ETV Bharat / bharat

ಹಳೇ ಡ್ರೆಸ್​ನಲ್ಲೇ ಭಾರತಕ್ಕೆ ಬಂದ ಟ್ರಂಪ್​ ಮಗಳು... ಈ ಉಡುಪಿನಲ್ಲಿ ಯಾವಾಗ ಕಾಣಿಸಿಕೊಂಡಿದ್ರು ನಿಮ್ಗೆ ಗೊತ್ತಾ!? - ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕುಟುಂಬ ಸಮೇತವಾಗಿ ಭಾರತಕ್ಕೆ ಆಗಮಿಸಿದ್ದು, ಮಗಳು ಇವಾಂಕಾ ಟ್ರಂಪ್ ಕೂಡ ಆಗಮಿಸಿದ್ದಾರೆ.

Ivanka Trump repeating dress in Second time

author img

By

Published : Feb 24, 2020, 7:25 PM IST

ಅಹ್ಮದಾಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ ಮಗಳು ಇವಾಂಕಾ ಟ್ರಂಪ್​ ಕೂಡ ಭಾರತದ ಪ್ರವಾಸದಲ್ಲಿದ್ದಾರೆ. ತುಂಬಾ ಸರಳವಾಗಿ ಡ್ರೆಸ್​ ಮಾಡಿಕೊಂಡು ಆಗಮಿಸಿರುವ ಟ್ರಂಪ್​ ಮಗಳು ಈ ಹಿಂದೆ ಸಹ ಇದೇ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು.

ಹಳೆ ಡ್ರೆಸ್​ನಲ್ಲೇ ಭಾರತಕ್ಕೆ ಬಂದ ಟ್ರಂಪ್​ ಮಗಳು

2019ರಲ್ಲಿ ಇವಾಂಕಾ ಟ್ರಂಪ್​​ ಅರ್ಜೆಂಟೈನಾ ಪ್ರವಾಸ ಕೈಗೊಂಡಿದ್ದ ವೇಳೆ ಇದೇ ಪ್ರಾಕ್​ ಸೂಟ ಧರಿಸಿಕೊಂಡು ಫೋಟೋಗೆ ಪೋಸ್​ ನೀಡಿದ್ದರು. ಇದೀಗ ಮತ್ತೊಮ್ಮೆ ಅದೇ ಡ್ರೆಸ್​​ನಲ್ಲಿ ಇವಾಂಕಾ ಕಾಣಿಸಿಕೊಂಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಡ್ರೆಸ್​ನ ಬೆಲೆ 1,71,333 ರೂಪಾಯಿ ಎಂದು ಹೇಳಲಾಗಿದ್ದು, ಅರ್ಜೆಂಟೈನಾ ಪ್ರವಾಸದಲ್ಲಿದ್ದ ವೇಳೆ ಸಹ ಇದೇ ಉಡುಪು ಅವರು ಹಾಕಿಕೊಂಡಿದ್ದರು. ಇನ್ನು 2017ರ ನವೆಂಬರ್​ ತಿಂಗಳಲ್ಲಿ ಇವಾಂಕಾ ಭಾರತದ ಪ್ರವಾಸ ಕೈಗೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹ. ವಿಶ್ವ ಮಹಿಳಾ ಉದ್ಯಮಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಇವಾಂಕಾ ಟ್ರಂಪ್​ ಭಾರತಕ್ಕೆ ಆಗಮಿಸಿದ್ದರು. ಹೈದರಾಬಾದ್​ನಲ್ಲಿ ನಡೆದ ದೊಡ್ಡ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಯುವ ಮಹಿಳಾ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.

ಅಂದು ಅವರು ಹೈದರಾಬಾದ್​ನ ಪ್ರತಿಷ್ಠಿತ ಫಲಕ್​ನಾಮಾ ಹೋಟೆಲ್​ನಲ್ಲಿ ತಂಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.