ ಶಪಥ ಮಾಡಿತ್ತು ಎಂದು ಗುಪ್ತಚರ ವರದಿ ಹೇಳಿದೆ.

2017 ನವೆಂಬರ್​ 27ರಂದು ಪಾಕಿಸ್ತಾನದ ಒಕಾರ ಜಿಲ್ಲೆಯಲ್ಲಿ ಜೈಷೆ ಆಯೋಜಿಸಿದ್ದ ಸಮ್ಮೇಳನದಲ್ಲಿ 2 ಸಾವಿರ ಮಂದಿ ಪಾಲ್ಗೊಂಡಿದ್ದರು. ಜೈಷೆ ಮುಖ್ಯಸ್ಥ ಮಸೂದ್​ ಅಜರ್​ನೇ ಇದರ ಮುಂದಾಳತ್ವ ವಹಿಸಿದ್ದ. ಜೈಷೆನ ಅಬ್ದುಲ್​ ರಾವುಫ್​ ಅಸ್ಘರ್​, ಮೊಹಮ್ಮದ್​ ಮಸ್ಕೂದ್​ ಹಾಗೂ ಅಬ್ದುಲ್​ ಮಲಿಕ್​ ತಾಹಿರ್​ ಪ್ರಧಾನ ಭಾಷಣ ಮಾಡಿದ್ದರು. ಈ ವೇಳೆ ಅವರ ಭಾಷೆಯಲ್ಲಿ ಘಾಜ್ವೆ ಇ ಹಿಂದ್​ (ಪವಿತ್ರ ಯುದ್ಧ) ನಡೆಸುವುದಾಗಿ ಶಪಥ ಮಾಡಿದ್ದರು.

ಪಾಕ್​ನಲ್ಲಿಯೇ ಬಹಿರಂಗವಾಗಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿತ್ತು ಎಂಬುದನ್ನು ಇದು ಸಾಬೀತುಪಡಿಸುತ್ತಿದೆ.

ಅಂದು ಪ್ರಚೋದನಕಾರಿ ಭಾಷಣ ಮಾಡಿದ್ದ ಅಸ್ಘರ್​, ಇಂಡೋ-ಪಾಕ್​ನ ಸ್ನೇಹದಿಂದ, ದ್ವಿಪಕ್ಷೀಯ ವ್ಯಾಪಾರದಿಂದ ಜಿಹಾದ್​ಗಾಗಿ ಹಲವಾರು ಯುವಕರು ಬಲಿದಾನ ಮಾಡುವುದು ಮಾತ್ರ ನಿಲ್ಲುವುದಿಲ್ಲ ಎಂದಿದ್ದ. ಅಲ್ಲದೆ, ಇದೇ ಮಾತುಗಳು 2018ರ ಫೆಬ್ರವರಿಯಲ್ಲಿ ಶೋಬಾ ಎ ತಾರುಫ್​ (ಪರಿಚಯ ವಿಭಾಗ) ನಡೆಸಿದ 13 ದಿನಗಳ ಸಂವಾದದಲ್ಲಿ ಸಹ ಮುಂದುವರೆದವು. ಗೋಷ್ಠಿಯಲ್ಲಿ 65 ಉಲ್ಮಾ (ಧಾರ್ಮಿಕ ಗುರುಗಳು) ಸೇರಿ 700 ಮಂದಿ ಭಾಗವಹಿಸಿದ್ದರು ಎಂದೂ ಹೇಳಲಾಗಿದೆ.

ಅದೇ ತಿಂಗಳ 10ರಂದು ಜೈಷೆ ಉಗ್ರರು ಜಮ್ಮುವಿನ ಸಂಜ್ವಾನ ಕ್ಯಾಂಪ್​ ಮೇಲೆ ಮಾಡಿದ ದಾಳಿಯಲ್ಲಿ ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದರು. ಆ ದಾಳಿ ಸಹ ಅಫ್ಜಲ್​ ಗುರುವಿನ ನೇಣಿಗೇರಿಸಿದ್ದಕ್ಕೆ ಪ್ರತೀಕಾರವಾಗಿತ್ತು ಎಂದು ತಿಳಿದುಬಂದಿದೆ.

