ಪ್ರಸ್ತುತ ಸಾಂಕ್ರಾಮಿಕ ರೋಗದಿಂದ ವಿಶ್ವದಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ತಮ್ಮ ಕ್ಯಾಂಪಸ್‍ಗಳನ್ನು ಮುಚ್ಚುವಂತಹ ಪರಿಸ್ಥಿತಿ ಬಂದಿದೆ. ವಿವಿಧ ವಿಶ್ವವಿದ್ಯಾಲಯಗಳು ತಮ್ಮ ನಿಯಮಿತ ತರಗತಿಗಳನ್ನು ಸ್ಥಗಿತಗೊಳಿಸಿ, ಇ-ಕಲಿಕೆಗೆ ಆದ್ಯತೆ ನೀಡುತ್ತಿವೆ. ಜೈನ್(ಡೀಮ್ಡ್- ಟು- ಬಿ ಯೂನಿವರ್ಸಿಟಿ) ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಅನುಷ್ಠಾನಗೊಳಿಸುವುದರಲ್ಲಿ ಮುಂಚೂಣಿಯಲ್ಲಿದ್ದು, ಆನ್‍ಲೈನ್ ತರಗತಿಗಳನ್ನು ಹೆಚ್ಚಿಸಲಿದೆ.
ಪ್ರಾಜೆಕ್ಟ್-ಆಧರಿತ ಕಲಿಕೆ ಯೂನಿವರ್ಸಿಟಿ ಪರಿಚಯಿಸಿರುವ ಸದೃಢ ಕಾರ್ಯತಂತ್ರವಾಗಿದ್ದು, ಈ ಆನ್‍ಲೈನ್ ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕೆಯ ಫಲಿತಾಂಶದತ್ತ ಕೊಂಡೊಯ್ಯುತ್ತದೆ. ಆನ್‍ಲೈನ್ ಗ್ರೂಪ್ ಪ್ರಾಜೆಕ್ಟ್ಗಳ ಮಾದರಿ ನೈಜ ಜಗತ್ತಿನ ಬಳಕೆಯಾಗಿರುವುದರಿಂದ ಯೂನಿವರ್ಸಿಟಿ ತನ್ನ ಉದ್ಯಮ ಪಾಲುದಾರರ ಸಹಯೋಗದಲ್ಲಿ ಪ್ರಾಜೆಕ್ಟ್ಗಳಿಗೆ ಅಪ್ಲಿಕೇಷನ್‍ಗಳು ಮತ್ತು ಪ್ರೋಗ್ರಾಮ್‍ಗಳನ್ನು ಸೃಷ್ಟಿಸಿದೆ.
ಅಲ್ಲದೇ ಸಿಬ್ಬಂದಿಗೆ ಆನ್‍ಲೈನ್ ಸಹಯೋಗದಲ್ಲಿ ಸಂಯೋಜಿತ ಪ್ರಯತ್ನ ನಡೆಸಿ “ಡೆವಲಪ್‍ಮೆಂಟ್ ಆಫ್ ಇನ್ ಎಕ್ಸ್ ಪೆನ್ಸಿವ್ ಆ್ಯಂಟಿ ವೈರಲ್ ಅಂಡ್ ಆ್ಯಂಟಿ ಬ್ಯಾಕ್ಟೀರಿಯಲ್ ಫೇಸ್ ಮಾಸ್ಕ್ಸ್ ಬೈ ಯೂಸಿಂಗ್ ಕನ್ಫಾರ್ಮಲ್ ಕೋಟಿಂಗ್ ಸಿಯುಟುಒ, ಸಿಯುಒ ಮತ್ತು ಆನ್‍ಟು ವೇರಬಲ್ ಫ್ಯಾಬ್ರಿಕ್ಸ್ ಪಾಲಿಮರ್ಸ್ ಅಂಡ್ 3ಡಿ ಕಾರ್ಬೊನೇಷಿಯಸ್ ಮೆಟೀರಿಯಲ್ಸ್” ಅನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನ್ಯಾನೊಮಿಷನ್ ವಿಭಾಗಕ್ಕೆ ಸಲ್ಲಿಸಲಾಗಿದೆ.
ದೇಶದ ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ರ‍್ಯಾಂಕ್ ಪಡೆದ ಜೈನ್(ಡೀಮ್ಡ್-ಟು-ಬಿ ಯೂನಿವರ್ಸಿಟಿ) ಅತ್ಯಾಧುನಿಕ ಕ್ಯಾಂಪಸ್‍ಗಳು, 89 ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಹಯೋಗಗಳನ್ನು ಹೊಂದಿದ್ದು, 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿವರ್ಷ ಮುಂಚೂಣಿ ಕಂಪನಿಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ನೇಮಕವಾಗುತ್ತಿದ್ದಾರೆ. ಪ್ರತಿಭೆ ಅಭಿವೃದ್ಧಿಪಡಿಸುವಲ್ಲಿ ಪ್ರಸಿದ್ಧ ಇತಿಹಾಸ ಹೊಂದಿರುವ ಇದು ತನ್ನ ಅತ್ಯಾಧುನಿಕ, ಆವಿಷ್ಕಾರಕ ಉದ್ಯಮಕ್ಕೆ ಸೂಕ್ತ ಕೋರ್ಸ್‍ಗಳಿಗೆ ಖ್ಯಾತಿ ಪಡೆದಿದೆ.