ETV Bharat / bharat

ವಿಕ್ರಮ್ ಲ್ಯಾಂಡರ್​​​​ ಸಂಪೂರ್ಣ ಸುರಕ್ಷಿತ... ಆದರೆ ಸಂಪರ್ಕ..?

ಸದ್ಯ ಸಂಪರ್ಕ ಕಡಿತಗೊಳಿಸಿರುವ ವಿಕ್ರಮ್ ಲ್ಯಾಂಡರ್ ಪತ್ತೆಗೆ ಇಸ್ರೋ ವಿಜ್ಞಾನಿ ಬಳಗ ಸರ್ವಪ್ರಯತ್ನ ನಡೆಸುತ್ತಿದೆ. ರೋವರ್​ ಕೇವಲ ಹದಿನಾಲ್ಕು ದಿನ ಮಾತ್ರವೇ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಇಸ್ರೋ ಬಳಿ 12 ದಿನ ಬಾಕಿ ಉಳಿದಿದೆ.

ವಿಕ್ರಮ್ ಲ್ಯಾಂಡರ್​​​​
author img

By

Published : Sep 9, 2019, 2:34 PM IST

ಬೆಂಗಳೂರು: ಚಂದ್ರಯಾನ-2 ಕೊನೇ ಕ್ಷಣದಲ್ಲಿ ಲ್ಯಾಂಡರ್ ಸಂಪರ್ಕ ಕಡಿತಗೊಂಡು ಯೋಜನೆ ಶೇ.ನೂರರಷ್ಟು ಯಶಸ್ಸು ಸಾಧಿಸುವಲ್ಲಿ ವಿಫಲವಾಗಿತ್ತು. ಆದರೆ ವಿಜ್ಞಾನಿಗಳು ಸಂಪರ್ಕವನ್ನು ಮತ್ತೆ ಸಾಧಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ವಿಕ್ರಮ್ ಲ್ಯಾಂಡರ್ ಸಂಪೂರ್ಣ ಸುರಕ್ಷಿತವಾಗಿದೆ. ಆದರೆ ಲ್ಯಾಂಡರ್ ನಿರೀಕ್ಷೆಯಂತೆ ಸಾಫ್ಟ್ ಲ್ಯಾಂಡ್ ಆಗಿಲ್ಲ. ಆದರೂ ವಿಕ್ರಮ್ ಲ್ಯಾಂಡರ್​ಗೆ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೋ ಮೂಲಗಳು ಮಾಹಿತಿ ನೀಡಿವೆ. ಲ್ಯಾಂಡರ್ ಜೊತೆಗಿನ ಸಂಪರ್ಕ ಮಾತ್ರ ಇನ್ನೂ ಸಾಧ್ಯವಾಗಿಲ್ಲ.

ಇಸ್ರೋದಿಂದ ಗುಡ್ ನ್ಯೂಸ್! ವಿಕ್ರಮ್ ಲ್ಯಾಂಡರ್ ಪತ್ತೆ!

ಸ್ವಯಂಚಾಲಿತವಾಗಿ ಚಂದ್ರನ ಮೇಲ್ಮೈ ಯನ್ನು ಸುರಕ್ಷಿತವಾಗಿ ಇಳಿಯಬೇಕಿದ್ದ ವಿಕ್ರಮ್ ಲ್ಯಾಂಡರ್ 2.1ಕಿ.ಮೀ ಬಾಕಿ ಇರುವ ವೇಳೆ ಸಂಪರ್ಕ ಕಡಿತಗೊಂಡಿತ್ತು. ಆದರೆ ಚಂದ್ರನಿಂದ ನೂರು ಕಿ.ಮೀ ದೂರದಲ್ಲಿರುವ ಆರ್ಬಿಟರ್, ವಿಕ್ರಮ್ ಲ್ಯಾಂಡರ್ ಥರ್ಮಲ್ ಫೋಟೋವನ್ನು ಇಸ್ರೋ ಸ್ಟೇಷನ್​ಗೆ ಭಾನುವಾರ ಕಳುಹಿಸಿತ್ತು. ಫೋಟೋ ಹಾಗೂ ಬೆಳವಣಿಗೆ ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಹೊಸ ಆಶಾವಾದ ಮೂಡಿಸಿತ್ತು.

ಚಂದ್ರಯಾನ -2 ವಿಕ್ರಮ್​​​​ ಲ್ಯಾಂಡರ್​​ ಜೊತೆ ಸಂವಹನ ಸಾಧಿಸುವುದು ತುಸು ಕಷ್ಟವೇ ಸರಿ ಎಂದು ಚಂದ್ರಯಾನ ಮಿಷನ್​ -1ರ ವಿಜ್ಞಾನಿಗಳು ಅಭಿಪ್ರಯಾಪಟ್ಟಿದ್ದಾರೆ.

