ETV Bharat / bharat

ಇಂದು ಹೊರ ಬೀಳಲಿದೆ ಜಮ್ಮು ಕಾಶ್ಮೀರದ ಡಿಡಿಸಿ ಚುನಾವಣೆ ಫಲಿತಾಂಶ - ಜಮ್ಮು ಕಾಶ್ಮೀರದ ಡಿಡಿಸಿ ಚುನಾವಣೆ ಫಲಿತಾಂಶ

2019 ರ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸಾಂವಿಧಾನಿಕ ಸ್ಥಾನಮಾನವಾದ ಆರ್ಟಿಕಲ್‌ 370ಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಈ ಮಹತ್ವದ ಬೆಳವಣಿಗೆಯ ಬಳಿಕ ನಡೆದ ಮೊದಲ ಡಿಡಿಸಿ (ಜಿಲ್ಲಾ ಅಭಿವೃದ್ಧಿ ಮಂಡಳಿ) ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

J&K DDC polls
ಜೆ & ಕೆ ಡಿಡಿಸಿ ಚುನಾವಣೆ
author img

By

Published : Dec 22, 2020, 6:36 AM IST

ಜಮ್ಮು ಕಾಶ್ಮೀರ: ಇಲ್ಲಿನ 280 ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಸ್ಥಾನಗಳಿಗೆ ಸ್ಪರ್ಧಿಸಿದ 450 ಮಹಿಳೆಯರು ಸೇರಿದಂತೆ 2,178 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಬೆಳಿಗ್ಗೆ 9 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಫಲಿತಾಂಶಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಕೆ.ಕೆ.ಶರ್ಮಾ ತಿಳಿಸಿದ್ದಾರೆ.

ಈ ಚುನಾವಣೆ ಒಟ್ಟು ಎಂಟು ಹಂತಗಳಲ್ಲಿ ನಡೆದಿದೆ. ಸರಾಸರಿ 51.42% ಮತದಾನವಾಗಿದೆ. ಇವತ್ತು ಪೋಲಿಂಗ್‌ ಆಗಿರುವ 30,00,000 ಮತಗಳನ್ನು ಎಣಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಓದಿ: ಮೊದಲ ಹಂತದ ಗ್ರಾಪಂ ಚುನಾವಣೆಗೆ ಕ್ಷಣಗಣನೆ: ಕಣದಲ್ಲಿ 1,17,383 ಅಭ್ಯರ್ಥಿಗಳು

ವಿಶೇಷ ಸಾಂವಿಧಾನಿಕ ಸ್ಥಾನಮಾನ ರದ್ದತಿ ಬಳಿಕ ಪಂಚಾಯತ್‌ ರಾಜ್ ವ್ಯವಸ್ಥೆಗೆ ನಡೆದ ಮೊದಲ ಚುನಾವಣೆ ಇದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.