ನವದೆಹಲಿ: ಇಡೀ ದೇಶವೇ ಕಾತುರದಿಂದ ನೋಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.43ಕ್ಕೆ ರಾಕೆಟ್ ನಭಕ್ಕೆ ಜಿಗಿಯಲಿದೆ.
ಎರಡನೇ ಬಾರಿಗೆ ಚಂದ್ರನ ಅಂಗಳಕ್ಕೆ ಕಾಲಿಡಲು ಸಜ್ಜಾಗಿರುವ ಇಸ್ರೋ ಪೂರ್ವ ನಿಗದಿಯಂತೆ ಜುಲೈ 15ರ ರಾತ್ರಿ 2.51ರ ಸುಮಾರಿಗೆ ಉಡಾವಣೆಗೊಳ್ಳಬೇಕಿತ್ತು. ಉಡ್ಡಯನ ಸಮಯದ ಒಂದು ಗಂಟೆಗೂ ಮುನ್ನ ತಾಂತ್ರಿಕ ದೋಷ ಕಂಡುಬಂದ ಕಾರಣ ಮುಂದೂಡಲಾಗಿತ್ತು.
-
Indian Space Research Organisation (ISRO) to launch #Chandrayaan2 at 2:43 pm today from the Satish Dhawan Space Centre at Sriharikota. pic.twitter.com/ic4dvNUD1Y
— ANI (@ANI) July 22, 2019 " class="align-text-top noRightClick twitterSection" data="
">Indian Space Research Organisation (ISRO) to launch #Chandrayaan2 at 2:43 pm today from the Satish Dhawan Space Centre at Sriharikota. pic.twitter.com/ic4dvNUD1Y
— ANI (@ANI) July 22, 2019Indian Space Research Organisation (ISRO) to launch #Chandrayaan2 at 2:43 pm today from the Satish Dhawan Space Centre at Sriharikota. pic.twitter.com/ic4dvNUD1Y
— ANI (@ANI) July 22, 2019
ಚಂದ್ರಯಾನ-2 ವಿಕ್ರಂ ಲ್ಯಾಂಡರ್ ನೌಕೆ ಮತ್ತು ಪ್ರಜ್ಞಾನ್ ರೋವರ್ ನೌಕೆಯನ್ನು ಒಳಗೊಂಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2.43ಕ್ಕೆ ಚಂದ್ರಯಾನ-2ರ ಬಾಹುಬಲಿ ರಾಕೆಟ್ ನಭಕ್ಕೆ ಹಾರಲಿದೆ. ಚಂದ್ರಯಾನ-2 ಉಡಾವಣೆಗೆ ಈಗಾಗಲೇ ನಡೆಸಲಾದ ರಿಹರ್ಸಲ್ ಯಶಸ್ವಿಯಾಗಿದೆ.