ETV Bharat / bharat

'IN-SPAce' ನೇತೃತ್ವ ವಹಿಸಲು ಕೇಂದ್ರಕ್ಕೆ ಇಸ್ರೋದ ಮೂವರು ವಿಜ್ಞಾನಿಗಳ ಹೆಸರು ಶಿಫಾರಸು - ISRO senior scientists refered for IN-SPACe chairman position

ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಖಾಸಗಿ ಕೈಗಾರಿಕೆಗಳ ಭಾಗವಹಿಸುವಿಕೆಯನ್ನು ನಿಯಂತ್ರಿಸಲು ಸ್ಥಾಪನೆಯಾಗಿರುವ 'IN-SPACe' ನ ಅಧ್ಯಕ್ಷ ಸ್ಥಾನಕ್ಕೆ ಇಸ್ರೋದ ಮೂವರು ಹಿರಿಯ ವಿಜ್ಞಾನಿಗಳ ಹೆಸರು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ.

Isro sent three names for inspace chairman position
ಇಸ್ರೋದ ಮೂವರು ವಿಜ್ಞಾನಿಗಳ ಹೆಸರು ಶಿಫಾರಸು
author img

By

Published : Nov 28, 2020, 6:59 AM IST

ಬೆಂಗಳೂರು: ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (IN-SPACe) ಅಧ್ಯಕ್ಷ ಸ್ಥಾನಕ್ಕಾಗಿ ಇಸ್ರೋದ ಮೂವರು ನಿರ್ದೇಶಕ ಹಂತದ ಹಿರಿಯ ವಿಜ್ಞಾನಿಗಳ ಹೆಸರುಗಳನ್ನು ಪ್ರಧಾನಮಂತ್ರಿಗಳ ಕಚೇರಿಗೆ ಕಳುಹಿಸಲಾಗಿದೆ.

ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಖಾಸಗಿ ಕೈಗಾರಿಕೆಗಳ ಭಾಗವಹಿಸುವಿಕೆ ನಿಯಂತ್ರಿಸುವಲ್ಲಿ IN-SPACe ಪ್ರಮುಖ ಪಾತ್ರ ವಹಿಸುತ್ತದೆ.

ವಿಎಸ್‌ಎಸ್‌ಸಿ (ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ) ನಿರ್ದೇಶಕ ಎಸ್.ಸೋಮನಾಥ್, ಯು ಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಪಿ. ಕುನ್ಹಿಕೃಷ್ಣನ್​​ ಇಸ್ರೋ ಇಂಟೀರಿಯಲ್​ ವ್ಯವಸ್ಥೆಗಳ ಘಟಕ ನಿರ್ದೇಶಕ ಶ್ಯಾಮ್ ದಯಾಳ್ ದೇವ್ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಶೀಘ್ರದಲ್ಲೇ ಕೇಂದ್ರವು ನೇಮಕಾತಿ ಪ್ರಕಟಿಸಲಿದೆ ಎಂದು ಈಟಿವಿ ಭಾರತ್‌ಗೆ ಮೂಲಗಳು ತಿಳಿಸಿವೆ.

ಖಾಸಗಿ ಉದ್ಯಮ, ಅಕಾಡೆಮಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಹೊಂದಿರುವ ಐಎನ್ - ಸ್ಪೇಸ್ ಮಂಡಳಿಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಪ್ರಯತ್ನಗಳನ್ನು ಉತ್ತೇಜಿಸಲು ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಈ ವರ್ಷದ ಆರಂಭದಲ್ಲಿ ಐಎನ್ - ಸ್ಪೇಸ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು, ಮತ್ತು ಸ್ವಾಯತ್ತ ನೋಡಲ್ ಏಜೆನ್ಸಿ ಐಎನ್ -ಸ್ಪೇಸ್ ಅನ್ನು ಸಿಂಗಲ್​ ವಿಂಡೋ ನೋಡಲ್ ಏಜೆನ್ಸಿಯಾಗಿ ಸ್ಥಾಪಿಸಲಾಗುವುದು, ತನ್ನದೇ ಆದ ಕೇಡರ್​ನೊಂದಿಗೆ, ಇದು ಖಾಸಗಿ ಕೈಗಾರಿಕೆಗಳು ಮತ್ತು ಸ್ಟಾರ್ಟ್ ಅಪ್​ಗಳಿಗೆ ಇಸ್ರೋನ ಬಾಹ್ಯಾಕಾಶ ನೌಕಾಯಾನದ ಭಾಗವಹಿಸುವಿಕೆ ಮತ್ತು ಸಹಯೋಗಕ್ಕೆ ಅನುಮತಿ ನೀಡುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.