2018ರ ಮಾರ್ಚ್​ನಲ್ಲಿಯೂ ಶೋಬಾ ಎ ತಾರುಫ್​​ನ ಪ್ರತಿನಿಧಿಗಳು 17 ದಿನಗಳ ಸಭೆ ನಡೆಸಿದ್ದರು. 50 ಉಲ್ಮಾಗಳು ಸೇರಿ 1500 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.

undefined

ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದೇ ಪವಿತ್ರ ಯುದ್ಧ ಎಂದು ಕರೆದಿದ್ದ ಜೈಷೆ, ಭಾರಿ ದಾಳಿಗೆ ನಿರಂತರವಾಗಿ ಹೊಂಚು ಹಾಕುತ್ತಲೇ ಇತ್ತು ಎಂದು ಈ ಮೂಲಕ ತಿಳಿದುಬಂದಿದೆ.

Intro:Body:

 Kannada, news,  Jaish-e-Mohammad ,  holy war against India, Masood Azhar, ಜೈಷೆ ಮೊಹಮ್ಮದ್​ , ಭಾರತದ ವಿರುದ್ಧ  ಪವಿತ್ರ ಯುದ್ಧ, ಮಸೂದ್​ ಅಜರ್, ಪುಲ್ವಾಮ

ಭಾರತದಲ್ಲಿ ದುಷ್ಕೃತ್ಯ ಎಸಗಲು ಅಂದೇ ಶಪಥ ಮಾಡಿತ್ತು ಜೈಷೆ... ಕಣ್ಮುಚ್ಚಿ ಕುಳಿತಿತ್ತೇ ಪಾಕ್?

JeM resolved to continue 'holy war against India

ನವದೆಹಲಿ: ಪುಲ್ವಾಮದಲ್ಲಿ ಪೈಶಾಚಿಕ ದಾಳಿ ನಡೆಸಿ, ವೀರ ಯೋಧರ ರಕ್ತ ಹರಿಸಿದ ಉಗ್ರ ಸಂಘಟನೆ ಜೈಷೆ ಮೊಹಮ್ಮದ್​ ಎರಡು ವರ್ಷಗಳ ಹಿಂದೆಯೇ ಭಾರತದ ವಿರುದ್ಧ ಯುದ್ಧ ನಡೆಸುವುದಾಗಿ   ಶಪಥ ಮಾಡಿತ್ತು ಎಂದು ಗುಪ್ತಚರ ವರದಿ ಹೇಳಿದೆ. 

2017 ನವೆಂಬರ್​ 27ರಂದು ಪಾಕಿಸ್ತಾನದ ಒಕಾರ ಜಿಲ್ಲೆಯಲ್ಲಿ ಜೈಷೆ ಆಯೋಜಿಸಿದ್ದ ಸಮ್ಮೇಳನದಲ್ಲಿ 2 ಸಾವಿರ ಮಂದಿ ಪಾಲ್ಗೊಂಡಿದ್ದರು. ಜೈಷೆ  ಮುಖ್ಯಸ್ಥ ಮಸೂದ್​ ಅಜರ್​ನೇ ಇದರ ಮುಂದಾಳತ್ವ ವಹಿಸಿದ್ದ.   ಜೈಷೆನ ಅಬ್ದುಲ್​ ರಾವುಫ್​ ಅಸ್ಘರ್​, ಮೊಹಮ್ಮದ್​ ಮಸ್ಕೂದ್​ ಹಾಗೂ ಅಬ್ದುಲ್​ ಮಲಿಕ್​ ತಾಹಿರ್​ ಪ್ರಧಾನ ಭಾಷಣ ಮಾಡಿದ್ದರು. ಈ ವೇಳೆ ಅವರ ಭಾಷೆಯಲ್ಲಿ ಘಾಜ್ವೆ ಇ ಹಿಂದ್​ (ಪವಿತ್ರ ಯುದ್ಧ) ನಡೆಸುವುದಾಗಿ ಶಪಥ ಮಾಡಿದ್ದರು. 

