ETV Bharat / bharat

JEE,NEET​ ಪರೀಕ್ಷೆ ಮುಂದೂಡಿಕೆ: ಮತ್ತೊಮ್ಮೆ ಹೊಸ ದಿನಾಂಕ ಘೋಷಿಸಿದ ಕೇಂದ್ರ ಸರ್ಕಾರ!

author img

By

Published : Jul 3, 2020, 8:56 PM IST

ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಹೀಗಾಗಿ ಇದೇ ತಿಂಗಳ ನಡೆಯಬೇಕಾಗಿದ್ದ ಜೆಇಇ ಹಾಗೂ ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳು ಮುಂದೂಡಿಕೆಯಾಗಿದ್ದು, ನೂತನ ದಿನಾಂಕ ಕೇಂದ್ರ ಸರ್ಕಾರದಿಂದ ಮತ್ತೊಮ್ಮೆ ಹೊರಬಿದ್ದಿದೆ.

JEE, NEET exams
JEE, NEET exams

ನವದೆಹಲಿ: ದೇಶದಲ್ಲಿ ನಡೆಯಬೇಕಾಗಿದ್ದ JEE,NEET ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆ ಮಾಡಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್​ ಪೋಕಾರಿಯಾ ಆದೇಶ ಹೊರಹಾಕಿದ್ದು, ಹೊಸ ದಿನಾಂಕ ಘೋಷಣೆ ಮಾಡಿದ್ದಾರೆ.

ಹೊಸದಾಗಿ ಘೋಷಣೆಯಾಗಿರುವ ದಿನಾಂಕದ ಪ್ರಕಾರ ಜೆಇಇ ಪರೀಕ್ಷೆ ಸೆಪ್ಟೆಂಬರ್​​ 1ರಿಂದ 6ರವರೆಗೆ ನಡೆಯಲಿದ್ದು, ಜೆಇಇ ಅಡ್ವಾನ್ಸ್​​ ಪರೀಕ್ಷೆ ಸೆಪ್ಟೆಂಬರ್​​ 27 ಹಾಗೂ ನೀಟ್​ ಪರೀಕ್ಷೆ ಸೆಪ್ಟೆಂಬರ್​​ 13ರಂದು ನಡೆಯಲಿದೆ.

  • Keeping in mind the safety of students and to ensure quality education we have decided to postpone #JEE & #NEET examinations. JEE Main examination will be held between 1st-6th Sept, JEE advanced exam will be held on 27th Sept & NEET examination will be held on 13th Sept. pic.twitter.com/klTjtBxvuw

    — Dr. Ramesh Pokhriyal Nishank (@DrRPNishank) July 3, 2020 " class="align-text-top noRightClick twitterSection" data=" ">

ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದ ಕಾರಣ ಎಂಜಿನಿಯರಿಂಗ್​​ ಮತ್ತು ವೈದ್ಯಕೀಯ ಕೋರ್ಸ್​ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್​​ಇಇಟಿ) ಪರೀಕ್ಷೆ ಈ ಹಿಂದೆ ಕೂಡ ಮುಂದೂಡಿಕೆಯಾಗಿದ್ದವು.

ಟ್ವೀಟರ್​ಹಲ್ಲಿ ವಿಡಿಯೋ ಹರಿಬಿಟ್ಟಿರುವ ಕೇಂದ್ರ ಸಚಿವರು, ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು, ಪೋಷಕರು ಈಗಾಗಲೇ ಸಲಹೆ ಸಹ ನೀಡಿದ್ದಾರೆ ಎಂದಿದ್ದಾರೆ. ಹೀಗಾಗಿ ಜುಲೈ 18ರಿಂದ 23ರವರೆಗೆ ನಿಗದಿಗೊಂಡಿದ್ದ ಜೆಇಇ ಪರೀಕ್ಷೆ ಹಾಗೂ ಜುಲೈ 26ರಂದು ನಡೆಯಬೇಕಾಗಿದ್ದ ನೀಟ್​ ಪರೀಕ್ಷೆ ಇದೀಗ ರದ್ಧುಗೊಂಡಿವೆ. ಈ ಸಲ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಿರ್ಧರಿಸಿದ್ದು, ಆದರೆ ಕೊರೊನಾ ವೈರಸ್​ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.