ETV Bharat / bharat

ಸಂಸದ ರವಿ ಕಿಶನ್, ನಟಿ ಕಂಗನಾ ಹೇಳಿಕೆಗೆ ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ತಿರುಗೇಟು - Kangana Ranaut

ಬಿಜೆಪಿ ಸಂಸದ ರವಿ ಕಿಶನ್​ ಹಾಗೂ ನಟಿ ಕಂಗನಾ ರನೌತ್​​​​ ವಿರುದ್ಧ ಇಂದಿನ ರಾಜ್ಯಸಭಾ ಕಲಾಪದಲ್ಲಿ ಸಂಸದೆ ಜಯಾ ಬಚ್ಚನ್ ಆಕ್ರೋಶ ಹೊರ ಹಾಕಿದ್ದಾರೆ.

Jaya Bachchan against Ravi Kishan and kangana
ರಾಜ್ಯಸಭೆ ಕಲಾಪದಲ್ಲಿ ಸಂಸದೆ ಜಯಾ ಬಚ್ಚನ್
author img

By

Published : Sep 15, 2020, 11:22 AM IST

ನವದೆಹಲಿ: ಡ್ರಗ್ಸ್​​​ ಮಾಫಿಯಾ ಕುರಿತು ನಿನ್ನೆ ಆರಂಭವಾದ ಸಂಸತ್​ ಮುಂಗಾರು ಅಧಿವೇಶನದಲ್ಲಿ ದನಿ ಎತ್ತಿದ್ದ ನಟ, ಬಿಜೆಪಿ ಸಂಸದ ರವಿ ಕಿಶನ್​ ಹಾಗೂ ಬಾಲಿವುಡ್​​​ಅನ್ನು 'ಗಟ್ಟರ್'​ (ಚರಂಡಿ) ಎಂದಿದ್ದ ನಟಿ ಕಂಗನಾಗೆ ಇಂದಿನ ರಾಜ್ಯಸಭಾ ಕಲಾಪದಲ್ಲಿ ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ತಿರುಗೇಟು ನೀಡಿದ್ದಾರೆ.

ನಿನ್ನೆಯಿಂದ ಸಂಸತ್​ ಮುಂಗಾರು ಅಧಿವೇಶನ ಆರಂಭವಾಗಿದ್ದು, ಲೋಕಸಭಾ ಕಲಾಪದ ವೇಳೆ ಮಾದಕ ವಸ್ತು ಕಳ್ಳಸಾಗಣೆ ಹಾಗೂ ಮಾದಕ ವಸ್ತು ವ್ಯಸನದ ಸಮಸ್ಯೆ ಬಗ್ಗೆ ಸಂಸದ ರವಿ ಕಿಶನ್ ಮಾತನಾಡಿದ್ದರು. ನಮ್ಮ ಚಿತ್ರರಂಗದಲ್ಲೂ ಮಾದಕ ವಸ್ತುಗಳ ವ್ಯಸನವಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಲಾಗಿದ್ದು, ಎನ್‌ಸಿಬಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಂಡು ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ರಾಜ್ಯಸಭೆ ಕಲಾಪದಲ್ಲಿ ಸಂಸದೆ ಜಯಾ ಬಚ್ಚನ್

ಇಂದಿನ ರಾಜ್ಯಸಭಾ ಕಲಾಪದಲ್ಲಿ ರವಿ ಕಿಶನ್ ಹೆಸರು ಹೇಳದೆ ಪರೋಕ್ಷವಾಗಿ ಟಾಂಗ್​ ನೀಡಿರುವ ಸಂಸದೆ ಜಯಾ ಬಚ್ಚನ್, ಚಿತ್ರರಂಗದಿಂದಲೇ ಬಂದಂತಹ ಲೋಕಸಭಾ ಸದಸ್ಯರೊಬ್ಬರು ಚಿತ್ರೋದ್ಯಮದ ವಿರುದ್ಧವಾಗಿ ಮಾತನಾಡಿರುವುದು ನಾಚಿಕೆಪಡುವ ವಿಷಯವಾಗಿದೆ. ಕೆಲವೇ ಕೆಲವು ಜನರಿಂದಾಗಿ ಇಡೀ ಚಿತ್ರೋದ್ಯಮದ ಚಿತ್ರಣವನ್ನು ನೀವು ಕೆಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ರಂಗದವರ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ಹೆಸರು ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಚಿತ್ರರಂಗ ಎಷ್ಟೋ ಜನರಿಗೆ ಹೆಸರು ಮತ್ತು ಖ್ಯಾತಿ ತಂದುಕೊಟ್ಟಿದೆ. ಆದರೂ ಅಂತವರೇ ಇದನ್ನು 'ಗಟ್ಟರ್'​ ಎಂದು ಕರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ನಟಿ ಕಂಗನಾ ರನೌತ್​​ ವಿರುದ್ಧ ಪರೋಕ್ಷವಾಗಿ ಜಯಾ ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.