ಇನ್ನು 12 ದಿನಗಳ ಕಾಲ ವಿಕ್ರಂನ ಪತ್ತೆ ಹಾಗೂ ಸಂವಹನ ಸಾಧಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸತತ ಪರಿಶ್ರಮ ಹಾಕಲು ಸರ್ವಸನ್ನದ್ಧವಾಗಿದೆ.

ಇನ್ನು ವಾಸ್ತವ ಬೇರೆ ಇದೆ ಅಂತಾ ಚಂದ್ರಯಾನ ಮಿಷನ್​ ಮುಂಚೂಣಿ ತಂತ್ರಜ್ಞರಾಗಿದ್ದ ಮೈಲ್​ಸ್ವಾಮಿ ಅಣ್ಣಾದುರೈ. ಇವರು ಚಂದ್ರಯಾನ 1ರ ಪ್ರಾಜೆಕ್ಟ್​ ನಿರ್ದೇಶಕ. ವಿಕ್ರಮ್ ಜತೆ ಸಂಪರ್ಕ ಅಸಾಧ್ಯ, ಒಂದೊಮ್ಮೆ ಸಾಧ್ಯವಾಗುವುದಾದರೂ ಅದು ಒನ್​ ವೇ ಸಂಪರ್ಕ ಅಷ್ಟೇ ಸಾಧ್ಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-2 ಶೇ. 95% ಸುರಕ್ಷಿತ.. ಆರ್ಬಿಟರ್​ 1 ವರ್ಷ ಚಂದಿರನ ಫೋಟೋ ಕಳಿಸಲಿದೆ.. ಇಸ್ರೋ ಸಂತಸ!

ಇನ್ನು ಈ ಬಗ್ಗೆ ಭಾನುವಾರ ಹೇಳಿಕೆ ನೀಡಿದ್ದ ಇಸ್ರೋ ಅಧ್ಯಕ್ಷ ಕೆ ಸಿವನ್​, ಆರ್ಬಿಟರ್​ ಅತ್ಯಂತ ಸುರಕ್ಷಿತವಾಗಿದ್ದು, ಅದು ಚಂದ್ರನನ್ನು ನಿಖರವಾಗಿ ಸುತ್ತುತ್ತಿದೆ. ಅಷ್ಟೇ ಅಲ್ಲ ಶಶಿಯ ಅಂಗಳದಲ್ಲಿ ವಿಕ್ರಮ್​ ಎಲ್ಲಿ ಅಡಗಿ ಕುಳಿತಿದ್ದಾನೆ ಎಂಬುದುನ್ನ ಹೆಕ್ಕಿ ತೆಗೆದಿದೆ. ಅಷ್ಟೇ ಅಲ್ಲ ವಿಕ್ರಮನ ಜತೆ ಸಂಪರ್ಕಕ್ಕೆ ತೀವ್ರ ಪ್ರಯತ್ನ ನಡೆಸಿದೆ ಇದಕ್ಕೆ ಸಮಯ ತಗುಲುತ್ತದೆ ಎಂದು ಹೇಳಿದ್ದರು.

ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನಕ್ಕೆ ಕೈಹಾಕಿ ಭಾಗಶಃ ಯಶಸ್ಸು ಸಾಧಿಸಿದ ರಾಷ್ಟ್ರ ಭಾರತ ಎನ್ನುವುದೇ ಇಸ್ರೋ ಹೆಗ್ಗಳಿಕೆ.

Intro:Body:

ವಿಕ್ರಂ ಲ್ಯಾಂಡರ್​​​​ ಸಂಪರ್ಕ ಕಷ್ಟ ಕಷ್ಟ... ಇಸ್ರೋ ಮಾಜಿ ತಂತ್ರಜ್ಞರ ಅಭಿಮತ 

ಬೆಂಗಳೂರು:   ಚಂದ್ರಯಾನ -2 ದ ವಿಕ್ರಂ ಲ್ಯಾಂಡರ್​​ ಜೊತೆ ಸಂವಹನ ಸಾಧಿಸುವುದು ತುಸು ಕಷ್ಟವೇ ಸರಿ ಎಂದು ಚಂದ್ರಯಾನ ಮಿಷನ್​ -1 ರ ಮುಂಚೂಣಿ ತಂತ್ರಜ್ಞರು ಹೇಳಿದ್ದಾರೆ.  

