ETV Bharat / bharat

ಜೆಇಇ ಮುಖ್ಯ ಪರೀಕ್ಷೆಯ ದಿನಾಂಕ ಸಂಜೆ 6 ಗಂಟೆಗೆ ಘೋಷಣೆ : ನಿಶಾಂಕ್ ಟ್ವೀಟ್​​​

ಈ ವೆಬಿನಾರ್​ಗೂ ಮೊದಲು ಜೆಇಇ ಪ್ರವೇಶ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲಾಗುತ್ತದೆ ಎಂದು ಪೋಖ್ರಿಯಾಲ್ ಭರವಸೆ ನೀಡಿದ್ದರು. ಈ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡವೂ ಇತ್ತು. ಈಗ ಮುಖ್ಯ ಪರೀಕ್ಷೆಯ ದಿನಾಂಕ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೆ ಆರು ಗಂಟೆಗೆ ಕೇಂದ್ರ ಶಿಕ್ಷಣ ಇಲಾಖೆ ಮಾಹಿತಿ ನೀಡಲಿದೆ..

author img

By

Published : Dec 16, 2020, 12:44 PM IST

Ramesh Pokhriyal
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್

ನವದೆಹಲಿ : ಜೆಇಇ ಮುಖ್ಯ ಪರೀಕ್ಷೆ-2021ರ ದಿನಾಂಕವನ್ನು ಇಂದು ಸಂಜೆ 6 ಗಂಟೆಗೆ ಪ್ರಕಟಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಮ್ಮ ಅಧಿಕೃತ ಟ್ವಿಟರ್ ಖಾತೆಯೊಂದರಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಮುಖ್ಯ ಪರೀಕ್ಷೆಯ ದಿನಾಂಕ ಮಾತ್ರವಲ್ಲದೇ ಪರೀಕ್ಷೆಗೆ ಸಂಬಂಧಿಸಿದ ಇತರ ಮಾಹಿತಿಯನ್ನೂ ಕೂಡ ಈ ವೇಳೆ ಘೋಷಿಸುವ ಸಾಧ್ಯತೆಯಿದೆ. ಮಂಗಳವಾರ ಅಧಿಸೂಚನೆ ಹೊರಡಿಸಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೆಇಇಗೆ ಸಂಬಂಧಿಸಿದಂತೆ ಹೊಸ ಪರೀಕ್ಷಾ ಮಾದರಿ ಮತ್ತು ಈಗಾಗಲೇ ಘೋಷಿಸಿದ್ದ ಮುಖ್ಯ ಪರೀಕ್ಷೆಯ ದಿನಾಂಕವನ್ನು ರದ್ದು ಮಾಡಿತ್ತು.

ಇದನ್ನೂ ಓದಿ: ಪಿಯು ಉಪನ್ಯಾಸಕರು, ಸಿಬ್ಬಂದಿ ಹಾಜರಿ ಕಡ್ಡಾಯ : ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ

ಡಿಸೆಂಬರ್‌ 10ರಂದು ವೆಬಿನಾರ್ ನಡೆಸಿದ್ದ ರಮೇಶ್ ಪೋಖ್ರಿಯಾಲ್, ವಿವಿಧ ಹಂತಗಳಲ್ಲಿ ಜೆಇಇ ಮುಖ್ಯ ಪರೀಕ್ಷೆ ನಡೆಸುವ ವಿಚಾರವನ್ನು ಸಕಾರಾತ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದರು.

ಈ ವೆಬಿನಾರ್​ಗೂ ಮೊದಲು ಜೆಇಇ ಪ್ರವೇಶ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲಾಗುತ್ತದೆ ಎಂದು ಪೋಖ್ರಿಯಾಲ್ ಭರವಸೆ ನೀಡಿದ್ದರು. ಈ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡವೂ ಇತ್ತು. ಈಗ ಮುಖ್ಯ ಪರೀಕ್ಷೆಯ ದಿನಾಂಕ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೆ ಆರು ಗಂಟೆಗೆ ಕೇಂದ್ರ ಶಿಕ್ಷಣ ಇಲಾಖೆ ಮಾಹಿತಿ ನೀಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.