ETV Bharat / bharat

ಜಮ್ಮು ಕಾಶ್ಮೀರ ಪೊಲೀಸ್ ಆಸ್ಪತ್ರೆಯ ಇಬ್ಬರಿಗೆ ಕೊರೊನಾ ಸೋಂಕು.. - ಕೊರೊನಾ ಸೋಂಕು

ಪರೀಕ್ಷಾ ಫಲಿತಾಂಶಗಳು ಬಂದ ನಂತರ ಆಸ್ಪತ್ರೆ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವೈದ್ಯಕೀಯ ಅಧೀಕ್ಷಕ ಡಾ. ಬಿಲಾಲ್ ರಾಜಾ ಈಟಿವಿ ಭಾರತಗೆ ತಿಳಿಸಿದ್ದಾರೆ.

J&K: Police hospital shut down after doctors tests positive for COVID-19
ಜಮ್ಮು ಕಾಶ್ಮೀರ ಪೊಲೀಸ್ ಆಸ್ಪತ್ರೆಯ ಇಬ್ಬರಿಗೆ ಕೊರೊನಾ ಸೋಂಕು
author img

By

Published : Jun 6, 2020, 9:49 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ನಗರದ ಬಟಮಾಲೂ ಪ್ರದೇಶದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಆಸ್ಪತ್ರೆಯ ವೈದ್ಯರಿಬ್ಬರಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಹೊರರೋಗಿ ವಿಭಾಗದಲ್ಲಿ (ಒಪಿಡಿ) ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ದಂತವೈದ್ಯರು ಸೋಂಕಿಗೀಡಾಗಿದ್ದು, ಆಸ್ಪತ್ರೆಯನ್ನು ನಿನ್ನೆ ಸಂಜೆ ಮುಚ್ಚಲಾಯಿತು. ಸದ್ಯ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಮತ್ತು ವೈದ್ಯರ ಕೋವಿಡ್​-19 ಸ್ಕ್ರೀನಿಂಗ್ ನಡೆಯುತ್ತಿದೆ. ಪರೀಕ್ಷಾ ಫಲಿತಾಂಶಗಳು ಬಂದ ನಂತರ ಆಸ್ಪತ್ರೆ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವೈದ್ಯಕೀಯ ಅಧೀಕ್ಷಕ ಡಾ. ಬಿಲಾಲ್ ರಾಜಾ ಈಟಿವಿ ಭಾರತಗೆ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರ ಸಂಜೆವರೆಗೂ 3324 ಪಾಸಿಟಿವ್‌ ಪ್ರಕರಣ ದಾಖಲಾಗಿದ್ದವು. ಅದರಲ್ಲಿ 2202 ಸಕ್ರಿಯ ಪ್ರಕರಣಗಳಿವೆ. ಹಾಗೇ 1086 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 36 ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.