ಜಮ್ಮು: ಕೋಳಿ ಆಮದಿನ ಮೇಲೆ ಹೇರಿದ್ದ ನಿಷೇಧವನ್ನು ಜಮ್ಮು ಕಾಶ್ಮೀರ ಸರ್ಕಾರ ತೆಗೆದು ಹಾಕಿದೆ. ಆದರೆ ಆಮದು ಮಾಡಿದ ಕೋಳಿಗಳು ಹಕ್ಕಿಜ್ವರದಿಂದ ಮುಕ್ತವಾಗಿವೆ ಎಂಬ ಪ್ರಮಾಣ ಪತ್ರ ಹೊಂದಿರಬೇಕೆಂಬ ಷರತ್ತು ವಿಧಿಸಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಇದುವರೆಗೂ ಯಾವುದೇ ಹಕ್ಕಿಜ್ವರ ಪ್ರಕರಣ ಕಂಡುಬಂದಿಲ್ಲ. ಹೀಗಿದ್ದೂ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೋಳಿ ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಿತ್ತು.
ಸಂಸ್ಕರಿಸದ ಕೋಳಿ ಮಾಂಸ ಒಳಗೊಂಡಂತೆ ಜೀವಂತ ಪಕ್ಷಿಗಳು, ಫಾರಂ ಕೋಳಿಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹಕ್ಕಿಜ್ವರ ಇರುವ ಪ್ರದೇಶದ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಿದೆ.
ಕೋಳಿ ಸಾಗಿಸುವ ಪ್ರತಿ ವಾಹನದಿಂದ ಮಾದರಿಗಳನ್ನು ಪರೀಕ್ಷೆಗಾಗಿ ಕೇಂದ್ರವನ್ನು ಸ್ಥಾಪಿಸುವಂತೆ ಸ್ಥಳೀಯ ಪಶುಸಂಗೋಪನಾ ಇಲಾಖೆಗೆ ಆದೇಶಿಸಿದೆ.