ಚಂದ್ರಯಾನ -2 ಲ್ಯಾಂಡರ್​ ಸಂಪರ್ಕ ಅಸಾಧ್ಯ. ಶನಿವಾರ 1.43ಕ್ಕೆ ಸಾಫ್ಟ್​​ ಲ್ಯಾಂಡಿಂಗ್​ ಆಗುವ ಮುನ್ನ  ಕೇವಲ 2.1 ಕಿ.ಮೀ ಸಮೀಪದಲ್ಲಿ  ಇಸ್ರೋದಿಂದ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಚಂದ್ರಯಾನ ಶೇ 95 ರಷ್ಟು ಸಕ್ಸಸ್​ ಆದ್ರೂ ಸಾಫ್ಟ್​ ಲ್ಯಾಂಡಿಂಗ್​ ಮಾಡುವಲ್ಲಿ ಇಸ್ರೋ ಎಡವಿತ್ತು.  ಇದೀಗ ಸುಮಾರು 15 ಗಂಟೆಗಳ ಬಳಿಕ ವಿಕ್ರಂ ಲ್ಯಾಂಡರ್​ ಎಲ್ಲಿದೆ ಎಂಬುದನ್ನು ಆರ್ಬಿಟರ್​ ಪತ್ತೆ ಹಚ್ಚಿದೆ.

ಆದರೆ ಲ್ಯಾಂಡರ್​​ ಸಂಪರ್ಕಕ್ಕೆ ಇಸ್ರೋ ನಿರಂತರ ಶ್ರಮ ಹಾಕುತ್ತಿದೆ. ಇನ್ನು 14 ದಿನಗಳ ಕಾಲ  ವಿಕ್ರಂನ ಪತ್ತೆ ಹಾಗೂ ಸಂವಹನ ಸಾಧಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸತತ ಪರಿಶ್ರಮ ಹಾಕಲು ಸರ್ವ ಸನ್ನದ್ಧವಾಗಿದೆ.

ಇನ್ನು ವಾಸ್ತವ ಬೇರೆ ಇದೆ ಅಂತಾ ಚಂದ್ರಯಾನ ಮಿಷನ್​ ಮುಂಚೂಣಿ ತಂತ್ರಜ್ಞರಾಗಿದ್ದ ಮೈಲ್​ಸ್ವಾಮಿ ಅಣ್ಣಾದುರೈ.  ಇವರು ಚಂದ್ರಯಾನ 1 ರ ಪ್ರಾಜೆಕ್ಟ್​ ನಿರ್ದೇಶಕ.   ವಿಕ್ರಂ ಜತೆ ಸಂಪರ್ಕ ಅಸಾಧ್ಯ, ಒಂದೊಮ್ಮೆ ಸಾಧ್ಯವಾಗುವುದಾದರೂ ಅದು ಒನ್​ ವೇ ಸಂಪರ್ಕ ಅಷ್ಟೇ ಸಾಧ್ಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಇನ್ನು ಈ ಬಗ್ಗೆ ಭಾನುವಾರ ಹೇಳಿಕೆ ನೀಡಿದ್ದ ಇಸ್ರೋ ಅಧ್ಯಕ್ಷ ಕೆ ಸಿವನ್​, ಆರ್ಬಿಟರ್​ ಅತ್ಯಂತ ಸುರಕ್ಷಿತವಾಗಿದ್ದು,  ಅದು ಚಂದ್ರನನ್ನು ನಿಖರವಾಗಿ ಸುತ್ತುತ್ತಿದೆ.  ಅಷ್ಟೇ ಅಲ್ಲ ಶಶಿಯ ಅಂಗಳದಲ್ಲಿ ವಿಕ್ರಂ ಎಲ್ಲಿ ಅಡಗಿ ಕುಳಿತಿದ್ದಾನೆ ಎಂಬುದುನ್ನ ಹೆಕ್ಕಿ ತೆಗೆದಿದೆ.  ಅಷ್ಟೇ ಅಲ್ಲ ವಿಕ್ರಮನ ಜತೆ ಸಂಪರ್ಕಕ್ಕೆ ತೀವ್ರ ಪ್ರಯತ್ನ ನಡೆಸಿದೆ ಇದಕ್ಕೆ ಸಮಯ ತಗುಲುತ್ತದೆ ಎಂದು ಹೇಳಿದ್ದರು. 

ಭಾರತ ಮಾತ್ರವೇ ಲ್ಯಾಂಡರ್​, ರೋವರ್​ ಮತ್ತು ಆರ್ಬಿಟರ್​ ಮೂಲಕ ಚಂದ್ರನ ದಕ್ಷಿಣ ಅಂಗಳದಲ್ಲಿ ಸಾಫ್ಟ್​ ಲ್ಯಾಂಡ್​ ಮಾಡಲು ಮುಂದಾದ ರಾಷ್ಟ್ರವಾಗಿದೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.