ಜಮ್ಮು: ಜಮ್ಮು - ಕಾಶ್ಮೀರದ ಬಿಜೆಪಿ ಘಟಕವು ಸೋಮವಾರ ಕೊರೊನಾ ಸಮರಕ್ಕಾಗಿ ಸ್ಥಾಪಿಸಿರುವ ಪಿಎಂ ಕೇರ್ಸ್ ಫಂಡ್ಗೆ ಮತ್ತೆ 1 ಕೋಟಿ ರೂ.ಗಳನ್ನು ದೇಣಿಗೆ ನೀಡಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಲಾಕ್ಡೌನ್ ಪ್ರಾರಂಭವಾದಾಗಿನಿಂದ ಇಲ್ಲಿನ ಬಿಜೆಪಿ ಘಟಕ ಸಂಗ್ರಹ ಮಾಡಿದ ಐದನೇ ಕಂತು ಇದಾಗಿದ್ದು, ಘಟಕವು ಪಿಎಂ ಕೇರ್ಸ್ ನಿಧಿಗೆ ಒಟ್ಟು 5 ಕೋಟಿ ರೂ.ಗೆ ದೇಣಿಗೆಯನ್ನು ನೀಡಿದೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ರೈನಾ 1 ಕೋಟಿ ರೂ.ಗಳ ಚೆಕ್ಅನ್ನು ಇಲ್ಲಿನ ವಲಯ ಪ್ರಧಾನ ಕಚೇರಿಯಲ್ಲಿನ ಜೆ & ಕೆ ಬ್ಯಾಂಕ್ ಅಧ್ಯಕ್ಷ ಆರ್ ಕೆ ಚಿಬ್ಬರ್ ಅವರಿಗೆ ಹಸ್ತಾಂತರಿಸಿದರು.
ಮಾಜಿ ಶಾಸಕರು, ಸರ್ಕಾರಿ ನೌಕರರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು, ಪುರುಷರು, ಮಹಿಳೆಯರು, ಮಕ್ಕಳು, ಸಾಮಾನ್ಯ ನಾಗರಿಕರು ಸೇರಿದಂತೆ ಪಕ್ಷದ ಕಾರ್ಯಕರ್ತರಿಂದ ಈ ದೇಣಿಗೆಯನ್ನು ಸ್ವೀಕರಿಸಲಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಪಿಎಂ ಕೇರ್ಸ್ ನಿಧಿಗೆ ಕೊಡುಗೆ ನೀಡಿದವರಿಗೆ ಧನ್ಯವಾದ ಹೇಳಿದ ರೈನಾ, ಈ ನಿಧಿಗೆ ದೇಣಿಗೆ ರೂಪದಲ್ಲಿ ಇದುವರೆಗೆ 5 ಕೋಟಿ ರೂ.ಗಳ ಸಂಗ್ರಹವನ್ನು ಮಾಡಿರುವುದು ತಮ್ಮ ಘಟಕಕ್ಕೆ ಹೆಮ್ಮೆ ತರುವ ವಿಷಯವಾಗಿದೆ ಎಂದರು.