ಪಾಕ್​ನಲ್ಲಿಯೇ  ಬಹಿರಂಗವಾಗಿ ಇಷ್ಟೆಲ್ಲಾ ನಡೆಯುತ್ತಿದ್ದರೂ  ಅಲ್ಲಿನ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿತ್ತು ಎಂಬುದನ್ನು ಇದು ಸಾಬೀತುಪಡಿಸುತ್ತಿದೆ. 

ಅಂದು ಪ್ರಚೋದನಕಾರಿ ಭಾಷಣ ಮಾಡಿದ್ದ ಅಸ್ಘರ್​, ಇಂಡೋ-ಪಾಕ್​ನ ಸ್ನೇಹದಿಂದ, ದ್ವಿಪಕ್ಷೀಯ ವ್ಯಾಪಾರದಿಂದ ಜಿಹಾದ್​ಗಾಗಿ ಹಲವಾರು ಯುವಕರು ಬಲಿದಾನ ಮಾಡುವುದು ಮಾತ್ರ ನಿಲ್ಲುವುದಿಲ್ಲ ಎಂದಿದ್ದ. ಅಲ್ಲದೆ, ಇದೇ ಮಾತುಗಳು 2018ರ ಫೆಬ್ರವರಿಯಲ್ಲಿ   ಶೋಬಾ ಎ ತಾರುಫ್​ (ಪರಿಚಯ ವಿಭಾಗ) ನಡೆಸಿದ 13 ದಿನಗಳ ಸಂವಾದದಲ್ಲಿ ಸಹ ಮುಂದುವರೆದವು. ಗೋಷ್ಠಿಯಲ್ಲಿ 65 ಉಲ್ಮಾ (ಧಾರ್ಮಿಕ ಗುರುಗಳು) ಸೇರಿ 700 ಮಂದಿ ಭಾಗವಹಿಸಿದ್ದರು ಎಂದೂ ಹೇಳಲಾಗಿದೆ. 

ಅದೇ ತಿಂಗಳ 10ರಂದು ಜೈಷೆ ಉಗ್ರರು ಜಮ್ಮುವಿನ ಸಂಜ್ವಾನ ಕ್ಯಾಂಪ್​ ಮೇಲೆ  ಮಾಡಿದ ದಾಳಿಯಲ್ಲಿ  ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದರು. ಆ ದಾಳಿ ಸಹ ಅಫ್ಜಲ್​ ಗುರುವಿನ ನೇಣಿಗೇರಿಸಿದ್ದಕ್ಕೆ ಪ್ರತೀಕಾರವಾಗಿತ್ತು ಎಂದು ತಿಳಿದುಬಂದಿದೆ. 

2018ರ ಮಾರ್ಚ್​ನಲ್ಲಿಯೂ  ಶೋಬಾ ಎ ತಾರುಫ್​​ನ ಪ್ರತಿನಿಧಿಗಳು 17 ದಿನಗಳ ಸಭೆ ನಡೆಸಿದ್ದರು. 50 ಉಲ್ಮಾಗಳು ಸೇರಿ 1500 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. 

ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದೇ ಪವಿತ್ರ ಯುದ್ಧ ಎಂದು ಕರೆದಿದ್ದ  ಜೈಷೆ, ಭಾರಿ ದಾಳಿಗೆ ನಿರಂತರವಾಗಿ ಹೊಂಚು ಹಾಕುತ್ತಲೇ ಇತ್ತು ಎಂದು ಈ ಮೂಲಕ ತಿಳಿದುಬಂದಿದೆ. 

JeM resolved to continue 'holy war against India': Report

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.